Wildlife Hunt : ಜೀವಂತ ಹಾವಿನ ಜೊತೆ ಫುಟ್‌ಬಾಲ್ ಆಡಿದ ಕೊಕ್ಕರೆ! ಬೆಚ್ಚಿಬೀಳಿಸುವ ಈ ವೈಲ್ಡ್‌ಲೈಫ್ ವಿಡಿಯೋ ನೋಡಿದ್ದೀರಾ?

ಕಾಡು ಪ್ರಾಣಿ-ಪಕ್ಷಿಗಳ ಪ್ರಪಂಚವೇ ಒಂದು ದೊಡ್ಡ ಅಚ್ಚರಿಯ ಗೂಡು. ಅವುಗಳ ಜೀವನಶೈಲಿ ಮತ್ತು ಬೇಟೆಯಾಡುವ ರೀತಿ ಒಮ್ಮೊಮ್ಮೆ ನಮ್ಮ ಊಹೆಗೂ ನಿಲುಕುವುದಿಲ್ಲ. ಈಗ ಅಂತಹುದೇ ಒಂದು ರೋಮಾಂಚಕಾರಿ ವಿಡಿಯೋ ಅಂತರ್ಜಾಲದಲ್ಲಿ (Wildlife Hunt) ಭಾರಿ ಸದ್ದು ಮಾಡುತ್ತಿದೆ. ಪರ್ಪಲ್ ಹೆರಾನ್ (Purple Heron) ಜಾತಿಯ ಕೊಕ್ಕರೆಯೊಂದು ಹಾವನ್ನು ಬೇಟೆಯಾಡಿ, ಅದನ್ನು ಗಾಳಿಯಲ್ಲಿ ತೂರಿ ಆಟವಾಡಿರುವ ದೃಶ್ಯವೊಂದು ನೋಡುಗರನ್ನು ನಿಬ್ಬೆರಗಾಗಿಸಿದೆ.

Wildlife hunt featuring a Purple Heron catching and tossing a snake into the air before swallowing it.

Wildlife Hunt – ಹಾವೇ ಈ ಕೊಕ್ಕರೆಗೆ ಆಟಿಕೆ!

ಕೊಕ್ಕರೆಗಳು ಸಾಮಾನ್ಯವಾಗಿ ಕೆರೆ, ನದಿಗಳಲ್ಲಿ ಮೀನು ಅಥವಾ ಕಪ್ಪೆಗಳನ್ನು ಹಿಡಿದು ತಿನ್ನುವುದನ್ನು ನಾವು ನೀವೆಲ್ಲಾ ನೋಡಿರುತ್ತೇವೆ. ಆದರೆ ಈ ವಿಡಿಯೋದಲ್ಲಿರುವ ಕೊಕ್ಕರೆಯ ಸ್ಟೈಲ್ ಸ್ವಲ್ಪ ಡಿಫರೆಂಟ್. ಇದು ಏಕಾಏಕಿ ಒಂದು ಸಣ್ಣ ಹಾವನ್ನೇ ತನ್ನ ಟಾರ್ಗೆಟ್ ಮಾಡಿಕೊಂಡಿದೆ. ಅಚ್ಚರಿಯ ಸಂಗತಿ ಎಂದರೆ, ಹಾವನ್ನು ಹಿಡಿದ ತಕ್ಷಣ ಅದು ಗುಳುಕ್ ಎಂದು ನುಂಗಿಲ್ಲ. ಬದಲಿಗೆ ತನ್ನ ಉದ್ದವಾದ ಕೊಕ್ಕಿನಲ್ಲಿ ಹಾವನ್ನು ಕಚ್ಚಿ, ಗಾಳಿಯಲ್ಲಿ ಮೇಲಕ್ಕೆ ಹಾರಿಸುತ್ತಾ ಮತ್ತೆ ಕ್ಯಾಚ್ ಹಿಡಿಯುವ ಮೂಲಕ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ. ನೋಡಲು ಇದು ಯಾವುದೋ ಆಟಿಕೆಯ ಜೊತೆ ಆಟವಾಡುತ್ತಿರುವಂತೆ ಭಾಸವಾಗುತ್ತದೆ. Read this also : ಬರಿಗೈಯಲ್ಲಿಯೇ ಹೆಡೆಬಿಚ್ಚಿದ ನಾಗರಹಾವನ್ನು ಹಿಡಿದ ಬ್ಯೂಟಿ, ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡಿದ ವಿಡಿಯೋ..!

ಗಾಳಿಯಲ್ಲಿ ಗಿರಕಿ ಹೊಡೆದ ಹಾವು

ವಿಡಿಯೋದಲ್ಲಿ (Viral Video Here) ನೀವು ಗಮನಿಸಿದರೆ, ಕೊಕ್ಕರೆ ಹಾವನ್ನು ಮೇಲಕ್ಕೆ ಎಸೆದಾಗ ಆ ಪಾಪದ ಜೀವಿ ಪ್ರಾಣ ಉಳಿಸಿಕೊಳ್ಳಲು ಒದ್ದಾಡುತ್ತಾ ಕೆಳಗೆ ಬೀಳುವುದನ್ನು ನೋಡಬಹುದು. ಆದರೆ ಆ ಚಾಲಾಕಿ ಕೊಕ್ಕರೆ ಮಾತ್ರ, ಹಾವು ನೆಲಕ್ಕೆ ಬೀಳುವ ಮುನ್ನವೇ ಲಪಕ್ಕನೆ ಹಿಡಿದು, ಕಡೆಗೆ ತನ್ನ ಹೊಟ್ಟೆಗೇರಿಸಿಕೊಂಡಿದೆ. ವನ್ಯಜೀವಿ ಛಾಯಾಗ್ರಾಹಕರ ಪ್ರಕಾರ, ಪಕ್ಷಿಗಳು ತಮ್ಮ ಬೇಟೆಯನ್ನು ಸಂಪೂರ್ಣವಾಗಿ ಸಾಯಿಸಲು ಅಥವಾ ಸುಲಭವಾಗಿ ಗಂಟಲೊಳಗೆ ಇಳಿಸಿಕೊಳ್ಳಲು ಅನುಕೂಲವಾಗುವಂತೆ ಹೀಗೆ ಗಾಳಿಯಲ್ಲಿ ತೂರಿ ಕಸರತ್ತು ಮಾಡುತ್ತವೆಯಂತೆ.

Wildlife hunt featuring a Purple Heron catching and tossing a snake into the air before swallowing it.

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸೆನ್ಸೇಷನ್

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ‘The tossing by purple heron’ ಎಂಬ ಶೀರ್ಷಿಕೆಯಡಿ ಹಂಚಿಕೊಳ್ಳಲಾಗಿರುವ ಈ ಅಪರೂಪದ ದೃಶ್ಯ ಈಗ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಈಗಾಗಲೇ ಲಕ್ಷಾಂತರ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ವನ್ಯಜೀವಿ ಪ್ರೇಮಿಗಳಂತೂ ಈ ದೃಶ್ಯ ಕಂಡು ದಂಗಾಗಿದ್ದು, “ಪ್ರಕೃತಿಯ ನಿಯಮವೇ ಇಷ್ಟು ಕ್ರೂರ”, “ಇಂಥ ರೇರ್ ದೃಶ್ಯವನ್ನು ಲೈಫ್‌ನಲ್ಲಿ ಒಮ್ಮೆ ಮಾತ್ರ ನೋಡಲು ಸಾಧ್ಯ” ಎಂದು ತಮ್ಮ ಅನಿಸಿಕೆಗಳನ್ನು ಕಾಮೆಂಟ್‌ಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? DreamsPOS – POS & Inventory Management Admin Dashboard (HTML, Angular 19, React 19, Vue, Laravel 12) Monalisa | Hotel & Resort WordPress Theme Facdori – Factory and Industrial Business WordPress Theme Picko – Clean Portfolio WordPress Theme Silvuple – Online Invitation Maker SaaS Alice’s | Lingerie Store and Fashion Boutique WordPress Theme Dan – Creative Photography WordPress Theme Technofy | IT Services & Solutions WordPress Theme Olympus – HTML Social Network Toolkit WooCommerce Upload Files Plugin – Product Page & Order File Upload