Love Story: ತಾಯಿಯ ಆಭರಣ ಮಾರಿ, ಗರ್ಲ್ ಫ್ರೆಂಡ್ ಗೆ ಐಪೋನ್ ಕೊಡಿಸಿದ 9ನೇ ತರಗತಿ ಬಾಲಕ…..!

Love Story – ಪ್ರೇಯಸಿಗೆ ಐಪೋನ್ ಗಿಫ್ಟ್ ಕೊಡಲು 9ನೇ ತರಗತಿಯ ಬಾಲಕನೋರ್ವ ತನ್ನ ತಾಯಿಯ ಆಭರಣಗಳನ್ನೇ ಮಾರಿಬಿಟ್ಟಿದ್ದಾನೆ. ಯಾರಿಗೂ ತಿಳಿಯದಂತೆ ಬಂಗಾರದ ಆಭರಣಗಳನ್ನು ಯಾರಿಗೂ ತಿಳಿಯದೇ ಮಾರಿಬಿಟ್ಟಿದ್ದಾನೆ. ಬಳಿಕ ಮೊಬೈಲ್ ಅಂಗಡಿಗೆ ಹೋಗಿ ದುಬಾರಿ ಐಪೋನ್ ಖರೀದಿ ಮಾಡಿದ್ದಾನೆ. ಐಪೋನ್ ಖರೀದಿಸಿ ತನ್ನ (Love Story) ಪ್ರೇಯಸಿಗೆ ನೀಡಿದ್ದಾನೆ. ಇನ್ನೂ ಈ ವಿಚಾರ ಪೊಲೀಸರವರೆಗೂ ತಲುಪಿದ್ದು, ವಿಚಾರಣೆ ನಡೆಸಿದಾಗ ಬಾಲಕ (Love Story) ಸಿಕ್ಕಿಬಿದಿದ್ದಾನೆ. ಅಂದಹಾಗೆ ಈ ಘಟನೆ ದೆಹಲಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

son stolen mom jewelary for buying iphone 0

ದೆಹಲಿಯ ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಯೋರ್ವ ತನ್ನ (Love Story) ಗರ್ಲ್ ಫ್ರೆಂಡ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಐಪೋನ್ ಗಿಫ್ಟ್ ಕೊಡಲು ಪ್ಲಾನ್ ಮಾಡಿದ್ದಾನೆ. ಆದರೆ ದುಬಾರಿಯಾದ ಐಪೋನ್ ಖರೀದಿಸಲು ಹಣಕ್ಕಾಗಿ ತನ್ನ ತಾಯಿಯ ಬಳಿ ಕೇಳಿದ್ದಾನೆ. ಆದರೆ ತಾಯಿ ಹಣ ನೀಡಲು ನಿರಾಕರಿಸಿದ್ದಾಳೆ. ಆದರೆ ಏನಾದರೂ ಮಾಡಿ ಐಪೋನ್ ಖರೀದಿಸಿ (Love Story) ಗರ್ಲ್ ಫ್ರೆಂಡ್ ಗೆ ಕೊಡಬೇಕು ಎಂದು ನಿರ್ಧರಿಸಿ ಕಳ್ಳತನ ಮಾಡಲು ಮುಂದಾಗಿದ್ದಾನೆ. ಮನೆಯಲ್ಲಿದ್ದ ತಾಯಿಯ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ (Love Story) ಮಾರಿಬಿಟ್ಟಿದ್ದಾನೆ. ಮನೆಯಲ್ಲಿದ್ದ  ಎರಡು ಬಂಗಾರದ ಚೈನ್, ಕಿವಿಯೋಲೆ ಕಳ್ಳತನ ಮಾಡಿದ್ದಾನೆ. ಇನ್ನೂ ಮನೆಯಲ್ಲಿನ ಬಂಗಾರ ಕಾಣೆಯಾದ ಕೂಡಲೇ ಆ ತಾಯಿ ಪೊಲಿಸರಿಗೆ ದೂರು ನೀಡಿದ್ದಾಳೆ.

son stolen mom jewelary for buying iphone 2

ಇನ್ನೂ ದೂರು ಪಡೆದುಕೊಂಡ ಪೊಲೀಸರು ಬಾಲಕನ ಮನೆಯ ವ್ಯಾಪ್ತಿಯಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಮನೆಯ ಅಕ್ಕಪಕ್ಕದವರನ್ನು ವಿಚಾರಣೆ ಮಾಡಿದಾಗ ಹೊರಗಿನ ವ್ಯಕ್ತಿಗಳು ಯಾರೂ ಈ ಕೆಲಸ ಮಾಡಿರಲ್ಲ ಎಂಬ ಅಭಿಪ್ರಾಯ ಪೊಲೀಸರಿಗೆ ಬಂದಿದೆ. ಜೊತೆಗೆ ಮಹಿಳೆಯ ಮಗನ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಕೂಡಲೇ ಬಾಲಕನ ಸ್ನೇಹಿತರನ್ನು ಸಹ ವಿಚಾರಣೆ ನಡೆಸಿದಾಗ ಅಸಲೀ ಸತ್ಯ ಹೊರಬಂದಿದೆ. ಮಹಿಳೆಯ ಮಗನೆ ಬಂಗಾರ ಕಳ್ಳತನ ಮಾಡಿ, ಅದನ್ನು ಮಾರಿ 50 ಸಾವಿರ ಬೆಲೆ ಐಪೋನ್ ಖರೀದಿ ಮಾಡಿ, ಆತನ ಗರ್ಲ್ ಫ್ರೆಂಡ್ ಗೆ (Love Story) ಗಿಫ್ಟ್ ಕೊಟ್ಟಿದ್ದಾನೆ ಎಂದು ಬಾಲಕನ ಸ್ನೇಹಿತರು ಹೇಳಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಬಾಲಕನ ತಾಯಿ ಶಾಕ್ ಆಗಿದ್ದಾರೆ.

Leave a Comment

Your email address will not be published. Required fields are marked *

Scroll to Top