Wednesday, July 9, 2025
HomeNationalSad News : ಬ್ರೇಕ್ ಫಾಸ್ಟ್ ಗೆ ಅವಲಕ್ಕಿ ಬದಲಿಗೆ ಡ್ರೈ ಪ್ರೂಟ್ಸ್ ಕೊಟ್ಟಿದ್ದಕ್ಕೆ, ಕೋಪಗೊಂಡ...

Sad News : ಬ್ರೇಕ್ ಫಾಸ್ಟ್ ಗೆ ಅವಲಕ್ಕಿ ಬದಲಿಗೆ ಡ್ರೈ ಪ್ರೂಟ್ಸ್ ಕೊಟ್ಟಿದ್ದಕ್ಕೆ, ಕೋಪಗೊಂಡ ಪತ್ನಿ ಆತ್ಮಹತ್ಯೆ ಮಾಡಿಕೊಂಡ್ಲು…!

ಗಂಡ-ಹೆಂಡತಿ ನಡುವಣ ಜಗಳ ತಿಂದು ಮಲಗುವ ತನ ಎಂದು ಹೇಳಲಾಗುತ್ತದೆ. ಆದರೆ ಕೆಲವೊಂದು ಜಗಳಗಳು ಅತಿರೇಕಕ್ಕೆ ಹೋಗಿ ಕೊಲೆಗಳು, ಆತ್ಮಹತ್ಯೆಗಳಂತಹ ಘಟನೆಗಳೂ (Sad News) ಸಹ ನಡೆದಿದೆ. ಕೆಲವೊಮ್ಮೆ ಕ್ಷುಲ್ಲಕ ಕಾರಣದಿಂದಲೂ ಸಹ ದೊಡ್ಡ ಮಟ್ಟದ ಪರಿಣಾಮ ಬೀರಿರುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಪತಿಯೊಬ್ಬ ತಿಂಡಿಗಾಗಿ ಅವಲಕ್ಕಿ ಕೊಡುವ ಬದಲು ಬರಿ ಡ್ರೈ ಪ್ರೂಟ್ಸ್ ನೀಡಿದ ಕಾರಣದಿಂದ ಪತ್ನಿ (Sad News) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಈ ಸುದ್ದಿ ವೈರಲ್ ಆಗುತ್ತಿದೆ.

ಅವಲಕ್ಕಿ ಬದಲು ಡ್ರೈ ಪ್ರೂಟ್ಸ್ ಕೊಟ್ಟಿದ್ದೆ ತಪ್ಪಾಯ್ತಾ?

ಗಂಡ ಹೆಂಡತಿ ನಡುವೆ ಜಗಳಗಳು ಸಾಮಾನ್ಯ ಎಂದೇ ಹೇಳಬಹುದು. ಎಲ್ಲವನ್ನೂ ಹೊಂದಾಣಿಕೆ ಮಾಡಿಕೊಂಡು ಹೋಗೋದೆ ಜೀವನ ಎಂದು ಹೇಳಲಾಗುತ್ತದೆ. ಊಟ, ಮಕ್ಕಳನ್ನು ನೋಡಿಕೊಳ್ಳುವ ವಿಚಾರ ಸೇರಿದಂತೆ ಹಲವು ಕಾರಣಗಳಿಂದ ದಂಪತಿಯ ನಡುವೆ ಗಲಾಟೆಗಳು ನಡೆಯುತ್ತಿರುತ್ತವೆ. ಸಾಮಾನ್ಯವಾಗಿ ಸಣ್ಣ-ಪುಟ್ಟ ಗಲಾಟೆಗಳು ಎಂದಿಗೂ ಆತ್ಮಹತ್ಯೆ ಅಥವಾ ಕೊಲೆ ಮಾಡುವ ಹಂತಕ್ಕೆ ಹೋಗುವುದಿಲ್ಲ. ಆದರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಬೆಳಗಿನ ತಿಂಡಿ ವಿಚಾರಕ್ಕಾಗಿ ಶುರುವಾದ ಜಗಳ ಆತ್ಮಹತ್ಯೆಯೊಂದಿಗೆ ಕೊನೆಗೊಂಡಿದೆ. ಮಹಿಳೆಯೊಬ್ಬಳು ಬೆಳಗಿನ ಉಪಹಾರಕ್ಕಾಗಿ ತನಗೆ ಇಷ್ಟವಾದ ಅವಲಕ್ಕಿ ಮಾಡದೇ ಬರೀ ಡ್ರೈ ಪ್ರೂಟ್ಸ್ ತಿನ್ನಲು ಕೊಟ್ಟಿದ್ದಾನೆಂದು ಕೋಪಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

woman life ends because hubby served dry fruits
woman life ends because hubby served dry fruits

ಅಂದಹಾಗೆ ಈ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‍ ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಪತಿ ಅವಲಕ್ಕಿ ಮಾಡಿಲ್ಲ ಅಂತಾ ಹೆಂಡತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಮುರಾರ್‌ ಪ್ರದೇಶದ ಬಾಲ್ಕಿಶನ್‌ ಜದೌನ್‌ ಹಾಗೂ ಕವಿತಾ ಎಂಬ ಜೋಡಿ ಕಳೆದ ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಮದುವೆಯಾದಾಗಿನಿಂದ ಇಬ್ಬರೂ ಬಹಳ ಸಂತೋಷದಿಂದ ಜೀವನ ನಡೆಸುತ್ತಿದ್ದರು. ಕಳೆದ ಶನಿವಾರ ಆ.31 ರಂದು ಕವಿತಾ ಬೆಳಿಗಿನ ಉಪಾಹಾರಕ್ಕಾಗಿ ಅವಲಕ್ಕಿಯನ್ನು ಮಾಡಿಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ ಪತಿ ಅವಲಕ್ಕಿ ಬದಲಿಗೆ ಡ್ರೈ ಪ್ರೂಟ್ಸ್ ನೀಡಿದ್ದಾನೆ. ಇದರಿಂದ ಕೋಪಗೊಂಡ ಕವಿತಾ ಸೀದಾ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಲೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular