ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಇದ್ದಿದ್ದು ನಿಜ, ಪೊಲೀಸ್ ಆಯುಕ್ತ ದಯಾನಂದ ಸ್ಪಷ್ಟನೆ….!

ಕಳೆದೆರಡು ದಿನಗಳ ಹಿಂದೆಯಷ್ಟೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್‍.ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪಾರ್ಟಿಯಲ್ಲಿ ತೆಲುಗು ಸಿನಿರಂಗದ ಕೆಲ ನಟ-ನಟಿಯರು ಸಹ ಭಾಗಿಯಾಗಿದ್ದಾಗಿ ಸುದ್ದಿಗಳು ಕೇಳಿಬಂದವು. ಈ ವೇಳೆ ತೆಲುಗು ನಟಿ ಹೇಮಾ ಸಹ ಪಾರ್ಟಿಯಲ್ಲಿ ಭಾಗಿಯಾಗಿದ್ದಾಗಿ ಬಳಿಕ ಆಕೆ ಬಂದಿಲ್ಲ ಎಂದು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದರು. ಆದರೆ ಇದೀಗ ಆಕೆ ಸುಳ್ಳು ಹೇಳಿದ್ದಾಳೆ. ಆಕೆ ಸಹ ಪಾರ್ಟಿಯಲ್ಲಿದ್ದರು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬಳಿಯಿದ್ದ ಜಿ.ಆರ್‍. ಫಾರ್ಮ್ ಹೌಸ್ ನಲ್ಲಿ ನಡೆದ ರೇವ್ ಪಾರ್ಟಿ ಭಾರಿ ಸದ್ದು ಮಾಡುತ್ತಿದೆ. ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ ಎಂಬ ಹೆಸರಿನಲ್ಲಿ ಈ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಅದರಲ್ಲೂ ಪ್ರಮುಖವಾಗಿ ಈ ಪಾರ್ಟಿಯಲ್ಲಿ ಕೆಲ ತೆಲುಗು ನಟಿಯರು, ನಟರು, ಮಾಡಲ್ ಗಳು ಸೇರಿದಂತೆ ಕೆಲವು ಸೆಲಬ್ರೆಟಿಗಳು ಭಾಗಿಯಾಗಿದ್ದರು ಎನ್ನಲಾಗಿತ್ತು. ತೆಲುಗು ನಟಿ ಹೇಮಾ ಸಹ ಈ ಪಾರ್ಟಿಯಲ್ಲಿದ್ದರು ಎಂಬ ಸುದ್ದಿ ಮೊದಲಿಗೆ ಕೇಳಿಬಂತು. ಬಳಿಕ ಆಕೆ ತಾವು ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿರುವುದಾಗಿ ವಿಡಿಯೋ ಮಾಡಿದ್ದರು. ಇದೀಗ ಆ ವಿಡಿಯೋ ಸುಳ್ಳು ಎಂದು ಹೇಳಲಾಗಿದೆ. ಆಕೆ ಸಹ ಪಾರ್ಟಿಯಲ್ಲಿದ್ದರು ಎಂಬ ವಿವರವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸ್ಪಷ್ಟಪಡಿಸಿದ್ದಾರೆ.

Hema in rave party police confirm 1

ಇನ್ನೂ ಸನ್ ಸೆಟ್ ಟು ಸನ್ ರೈಸ್ ವಿಕ್ಟರಿ ಎಂಬ ಹೆಸರಿನಲ್ಲಿ ಈ ರೇವ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿ ತಡರಾತ್ರಿಯವರೆಗೂ ನಡೆದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಧಾಳಿ ನಡೆಸಿದ್ದರು. ಧಾಳಿಯ ಸಮಯದಲ್ಲಿ ಎಂ.ಡಿ.ಎಂ.ಎ ಮಾತ್ರೆಗಳು, ಹೈಡ್ರೋಗಾಂಜಾ, ಕೊಕೇನ್ ಸೇರಿದಮತೆ ಹಲವು ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ಪಾರ್ಟಿಯಲ್ಲಿ ಸಿದ್ದಿಕ್, ರಣ್ ದೀರ್‍, ರಾಜ್ ಎಂಬುವವು ಡ್ರಗ್ಸ್ ಮಾರಾಟ ಮಾಡಿದ್ದರು ಎನ್ನಲಾಗಿದೆ. ಈ ಪಾರ್ಟಿಯಲ್ಲಿ ನಟಿ ಹೇಮಾ ಸಹ ಭಾಗಿಯಾಗಿದ್ದರು. ಈ ವೇಳೆ ಫಾರ್ಮ್ ಹೌಸ್ ನಲ್ಲೇ ನಟಿ ವಿಡಿಯೋ ಮಾಡಿರುವ ಬಗ್ಗೆ ಸಹ ಮಾತನಾಡಿದ್ದಾರೆ. ಯಾವ ಸಂದರ್ಭದಲ್ಲಿ ವಿಡಿಯೋ ಮಾಡಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಸದ್ಯ ಹೇಮಾ ರವರ ರಕ್ತದ ಮಾದರಿ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದವರಿಗೆ ಶೀಘ್ರವೇ ಸಿಸಿಬಿ ನೊಟೀಸ್ ಸಹ ನೀಡಲಿದೆ, ನೊಟೀಸ್ ನಲ್ಲಿ ನೀಡಿದ ದಿನಾಂಕದಂದು ಅವರು ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿದೆ.

Rave party hema gave clarity

ಇನ್ನೂ ರೇವ್ ಪಾರ್ಟಿಯ ಮೇಲೆ ರೇಡ್ ಆಗುತ್ತಿದ್ದಂತೆ ತೆಲುಗು ಪೋಷಕ ನಟಿ ಹೇಮಾ ರವರ ಹೆಸರು ಕೇಳಿಬಂದಿತ್ತು. ಆದರೆ ಆಕೆ ನಾನು ಫಾರ್ಮ್ ಹೌಸ್ ನಲ್ಲಿಲ್ಲ. ನಾನು ಹೈದರಾಬಾದ್ ನ ಫಾರ್ಮ್ ಹೌಸ್ ನಲ್ಲಿದ್ದೆ ಎಂದು ಹೇಳಿದ್ದರು. ಇದೀಗ ಆಕೆಯ ವಿಡಿಯೋ ಸುಳ್ಳು ಎಂಬುದು ಸಾಬೀತಾಗಿದೆ. ಜೊತೆಗೆ ತೆಲುಗು ನಟ ಶ್ರೀಕಾಂತ್ ರವರ ಹೆಸರು ಸಹ ಈ ಪ್ರಕರಣದಲ್ಲಿ ಕೇಳಿಬಂದಿತ್ತು. ಆದರೆ ಅವರು ನಾನು ಪಬ್ ಗಳಿಗೆ ರೇವ್ ಪಾರ್ಟಿಗಳಿಗೆ ಹೋಗುವಂತಹವನಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಇದ್ದಿದ್ದು ನಿಜ, ಪೊಲೀಸ್ ಆಯುಕ್ತ ದಯಾನಂದ ಸ್ಪಷ್ಟನೆ….!

Leave a Reply

Your email address will not be published. Required fields are marked *

Next Post

ಡ್ರಾಪ್ ಕೊಡುವ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರಕ್ಕೆ ಯತ್ನ, ಸಿನಿಮೀಯ ರೀತಿಯಲ್ಲಿ ಯುವತಿಯನ್ನು ರಕ್ಷಣೆ ಮಾಡಿದ ಪೊಲೀಸರು…!

Tue May 21 , 2024
ಅತ್ಯಾಚಾರಗಳು, ಲೈಂಗಿಕ ದೌರ್ಜನ್ಯಗಳಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆಯಿದ್ದರೂ ಸಹ ಕೆಲವು ಪುಂಡರು ಅತ್ಯಾಚಾರಗಳು, ಲೈಂಗಿಕ ದೌರ್ಜನ್ಯ ಮಾಡುವಂತಹ ಕೃತ್ಯಕ್ಕೆ ಮುಂದಾಗುತ್ತಿರುತ್ತಾರೆ. ಚಿಕ್ಕಬಳ್ಳಾಪುರದ ಪೇರೆಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆರೋಪಿಯೊಬ್ಬ ಇಬ್ಬರು ವಿದ್ಯಾರ್ಥಿನಿಯರಿಗೆ ಡ್ರಾಪ್ ಕೊಡುತ್ತೇನೆ ಎಂದು ಹೇಳಿ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಆದರೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರೂ ವಿದ್ಯಾರ್ಥಿನಿಯರನ್ನು ರಕ್ಷಣೆ ಮಾಡಿ, ಆರೋಪಿಯನ್ನು ಬಂಧನ ಮಾಡಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಪೇರೆಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿದ್ಯಾರ್ಥಿನೀಯರಿಬ್ಬರಿಗೆ ಡ್ರಾಪ್ […]
man attempted to rape arrested
error: Content is protected !!