ವೈರಲ್ ಆದ ಅನಂತ್ ಅಂಬಾನಿ-ರಾಧಿಕ ಮದುವೆ ಆಮಂತರಣ ಪತ್ರಿಕೆ, ಮದುವೆ ಎಲ್ಲಿ ಗೊತ್ತಾ?

ದೇಶದ ಆಗರ್ಭ ಶ್ರೀಮಂತ ಖ್ಯಾತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿಯವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಉದ್ಯಮಿ ವೀರೇನ್ ಮರ್ಚೆಂಟ್ ರವರ ಪುತ್ರಿ ರಾಧಿಕ ಮರ್ಚೆಂಟ್ ರವರ ಮದುವೆ ಸಿದ್ದತೆಗಳು ಭರದಿಂಧ ಸಾಗುತ್ತಿದೆ. ಅವರ ಮದುವೆಯ ಆಮಂತ್ರಣ ಪತ್ರಿಕೆ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅಂದಹಾಗೆ ಅವರ ಮದುವೆ ಎಲ್ಲಿ, ಯಾವಾಗ ಎಂಬ ವಿಚಾರಕ್ಕೆ ಬಂದರೇ,

Anant Ambani marriage invitation 1

ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿರವರ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ರವರ ಪುತ್ರಿ ರಾಧಿಕಾ ಮರ್ಚೆಂಟ್ ರವರ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ಗುಜರಾತ್ ನ ಜಾಮ್ ನಗರದಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಇಡೀ ವಿಶ್ವವೇ ಈ ಕಾರ್ಯಕ್ರಮದತ್ತ ತಿರುಗಿ ನೋಡುವಂತೆ ಮಾಡಿತ್ತು ಎಂದೇ ಹೇಳಲಾಗಿದೆ. ಇದೀ ಈ ಜೋಡಿಯ ಮದುವೆ ಕೆಲಸಗಳು ಶುರುವಾಗಿದೆ. ಜು.12 ರಂದು ಈ ಜೋಡಿಯ ಮದುವೆ ಅದ್ದೂರಿಯಾಗಿ ಮಾಡಲು ಪ್ಲಾನ್ ಮಾಡಲಾಗಿದೆ. ಇದೀಗ ಅವರ ಮದುವೆಯ ಆಮಂತ್ರನ ಪತ್ರಿಕೆ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

https://x.com/ANI/status/1796075141538934887

ಇನ್ನೂ ಅನಂತ್ ಅಂಬಾನಿ ಹಾಗೂ ರಾಧಿಕ ರವರ ವಿವಾಹವು ಜುಲೈ 12 ರಂದು ಮುಂಬೈನಲ್ಲಿ ನಡೆಯಲಿದೆ ಎಂದು ಖ್ಯಾತ ಸುದ್ದಿ ಸಂಸ್ಥೆ ANI ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಈ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ. ಅನಂತ್‌ ಮತ್ತು ರಾಧಿಕಾ  ಮುಂಬೈನ ಬಾಂದ್ರಾ  ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ (ಬಿಕೆಸಿ) ಜಿಯೋ ವರ್ಲ್ಡ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಲಿದ್ದು, ಜುಲೈ 12 ರ ಶುಕ್ರವಾರದಂದು ಅದ್ಧೂರಿಯಾಗಿ ಇವರ ಶುಭ ವಿವಾಹವು ನಡೆಯಲಿದೆ. ಈ ಸಮಾರಂಭದಲ್ಲಿ ಅಥಿತಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆಯನ್ನು ತೊಡಬೇಕು ಎಂದು ಹೇಳಲಾಗಿದೆ. ಇದಾದ ನಂತರ ಜುಲೈ 13 ರಂದು ʼಶುಭ್‌ ಆಶೀರ್ವಾದ್‌ʼ ಸಮಾರಂಭ ಹಾಗೂ ಜುಲೈ 14 ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಜೋಡಿಯ ವಿವಾಹ ಪೂರ್ವ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ಇದೀಗ ಈ ಜೋಡಿ ಮದುವೆ ಯಾವ ರೀತಿ ನಡೆಯಲಿದೆ ಎಂದು ಅನೇಕರು ಕಾತುರದಿಂದ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

ತಮಿಳುನಾಡಿನಲ್ಲಿ ಪವಾಡ: ಸುಬ್ರಮಣ್ಯಸ್ವಾಮಿ ದೇಗುಲದಲ್ಲಿ ನಡೆಯಿತು ಅದ್ಬುತ, ಇದೆಲ್ಲಾ ದೇವರ ಲೀಲೆ ಎಂದ ಭಕ್ತರು…!

Fri May 31 , 2024
ಆಗಾಗ ಕೆಲವೊಂದು ಕಡೆ ಪವಾಡಗಳು ನಡೆಯುತ್ತಿರುತ್ತಿರುತ್ತವೆ. ತಮಿಳುನಾಡಿನ ತಿರುಪ್ಪೂರ್‍ ಜಿಲ್ಲೆಯಲ್ಲಿ ಪವಾಡವೊಂದು ನಡೆದಿದ್ದು, ಅದು ದೇವರ ಲೀಲೆ ಎಂದು ಭಕ್ತರು ಹೇಳುತ್ತಿದ್ದಾರೆ. ತಿರುಪ್ಪೂರ್‍ ಜಿಲ್ಲೆಯ ಅರುಲ್ಮೀಗು ಸುಬ್ರಮಣ್ಯ ಸ್ವಾಮಿ ದೇವಲಾಯದಲ್ಲಿ ಅದ್ಬುತವದ ಘಟನೆಯೊಂದು ನಡೆದಿದೆ. ದೇವಾಲಯದ ಗರ್ಭಗುಡಿಯಲ್ಲಿ ನವಿಲು ಕಾಣಿಸಿಕೊಂಡಿದ್ದು, ಅದನ್ನು ನೋಡಿದ ಭಕ್ತರು ಹಾಗೂ ಜನರು ಆಶ್ಚರ್ಯಪಡುತ್ತಿದ್ದಾರೆ. ತಮಿಳುನಾಡಿನ ತಿರುಪ್ಪೂರ್‍ ಜಿಲ್ಲೆಯ ಅರುಲ್ಮೀಗು ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಕಳೆದ ವಾರ ಪವಾಡ ಸದೃಶ್ಯ ಎಂಬಂತೆ ಘಟನೆಯೊಂದು ನಡೆದಿದೆ. ನೂರಾರು […]
arulmigu subramaniya swamy temple
error: Content is protected !!