Love: ಲವ್ ಮಾಡೋಕೆ ಹುಡುಗಿ ಸಿಕ್ಕಿಲ್ಲ ಅಂತಾ ತುಂಗನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಯುವಕ….!

ಪ್ರೀತಿಗಾಗಿ ಅನೇಕ ಅಪರಾಧಗಳು ನಡೆಯುತ್ತದೆ. ತಾನು ಪ್ರೀತಿಸಿದ ವ್ಯಕ್ತಿ ಸಿಗಲಿಲ್ಲ ಅಂತಾ ಕೊಲೆ, ದೌರ್ಜನ್ಯ, ಆತ್ಮಹತ್ಯೆಗಳಂತಹ ಪ್ರಕರಣಗಳು ನಡೆದಿರುವ ಬಗ್ಗೆ ಕೇಳಿರುತ್ತೇವೆ. ಇಲ್ಲೊಬ್ಬ ಯುವಕ ತನಗೆ ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತಾ ಮನನೊಂದು ತುಂಬಾ ನದಿಗೆ ಹಾರಿ ಆತ್ಮಹತ್ಯೆ (Love) ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದ ಎಂದು ತಿಳಿದುಬಂದಿದೆ.

ತನಗೆ ಪ್ರೀತಿಸಲು ಹುಡುಗಿ ಸಿಗಲಿಲ್ಲ ಅಂತಾ ಪದವಿಯಲ್ಲಿ ಓದುತ್ತಿದ್ದ ಯುವಕ ವಾಟ್ಸಾಪ್ ಸ್ಟೇಟಸ್ ನಲ್ಲಿ ಡೆತ್ ನೋಟ್ ಬರೆದಿತ್ತು ತುಂಬಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ದುರ್ದೈವಿಯನ್ನು ಜಯದೀಪ್ (24) ಎಂದು ಗುರ್ತಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಪದವಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ಯುವಕ ಜಯದೀಪ್. ತೀರ್ಥಹಳ್ಳಿ ತಾಳುಕಿನ ಇಂದಾವರ ಗ್ರಾಮದ ನಿವಾಸಿಯಾಗಿದ್ದಾನೆ. ಕಳೆದ ಶನಿವಾರ ತನ್ನ ಬೈಕ್ ನಲ್ಲಿ ತುಂಗಾನದಿಯ ಬಳಿ ಆಗಮಿಸಿ ನದಿಯ ದಡದಲ್ಲಿಯೇ ಬೈಕ್ ನಿಲ್ಲಿಸಿ ನಾಪತ್ತೆಯಾಗಿದ್ದ. ಬೈಕ್, ಆತನ ವಸ್ತುಗಳು ನದಿಯ ಬಳಿ ದೊರೆತ ಹಿನ್ನೆಲೆಯಲ್ಲಿ ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿತ್ತು.

Boy Committed suicide in Shivamogga
Boy Committed suicide in Shivamogga

ಇನ್ನೂ ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಅನುಮಾನದ ಮೇರೆಗೆ ಅಗ್ನಿಶಾಮಕ ಸಿಬ್ಬಂದಿ ನದಿಯಲ್ಲಿ ಶೋಧ ನಡೆಸಿದ್ದರು. ಬಳಿಕ ಸೋಮವಾರ ಯುವಕನ ಮೃತದೇಹ ಪತ್ತೆಯಾಗಿದೆ. ಇನ್ನೂ ಮೃತ ಯುವಕ ಜಯದೀಪ್ ಚೆನ್ನಾಗಿ ಓದುತ್ತಿದ್ದ. ಆದರೆ ತನಗೆ ಪ್ರೀತಿಸಲು ಯುವತಿ ಸಿಗುತ್ತಿಲ್ಲಾ ಎಂದು ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ. ಇದರ ಜೊತೆಗೆ ಆನ್ ಲೈನ್ ನಲ್ಲಿ ಸಹ ಹಣ ಹೂಡಿಕೆ ಮಾಡಲು ಸಾಲ ಮಾಡಿಕೊಂಡಿದ್ದನಂತೆ. ಈ ಕಾರಣಗಳಿಂದ ಮನನೊಂದ ಜಯದೀಪ್ ವಾಟ್ಸಾಪ್ ಸ್ಟೇಟಸ್ ನಲ್ಲಿ ಡೆತ್ ನೋಟ್ ಬರೆದಿಟ್ಟುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನೂ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Leave a Comment

Your email address will not be published. Required fields are marked *

Scroll to Top