Road Problem: ರಸ್ತೆಯಲ್ಲಿ ಕೆಟ್ಟು ನಿಂತ ಲಾರಿ, ಅಧಿಕಾರಿಗಳ ವಿರುದ್ದ ಸಾರ್ವಜನಿಕರ ಆಕ್ರೋಷ, ಒಂದು ದಿನದ ಬಳಿಕ ಲಾರಿ ತೆರವು….!

Road Problem – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ರಾಮಪಟ್ಟಣ ರಸ್ತೆಯಲ್ಲಿ ಲಾರಿಯೊಂದು ಕೆಟ್ಟು ನಿಂತು ದಿನ ಕಳೆದರೂ ತೆರವುಗೊಳಿಸದ ಹಿನ್ನೆಲೆಯಲ್ಲಿ ಈ ರಸ್ತೆಯ ಮೂಲಕ ಸಂಚರಿಸುವಂತಹ ವಾಹನಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಅನಾನುಕೂಲವಾಗಿದ್ದು, ಈ ಸಂಬಂಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣಕುರುಡು ಪ್ರದರ್ಶನ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಷ ಹೊರಹಾಕಿದ್ದಾರೆ. ಆ.9 ರ ಸಂಜೆ ಸಮಯಕ್ಕೆ ಲಾರಿಯನ್ನು ಅಲ್ಲಿಂದ ತೆರವುಗೊಳಿಸಲಾಗಿದೆ.

ಈ ವೇಳೆ ದಲಿತ ಮುಖಂಡ ಜಿ.ವಿ.ಗಂಗಪ್ಪ ಮಾತನಾಡಿ, ಗುಡಿಬಂಡೆ ಪಟ್ಟಣದಿಂದ ರಾಮಪಟ್ಟಣ ಕಡೆಗೆ ಹೋಗುವಂತಹ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ (Road Problem) ಆ.8 ರ ಮದ್ಯಾಹ್ನ ಲಾರಿಯೊಂದು ಕೆಟ್ಟು ನಿಂತಿದೆ. ಇದರ ಪರಿಣಾಮವಾಗಿ ಈ ರಸ್ತೆಯಲ್ಲಿ ಸಂಚರಿಸುವಂತಹ ವಾಹನಗಳಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ತುಂಬಾನೆ ಸಮಸ್ಯೆಯಾಗಿದೆ. ಅದರಲ್ಲೂ ಶಾಲಾ ವಿದ್ಯಾರ್ಥಿಗಳು ಹಾಗೂ ರಾಮಪಟ್ಟಣ ದ ಕಡೆಯಿಂದ ಬರುವಂತಹ ಗ್ರಾಮಸ್ಥರಿಗೆ ತುಂಬಾನೆ (Road Problem) ಕಿರಿಕಿರಿಯಾಗಿದೆ. ಇದೇ ರಸ್ತೆಯಲ್ಲಿ ಹಲವು ಪ.ಪಂ. ಸದಸ್ಯರೂ ಸಹ ಓಡಾಡುತ್ತಿರುತ್ತಾರೆ. ಆದರೂ ಅವರು ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮಾತ್ರ ಜನಪ್ರತಿನಿಧಿಗಳಾದ್ದಂತಿದೆ. ಜನರ ಸಮಸ್ಯೆಗಳನ್ನು (Road Problem) ಆಲಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

Road Problem in Gudibande 0

ಇನ್ನೂ ಪಟ್ಟಣದ (Road Problem) ಮುಖ್ಯರಸ್ತೆ ಅಂದರೇ ಪಿ,ಜಿ ರಸ್ತೆ ಸಹ ಇದೇ ರೀತಿಯಲ್ಲಿ ಕಿರಿದಾಗಿ ಅನೇಕ ಅಪಘಾತಗಳಿಗೆ ಕಾರಣವಾಗಿತ್ತು. ಸುಮಾರು ವರ್ಷಗಳ ಹೋರಾಟದ ಬಳಿಕ ರಸ್ತೆ ಅಗಲೀಕರಣಗೊಂಡು ಇದೀಗ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ ಇದರಿಂದ ಕೆಲವರಿಗೆ ಅನಾನುಕೂಲವಾಗಿರಬಹುದು, ಆದರೆ ಅಭಿವೃದ್ದಿ ಆಗಿದೆ. ಅದೇ ರೀತಿ ರಾಮಪಟ್ಟಣ ರಸ್ತೆಯೂ ಅಗಲೀಕರಣವಾಗಬೇಕು. ಇಲ್ಲವಾದರೇ ಬೇರೆ ಮಾರ್ಗವನ್ನಾದರೂ (Road Problem) ಕಲ್ಪಿಸಿಕೊಡಬೇಕು. ಈ ರಸ್ತೆಯ ಮೂಲಕ ಪ್ರತಿನಿತ್ಯ ವಿದ್ಯಾರ್ಥಿಗಳು, ರೋಗಿಗಳು, ಸಾರ್ವಜನಿಕರು ಸಂಚರಿಸುತ್ತಿರುತ್ತಾರೆ. ಒಂದು ಬಸ್ ಬಂದರೇ ಮತ್ತೊಂದು (Road Problem) ಕಡೆಯಿಂದ ಬೈಕ್ ಸಹ ಸಂಚರಿಸಲು ಕಷ್ಟಕರವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಕುರಿತು ಅಗತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಅಷ್ಟೇಅಲ್ಲದೇ ಸ್ಥಳೀಯ ಇಲಾಖೆಗಳ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ವಾಸ್ತವ್ಯ ಹೂಡಬೇಕಾಗಿದೆ. ತಹಸೀಲ್ದಾರ್‍, ಪಪಂ ಅಧಿಕಾರಿಗಳು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕೆಂದು ನಾನೇ ಜಿಲ್ಲಾಧಿಕಾರಿಗಳಿಗೆ ಮನವಿ ಸಹ ಮಾಡಿದ್ದೇನೆ. ಆದರೆ ಇಲ್ಲಿಯವರೆಗೂ ಅದು ಪಾಲನೆಯಾಗಿಲ್ಲ. ಇನ್ನಾದರೂ ಜಿಲ್ಲಾಧಿಕಾರಿಗಳು ಈ ಕುರಿತು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಈ ಸಮಯದಲ್ಲಿ ದಲಿತ ಸಂಘಟನೆ ಹಾಗೂ ಸ್ಥಳೀಯರು ಹಾಜರಿದ್ದರು.

Leave a Reply

Your email address will not be published. Required fields are marked *

Next Post

Har Ghar Triranga - ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಂಡ ಆರ್.ಮಿಥುನ್ ರೆಡ್ಡಿ, ಎಲ್ಲರೂ ತಮ್ಮ ಡಿಪಿ ಬದಲಿಸುವಂತೆ ಮನವಿ….!

Sat Aug 10 , 2024
Har Ghar Triranga-ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದಾದ್ಯಂತ ‘ಹರ್ ಘರ್ ತಿರಂಗಾ’ (Har Ghar Triranga) ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಸಾಮಾಜಿಕ ಜಾಲತಾಣ ಖಾತೆಗಳ ಪ್ರೊಫೈಲ್ ಚಿತ್ರಗಳಲ್ಲಿ ತ್ರಿವರ್ಣ ಧ್ವಜ ಹಾಕುವಂತೆ ಮನವಿ ಮಾಡಿದ್ದು ಈ ಅಭಿಯಾನದಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಯುವ ಮುಖಂಡರಾದ ಆರ್.ಮಿಥುನ್ ರೆಡ್ಡಿ ಅವರು ಭಾಗವಹಿಸಿದ್ದಾರೆ. ಸಾಮಾಜಿಕ ಜಾಲತಾಣ ಪೋಸ್ಟ್ ಮಾಡಿರುವ ಅವರು, ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ (Har Ghar […]
Mithun Reddy independence Day statement
error: Content is protected !!