Canara Bank Minimum Balance – ನೀವು ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ? ಹಾಗಿದ್ದರೆ, ನಿಮಗೊಂದು ಸೂಪರ್ ಗುಡ್‌ನ್ಯೂಸ್ ಇಲ್ಲಿದೆ! ಜೂನ್ 1, 2025 ರಿಂದ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಒಂದು ಮಹತ್ವದ ನಿಯಮವನ್ನು ಬದಲಾಯಿಸಿದೆ. ಇನ್ನು ಮುಂದೆ ನಿಮ್ಮ ಉಳಿತಾಯ ಖಾತೆಯಲ್ಲಿ (Savings Account) ಕನಿಷ್ಠ ಬ್ಯಾಲೆನ್ಸ್ (Minimum Balance) ಇಲ್ಲದಿದ್ದರೂ ಚಿಂತೆ ಬೇಡ. ಕೆನರಾ ಬ್ಯಾಂಕ್ ಈ ಶುಲ್ಕವನ್ನು ರದ್ದುಗೊಳಿಸಿದೆ!
Canara Bank Minimum Balance – ಕನಿಷ್ಠ ಬ್ಯಾಲೆನ್ಸ್ ದಂಡದಿಂದ ಮುಕ್ತಿ: ಏನು ಈ ಹೊಸ ನಿಯಮ?
ಸಾಮಾನ್ಯವಾಗಿ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಹೊಂದಿರುವವರು ನಿರ್ದಿಷ್ಟ ಮೊತ್ತದ ಕನಿಷ್ಠ ಬ್ಯಾಲೆನ್ಸ್ ಅನ್ನು ತಮ್ಮ ಖಾತೆಯಲ್ಲಿ ಇಡಲೇಬೇಕು. ಇಲ್ಲವಾದರೆ, ಪ್ರತಿ ತಿಂಗಳ ಕೊನೆಯಲ್ಲಿ ದಂಡದ ಶುಲ್ಕವನ್ನು ಬ್ಯಾಂಕ್‌ಗಳು ಕಡಿತಗೊಳಿಸುತ್ತವೆ. ಇದು ಅನೇಕ ಗ್ರಾಹಕರಿಗೆ ತಲೆನೋವಾಗಿತ್ತು. ಆದರೆ, ಸರ್ಕಾರಿ ಸ್ವಾಮ್ಯದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ (Canara Bank), ತನ್ನ ಗ್ರಾಹಕರ ಹಿತದೃಷ್ಟಿಯಿಂದ ಈ ನಿಯಮದಲ್ಲಿ ದೊಡ್ಡ ಬದಲಾವಣೆ ತಂದಿದೆ.
Read this also : ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಆನ್ ಲೈನ್ ಅರ್ಜಿ, ದಾಖಲೆಗಳ ಸಂಪೂರ್ಣ ಮಾಹಿತಿ…!
ಇನ್ಮುಂದೆ ನೀವು ಕೆನರಾ ಬ್ಯಾಂಕ್‌ನಲ್ಲಿ ಯಾವುದೇ ರೀತಿಯ ಉಳಿತಾಯ ಖಾತೆ, ಸಂಬಳ ಖಾತೆ (Salary Account) ಅಥವಾ ಎನ್‌ಆರ್‌ಐ ಉಳಿತಾಯ ಖಾತೆ (NRI Savings Account) ಹೊಂದಿದ್ದರೂ, ನಿಮ್ಮ ಖಾತೆಯಲ್ಲಿ ನಿಗದಿತ ಕನಿಷ್ಠ ಮೊತ್ತಕ್ಕಿಂತ ಕಡಿಮೆ ಹಣ (ಉದಾಹರಣೆಗೆ 100, 200 ರೂಪಾಯಿ) ಇದ್ದರೂ ಅಥವಾ ಶೂನ್ಯ ಬ್ಯಾಲೆನ್ಸ್ ಇದ್ದರೂ ದಂಡ ಕಟ್ಟುವ ಅಗತ್ಯವಿಲ್ಲ! ಇದು ನಿಜಕ್ಕೂ ಗ್ರಾಹಕರಿಗೆ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲಿದೆ.
Canara Bank Minimum Balance – ಯಾಕೆ ಈ ಬದಲಾವಣೆ ಮುಖ್ಯ?
ತಿಂಗಳು ಪೂರ್ತಿ ನಿಗದಿತ ಕನಿಷ್ಠ ಮೊತ್ತವನ್ನು ಖಾತೆಯಲ್ಲಿ ನಿರ್ವಹಿಸಲು ಹಲವರಿಗೆ ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಬ್ಯಾಂಕ್‌ಗಳು ದಂಡದ ಹೆಸರಿನಲ್ಲಿ ಹಣ ಕಡಿತಗೊಳಿಸಿದಾಗ, ಅದು ನಿಜಕ್ಕೂ ಹೊರೆಯಾಗುತ್ತದೆ. ಕೆನರಾ ಬ್ಯಾಂಕ್‌ನ ಈ ಹೊಸ ನಿಯಮದಿಂದಾಗಿ ಲಕ್ಷಾಂತರ ಗ್ರಾಹಕರು ನಿಟ್ಟುಸಿರು ಬಿಡಬಹುದು. ಇದು ಗ್ರಾಹಕ ಸ್ನೇಹಿ ನಡೆಯಾಗಿದ್ದು, ಕೆನರಾ ಬ್ಯಾಂಕ್ ಗ್ರಾಹಕರಿಗೆ (Canara Bank Customers) ಮತ್ತಷ್ಟು ಅನುಕೂಲ ಕಲ್ಪಿಸಿದೆ.
Canara Bank Minimum Balance ಕೆನರಾ ಬ್ಯಾಂಕ್ ಹೇಳಿಕೆ:
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೆನರಾ ಬ್ಯಾಂಕ್, “ನಮ್ಮ ಹೊಸ ನೀತಿ-ನಿಯಮದ ಪ್ರಕಾರ, ಕೆನರಾ ಬ್ಯಾಂಕ್‌ನಲ್ಲಿ ಯಾರೆಲ್ಲಾ ಉಳಿತಾಯ ಖಾತೆ ಹೊಂದಿದ್ದಾರೋ, ಅವರೆಲ್ಲ ಇನ್ನು ಮುಂದೆ ಕನಿಷ್ಠ ಮೊತ್ತದ ಹಣಕ್ಕೆ ಸಂಬಂಧಿಸಿದಂತೆ ದಂಡ ಕಟ್ಟುವ ಅವಶ್ಯಕತೆ ಇಲ್ಲ. AMB (Average Monthly Balance) ದಂಡ ಅಥವಾ ಶುಲ್ಕದಿಂದ ಗ್ರಾಹಕರು ಮುಕ್ತರಾಗುತ್ತಾರೆ” ಎಂದು ಸ್ಪಷ್ಟಪಡಿಸಿದೆ.