ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗ್ರಾಮದ ರೈತ ಸಂಜೀವಪ್ಪ (48) ಎಂಬುವವರು ಜಮೀನಿಗೆ ಹೋಗಿ ಮನೆಗೆ ವಾಪಸ್ಸು ಬರುವಾಗ ಕರಡಿಯೊಂದು ದಾಳಿ (bear Attack) ನಡೆಸಿದ್ದು, ಈ ದಾಳಿಯಿಂದಾಗಿ ರೈತ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ರೈತ ಸಂಜೀವಪ್ಪ ಗುರುವಾರ ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿಗೆ ಹೋಗಿರುತ್ತಾರೆ. ಬೆಳೆಗೆ ನೀರು ಹಾಯಿಸಿ ವಾಪಸ್ಸು ಬರುತ್ತಿರುವಾಗ ಹಳ್ಳದಲ್ಲಿ ಅವಿತು ಕುಳಿತಿದ್ದ ಕರಡಿ ರೈತನ ಮೇಲೆ ಏಕಾಏಕಿ ದಾಳಿ (bear attack) ನಡೆಸಿದೆ. ಮುಖ ಹಾಗೂ ತಲೆಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ ಎಂದು ತಿಳಿದುಬಂದಿದೆ.
ಇನ್ನೂ ಕರಡಿ (bear attack) ದಾಳಿಯಿಂದ ತಪ್ಪಿಸಿಕೊಳ್ಳಲು ರೈತ ಜೋರಾಗಿ ಕಿರುಚಾಡಿದ್ದಾನೆ. ಆತನ ಚೀರಾಟ ಕೇಳಿಸಿಕೊಂಡ ಅಕ್ಕ ಪಕ್ಕದ ರೈತರು ಸ್ಥಳಕ್ಕೆ ಧಾವಿಸಿ ಕರಡಿಯನ್ನು ಓಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರೈತನನ್ನು ಅಲ್ಲಿದ್ದವರು ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
ಇನ್ನೂ ಈ ದಾಳಿಯಿಂದ (bear attack) ಸ್ಥಳೀಯ ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಪೆಮ್ಮನಹಳ್ಳಿ ಗ್ರಾಮ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ಸೂಕ್ತ ರಕ್ಷಣೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.