2.2 C
New York
Sunday, February 16, 2025

Buy now

Andhra – Telangana Flood: ಮಳೆಗೆ ತತ್ತರಿಸಿದ ಆಂಧ್ರ ತೆಲಂಗಾಣ, ಕೋಟಿ ದೇಣಿಗೆ ನೀಡಿದ ಜೂನಿಯರ್ ಎನ್.ಟಿ.ಆರ್…!

ಸದ್ಯ ಆಂಧ್ರ ಹಾಗೂ ತೆಳಂಗಾಣದಲ್ಲಿ ಧಾರಾಕಾರ (Andhra – Telangana Flood) ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರು ಆಹಾರ ನೀರು ಇಲ್ಲದೇ ಪರದಾಡುವಂತಾಗಿದೆ. ಸರ್ಕಾರಗಳೂ ಸಹ ಸಂತ್ರಸ್ತರನ್ನು ರಕ್ಷಣೆ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ನಡುವೆ ಅನೇಕ ಗಣ್ಯರು ಸಂತ್ರಸ್ತರಿಗೆ ನೆರವಾಗುತ್ತಿದ್ದಾರೆ. ಇದೀಗ ಟಾಲಿವುಡ್ ಸ್ಟಾರ್‍ ನಟ ಜೂನಿಯರ್‍ ಎನ್.ಟಿ.ಆರ್‍ ನೆರೆ ಸಂತ್ರಸ್ತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ (Andhra – Telangana Flood) ಒಂದು ಕೋಟಿ ದೇಣಿಗೆ ನೀಡಿದ್ದಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ತಲಾ 50 ಲಕ್ಷ ದೇಣಿಗೆ ನೀಡಿ (Andhra – Telangana Flood) ಮಾನವೀಯತೆ ಮೆರೆದಿದ್ದಾರೆ.

Junior NTR Donation of crores to AP Telangana Flood
Junior NTR Donation to AP Telangana Flood

ಆಂಧ್ರಪ್ರದೇಶ ಹಾಗೂ ತೆಲಂಗಾಣ ಎರಡೂ ರಾಜ್ಯಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಕೇರಳ ರಾಜ್ಯದ ವಯನಾಡಿನಲ್ಲಿ ಭಾರಿ ಭೂ ಕುಸಿತ ಸಂಭವಿಸಿ ಅಪಾರ ಸಾವು ನೋವು ಸಂಭವಿಸಿತ್ತು. ಇದೀಗ ಅದೇ ಮಾದರಿಯಲ್ಲಿ ಭಾರಿ ಮಳೆಗೆ ಆಂಧ್ರ ಹಾಗೂ ತೆಲಂಗಾಣ ತತ್ತರಿಸಿ (Andhra – Telangana Flood) ಹೋಗಿದೆ. ಅನೇಕ ನಟರು ನೆರೆ ಸಂತ್ರಸ್ತರಿಗೆ ನೆರವಾಗಿದ್ದಾರೆ. ಇದೀಗ ಪ್ಯಾನ್ ಇಂಡಿಯಾ ಸ್ಟಾರ್‍ ಜೂನಿಯರ್‍ ಎನ್.ಟಿ.ಆರ್‍ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಒಂದು ಕೋಟಿ ದೇಣಿಗೆ ನೀಡಿದ್ದಾರೆ. ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲಾ 50 ಲಕ್ಷ ದೇಣಿಗೆ ನೀಡಿ (Andhra – Telangana Flood)  ಮಾನವೀಯತೆ ಮರೆದಿದ್ದಾರೆ. ಈ ಸಂಬಂಧ ತಮ್ಮ ಟ್ವಿಟರ್‍ ಖಾತೆಯಲ್ಲಿ ಪೋಸ್ಟ್ ಸಹ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

Junior NTR Donation to AP Telangana Flood
Junior NTR Donation to AP Telangana Flood

ಇನ್ನೂ ಕಳೆದೆರಡು ದಿನಗಳ ಹಿಂದೆಯಷ್ಟೆ ನಟ ಜೂನಿಯರ್‍ ಎನ್.ಟಿ.ಆರ್‍, (Junior NTR)ಅವರ ತಾಯಿ ಹಾಗೂ ಪತ್ನಿಯೊಂದಿಗೆ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ಡಿವೈನ್ ಸ್ಟಾರ್‍ ರಿಷಭ್ ಶೆಟ್ಟಿ (Rishab Shetty) ಹಾಗೂ ಪ್ರಶಾಂತ್ ನೀಲ್ (Prashanth Neel) ರವರೊಂದಿಗೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ಜೂನಿಯರ್‍ ಎನ್.ಟಿ.ಆರ್‍ ರವರ ತಾಯಿ ಮೂಲತಃ ಕುಂದಾಪುರದವರು. ಈ ಹಿನ್ನೆಲೆಯಲ್ಲಿ ತಮ್ಮ ತಾಯಿಯ ಬಹುದಿನಗಳ ಬೇಡಿಕೆಯಂತೆ ತಾಯಿಯ ಹುಟ್ಟುಹಬ್ಬದ ನಿಮಿತ್ತ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಸೆ.2 ರಂದು ಕುಂದಾಪುರದ ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಾಲಯಕ್ಕೂ ಭೇಟಿ ನೀಡಿದ್ದರು.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles