Prayagraj Hostel Assault : ಮಧ್ಯರಾತ್ರಿ 2 ಗಂಟೆಗೆ ಹಾಸ್ಟೆಲ್ ಹುಡುಗಿಯರ ರೂಮ್‌ಗೆ ನುಗ್ಗಿ ಕೂದಲು ಹಿಡಿದು ಎಳೆದಾಡಿದ ಮಾಲೀಕನ ಮಗ!

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ (Prayagraj) ಕರುಳು ಹಿಂಡುವಂತಹ, ಆಕ್ರೋಶ ತರಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (competitive exams) ತಯಾರಿ ನಡೆಸಲು ಬಂದಿದ್ದ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಪಿಜಿ/ಹಾಸ್ಟೆಲ್ ಮಾಲೀಕನ ಮಗನೇ ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಪ್ರಸ್ತುತ ಈ ಅಮಾನವೀಯ ಕೃತ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Prayagraj Hostel Assault) ವೈರಲ್ ಆಗುತ್ತಿದ್ದು, ಮಹಿಳಾ ಸುರಕ್ಷತೆಯ ಬಗ್ಗೆ ಮತ್ತೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಘಟನೆಯ ಸಂಪೂರ್ಣ ವಿವರ ಇಲ್ಲಿದೆ.

Prayagraj hostel assault case video goes viral after female students were allegedly attacked by hostel owner’s son.

Prayagraj Hostel Assault – ಏನಿದು ಘಟನೆ?

ಶಂಕರ್ ಘಾಟ್ ಪ್ರದೇಶದ ಹಾಸ್ಟೆಲ್‌ನಲ್ಲಿ ಇಬ್ಬರು ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ (Competitive Exams) ಹಗಲಿರುಳು ತಯಾರಿ ನಡೆಸುತ್ತಿದ್ದರು. ಆದರೆ, ಅವರಿಗೆ ರಕ್ಷಣೆ ನೀಡಬೇಕಾದ ಹಾಸ್ಟೆಲ್ ಮಾಲೀಕನ ಮಗನಾದ ಶುಭಂ ದ್ವಿವೇದಿ ಎಂಬಾತನೇ ಇವರ ನೆಮ್ಮದಿ ಕೆಡಿಸಿದ್ದಾನೆ. ಕಳೆದ ಹತ್ತು ದಿನಗಳಿಂದ ಯುವತಿಗೆ ಸತತವಾಗಿ ಫೋನ್ ಮತ್ತು ಮೆಸೇಜ್ ಮಾಡುತ್ತಾ ಕಿರುಕುಳ ನೀಡುತ್ತಿದ್ದ. ಮೇ 18ರ ತಡರಾತ್ರಿ 2 ಗಂಟೆಗೆ ಕುಡಿದ ಮತ್ತಿನಲ್ಲಿ ಯುವತಿಯರ ರೂಮ್ ಬಳಿ ಬಂದು ಅಕ್ಷರಶಃ ಗೂಂಡಾಗಿರಿ ಪ್ರದರ್ಶಿಸಿದ್ದಾನೆ.

ರೂಮ್ ಲಾಕ್ ಮಾಡಿ ಅಟ್ಟಹಾಸ

ರಾತ್ರಿ ಹೊತ್ತು ಯುವತಿಯರು ಆತನ ಫೋನ್ ರಿಸೀವ್ ಮಾಡದಿದ್ದಾಗ, ಕೋಪಗೊಂಡ ಶುಭಂ ರೂಮಿನ ಬಾಗಿಲನ್ನು ಜೋರಾಗಿ ಬಡಿಯಲು ಶುರು ಮಾಡಿದ್ದಾನೆ. ಭಯಭೀತರಾದ ಯುವತಿಯರು ಬಾಗಿಲು ತೆಗೆಯದಿದ್ದಾಗ, ಆಕ್ರೋಶಗೊಂಡು ಕೋಣೆಯನ್ನು ಹೊರಗಿನಿಂದಲೇ ಲಾಕ್ ಮಾಡಿದ್ದಾನೆ! ಬೇರೆ ದಾರಿಯಿಲ್ಲದೆ ಸಂತ್ರಸ್ತೆಯರು ಸಹಾಯಕ್ಕಾಗಿ ಕಿರುಚಿಕೊಂಡಿದ್ದಾರೆ. ಆ ಸದ್ದು ಕೇಳಿ ಆರೋಪಿಯ ತಾಯಿ ಅಲ್ಲಿಗೆ ಬಂದು ಬಾಗಿಲು ತೆಗೆಸಿದ್ದಾರೆ.

ಕೂದಲು ಹಿಡಿದು ಎಳೆದಾಡಿದ ಪಾಪಿ

ಬಾಗಿಲು ತೆರೆಯುತ್ತಿದ್ದಂತೆ ಕೋಣೆಯೊಳಗೆ ನುಗ್ಗಿದ ಆರೋಪಿ, ಇಬ್ಬರೂ ವಿದ್ಯಾರ್ಥಿನಿಯರ ಮೇಲೆ ರಾಕ್ಷಸನಂತೆ ಎರಗಿದ್ದಾನೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ 30 ಸೆಕೆಂಡುಗಳ ವಿಡಿಯೋದಲ್ಲಿ ಈ ಕೃತ್ಯ ಸ್ಪಷ್ಟವಾಗಿ ಸೆರೆಯಾಗಿದೆ. ಆತ ಯುವತಿಯೊಬ್ಬಳ ಕೂದಲು ಹಿಡಿದು ಎಳೆದಾಡುತ್ತಿರುವುದು, ಕೆಟ್ಟ ಪದಗಳಿಂದ ನಿಂದಿಸುತ್ತಿರುವುದು ವಿಡಿಯೋದಲ್ಲಿದೆ. ಆತನ ತಾಯಿ ಆತನನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ ಆತ ಮಾತ್ರ ಸುಮ್ಮನಾಗಿಲ್ಲ.

ವೈರಲ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ : Click Here
ಪೊಲೀಸರ ಮುಂದೆಯೇ ಒಡೆದ ಗಾಜಿನಿಂದ ದಾಳಿ!

ಗಾಬರಿಗೊಂಡ ಯುವತಿಯರು ಹತ್ತಿರದಲ್ಲಿದ್ದ ತಮ್ಮ ಸಂಬಂಧಿಕರಿಗೆ ಮಾಹಿತಿ ನೀಡಿ, ತಕ್ಷಣವೇ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಪೊಲೀಸರು ಬಂದರೂ ಆರೋಪಿಯ ದುರಹಂಕಾರ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಪೊಲೀಸರ ಎದುರೇ ಒಡೆದ ಗಾಜಿನ ಚೂರನ್ನು ಹಿಡಿದುಕೊಂಡು ಯುವತಿಯ ಮೇಲೆ ದಾಳಿ ಮಾಡಲು ಮುಂದಾಗಿದ್ದಾನೆ, ಜೊತೆಗೆ ಪ್ರಾಣ ಬೆದರಿಕೆಯನ್ನೂ ಹಾಕಿದ್ದಾನೆ ಎಂದು ಸಂತ್ರಸ್ತರು ಕಣ್ಣೀರು ಹಾಕಿದ್ದಾರೆ. Read this also : ಚಲಿಸುವ ಬೈಕ್‌ನಲ್ಲೇ ಯುವತಿಗೆ ಚಿತ್ರಹಿಂಸೆ! ಮನುಷ್ಯತ್ವ ಮರೆತ ಯುವಕನ ಅಸಭ್ಯ ವರ್ತನೆಗೆ ನೆಟ್ಟಿಗರು ಫುಲ್ ಗರಂ..!

Prayagraj hostel assault case video goes viral after female students were allegedly attacked by hostel owner’s son.

ಬಂಧನ, ಬಳಿಕ ದಿಗ್ಭ್ರಮೆ ಮೂಡಿಸಿದ ಜಾಮೀನು

ವಿದ್ಯಾರ್ಥಿನಿಯರ ದೂರಿನ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ (FIR) ದಾಖಲಿಸಿ ಆರೋಪಿಯನ್ನು ಬಂಧಿಸಿದ್ದರು. ಆದರೆ, ಇಷ್ಟೆಲ್ಲಾ ಸಾಕ್ಷ್ಯಗಳಿದ್ದರೂ ಆರೋಪಿಗೆ ಕೋರ್ಟ್‌ನಿಂದ ಸುಲಭವಾಗಿ ಜಾಮೀನು ಸಿಕ್ಕಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ “ನಮ್ಮ ದೇಶದಲ್ಲಿ ಓದುವ ಹೆಣ್ಣುಮಕ್ಕಳಿಗೆ ಎಲ್ಲಿಯೂ ಸುರಕ್ಷತೆ ಇಲ್ಲವೇ?” ಎಂಬ ಗಂಭೀರ ಪ್ರಶ್ನೆಯನ್ನು ಹುಟ್ಟುಹಾಕಿದೆ.

Leave a Comment

Your email address will not be published. Required fields are marked *

Scroll to Top