ಡ್ರಾಪ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನ, ಸಿನಿಮೀಯ ರೀತಿಯಲ್ಲಿ ಯುವತಿಯನ್ನು ರಕ್ಷಣೆ ಮಾಡಿದ ಪೊಲೀಸರು…!

ಅತ್ಯಾಚಾರಗಳು, ಲೈಂಗಿಕ ದೌರ್ಜನ್ಯಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದ್ದರೂ ಸಹ ಕೆಲವು ಪುಂಡರು ಅತ್ಯಾಚಾರಗಳು, ಲೈಂಗಿಕ ದೌರ್ಜನ್ಯ ಮಾಡುವಂತಹ ಕೃತ್ಯಕ್ಕೆ ಮುಂದಾಗುತ್ತಿರುತ್ತಾರೆ. ಚಿಕ್ಕಬಳ್ಳಾಪುರದ ಪೇರೆಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಯೊಬ್ಬ ಇಬ್ಬರು ವಿದ್ಯಾರ್ಥಿನಿಯರಿಗೆ ಡ್ರಾಪ್ ಕೊಡುತ್ತೇನೆ ಎಂದು ಹೇಳಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಆದರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರೂ ವಿದ್ಯಾರ್ಥಿನಿಯರನ್ನು ರಕ್ಷಣೆ ಮಾಡಿ, ಆರೋಪಿಯನ್ನು ಬಂಧನ ಮಾಡಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ಪೇರೆಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿನೀಯರಿಬ್ಬರಿಗೆ ಡ್ರಾಪ್ ಕೊಡುವುದಾಗಿ ಕರೆದುಕೊಂಡು ಹೋದ ವ್ಯಕ್ತಿಯೋರ್ವ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ವಿದ್ಯಾರ್ಥಿನಿಯರಿಬ್ಬರು ಮದುವೆಯೊಂದರ ರಿಸೆಪ್ಷನ್ ಕೆಲಸ ಮುಗಿಸಿಕೊಂಡು ತಡರಾತ್ರಿ ತಮ್ಮ ಗ್ರಾಮಕ್ಕೆ ಹೋಗಲು ಸಿದ್ದವಾಗಿದ್ದಾರೆ. ಈ ವೇಳೆ ಪೋಲಕುಂಟಹಳ್ಳಿ ಎಂಬ ಗ್ರಾಮದ ನಿವಾಸಿ ಶ್ರೀಕಾಂತ್ ಆ ವಿದ್ಯಾರ್ಥಿನಿಯರಿಗೆ ಡ್ರಾಪ್ ಕೊಡುವ ಡ್ರಾಮಾ ಆಡಿದ್ದಾನೆ. ಇಬ್ಬರನ್ನೂ ಬೈಕ್ ಮೇಲೆ ಕೂರಿಸಿಕೊಂಡು ಸಾಗಿದ್ದಾನೆ. ಪೇರೆಸಂದ್ರದಿಂದ ಚಿಕ್ಕಬಳ್ಳಾಪುರಕ್ಕೆ ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ಹತ್ತಿಸಿಕೊಂಡ ಶ್ರೀಕಾಂತ್ ಹೆದ್ದಾರಿಗೆ ಬರುವ ಬದಲು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದನಂತೆ. ಅರಣ್ಯ ಪ್ರದೇಶದಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಮುಂದಾಗಿದ್ದಾನೆ.

man attempted to rape arrested 1

ಆದರೆ ವಿದ್ಯಾರ್ಥಿನಿಯರು ಸಮಯ ಪ್ರಜ್ಞೆ ಪ್ರದರ್ಶನ ಮಾಡಿ ಆರೋಪಿಯಿಂದ ತಪ್ಪಿಸಿಕೊಂಡು 112 ಸಹಾಯವಾಣಿಗೆ ಕರೆ ಮಾಡಿದ್ದಾರೆ. ಪೊಲೀಸರ ರಕ್ಷಣೆ ಕೋರಿದ್ದಾರೆ. ಕೂಡಲೇ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ವಿದ್ಯಾರ್ಥಿನಿಯರ ಮೊಬೈಲ್ ಲೊಕೇಷನ್ ಮೂಲಕ ಅವರಿರುವ ಸ್ಥಳ ತಿಳಿದುಕೊಂಡು ಇಬ್ಬರೂ ವಿದ್ಯಾರ್ಥಿನಿಯರನ್ನು ರಕ್ಷಣೆ ಮಾಡಿದ್ದಾರೆ. ಜೊತೆಗೆ ಆರೋಪಿ ಶ್ರೀಕಾಂತ್ ನನ್ನು ಬಂಧನ ಮಾಡಿರುವ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *

Next Post

200 ರೂಪಾಯಿ ಕೊಡದೇ ಇದ್ದಿದ್ದಕ್ಕೆ ತವರು ಮನೆ ಸೇರಿದ ಪತ್ನಿ, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಪತಿ….!

Tue May 21 , 2024
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಮಾತಿದೆ. ಆದರೆ ಕೆಲವೊಮ್ಮೆ ಇದು ಸುಳ್ಳಾಗುತ್ತೆ. ಗಂಭೀರ ಕಾರಣಗಳಿಂದ ಕೆಲವೊಂದು ಕಡೆ ಅನಾಹುತಗಳು ಸಂಭವಿಸುತ್ತವೆ. ಕೆಲವೊಮ್ಮೆ ಕ್ಷುಲ್ಲಕ ಕಾರಣಗಳಿಂದಲೂ ಆತ್ಮಹತ್ಯೆಗಳು, ಕೊಲೆಗಳು, ಹಲ್ಲೆಗಳು ನಡೆದಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಅಂತಹುದೇ ಘಟನೆಯೊಂದು ನಡೆದಿದೆ. ಕೇವಲ 200 ರೂಪಾಯಿಗಾಗಿ ದಂಪತಿಯ ನಡುವೆ ಗಲಾಟೆ ನಡೆದಿದ್ದು, ಈ ಗಲಾಟೆಯ ಕಾರಣದಿಂದ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ […]
Husband comits suicide for wife not comming back 1
error: Content is protected !!