KPSC Recruitment 2024 : 750 ಭೂಮಾಪಕರ ಹುದ್ದೆಗಳಿಗೆ ನೇಮಕಾತಿ ಆರಂಭ, ಡಿ.9 ರೊಳಗೆ ಅರ್ಜಿ ಸಲ್ಲಿಸಿ…!

KPSC Recruitment 2024 – ಕರ್ನಾಟಕ ಲೋಕಸೇವಾ ಆಯೋಗ (KPSC)ದಿಂದ ಮೂರು ವರ್ಷದ ವಯೋಮಿತಿ ಸಡಿಲಿಕೆಯೊಂದಿಗೆ ಮತ್ತೊಮ್ಮೆ ಭೂ ಮಾಪಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದಿಂದ (KPSC Recruitment 2024) 750 ಭೂಮಾಪಕ ಹುದ್ದೆಗಳ ಭರ್ತಿಗೆ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದ್ದು, ಈ ನೇಮಕಾತಿಗೆ ಸಂಬಂಧಿಸಿದಂತೆ ಕೆಲವೊಂದು ಪ್ರಮುಖ ಮಾಹಿತಿಗಳನ್ನು ಈ ಸುದ್ದಿಯ ಮೂಲಕ ಹಂಚಿಕೊಳ್ಳಲಾಗಿದೆ.

  • ಹುದ್ದೆಗಳ ವಿವರ : KPSC Recruitment 2024
    • ಹುದ್ದೆಗಳ ಹೆಸರು : ಲ್ಯಾಂಡ್ ಸರ್ವೇಯರ್ (ಹೆಚ್ ಕೆ ) – 190 ಹಾಗೂ ಲ್ಯಾಂಡ್ ಸರ್ವೇಯರ್ (ಆರ್ ಪಿಸಿ ) – 560, ಒಟ್ಟು ಹುದ್ದೆಗಳು : 750
    • ಉದ್ಯೋಗ ಸ್ಥಳ : ಕರ್ನಾಟಕ

KPSC land surveyors recruitment 0

  • ವಿದ್ಯಾರ್ಹತೆ : ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಬಿಇ ಅಥವಾ ವಿಜ್ಞಾನ ವಿಭಾಗದಲ್ಲಿ ಗಣಿತ ವಿಷಯದೊಂದಿಗೆ ಪಿಯುಸಿ ವಿದ್ಯಾರ್ಹತೆ ಅಥವಾ ಲ್ಯಾಂಡ್​ ಅಂಡ್​​ ಸಿಟಿ ಸರ್ವೇ ಪದವಿ ಪೂರ್ವ ಡಿಪ್ಲೊಮಾ ಅಥವಾ ಐಟಿಐ ಇನ್​ ಸರ್ವೆ ಟ್ರೇಡ್​ನಲ್ಲಿ ಉತ್ತೀರ್ಣರಾಗಿರಬೇಕು.
  • ವಯೋಮಿತಿ: ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 38 ವರ್ಷಗಳನ್ನು ಮೀರಿರಬಾರದು. ಅದಲ್ಲದೇ, ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ ವರ್ಷ, ಎಸ್ ಸಿ /ಎಸ್ ಟಿ /ಪ್ರವರ್ಗ-1 ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಅಂಗವಿಕಲ /ವಿಧವೆ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
  • ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿಗಳು: ರೂ.600/-, ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: ರೂ.300/-, ಮಾಜಿ ಸೈನಿಕ ಅಭ್ಯರ್ಥಿಗಳು: ರೂ.50/- ಹಾಗೂ ಎಸ್ ಸಿ / ಎಸ್ ಟಿ /ಪ್ರವರ್ಗ-I/ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ..
  • ಆಯ್ಕೆ ವಿಧಾನ: ಕನ್ನಡ ಭಾಷಾ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಸಂಪೂರ್ಣ ಮಾಹಿತಿಗೆ ಅಭ್ಯರ್ಥಿಗಳುkar.nic.in ಇಲ್ಲಿಗೆ ಭೇಟಿ ನೀಡಿ.
  • ಪ್ರಮುಖ ದಿನಾಂಕಗಳು:
    • ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 25-ನವೆಂಬರ್-2024
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 09-ಡಿಸೆಂಬರ್-2024

Leave a Reply

Your email address will not be published. Required fields are marked *

Next Post

Bank holidays: ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಮಾಹಿತಿ, ಡಿಸೆಂಬರ್ ಮಾಹೆಯಲ್ಲಿವೆ 17 ದಿನ ರಜೆ, ಕರ್ನಾಟಕದಲ್ಲಿ 8 ದಿನ ರಜೆ…!

Tue Nov 26 , 2024
Bank holidays- ಇಂದಿನ ಕಾಲದಲ್ಲಿ ಹಣಕಾಸಿನ ವ್ಯವಹಾರಗಳ ನಡೆಸಲು ಬ್ಯಾಂಕಿಂಗ್ ವ್ಯವಸ್ಥೆ ತುಂಬಾನೆ ಅತ್ಯವಶ್ಯಕವಾಗಿರುತ್ತದೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಿಲ್ಲದೇ ಇದ್ದ ಸಮಯದಲ್ಲಿ ಬ್ಯಾಂಕ್ ಗಳಿಗೆ ರಜೆಯಿದ್ದರೇ ಬ್ಯಾಂಕ್ ಗ್ರಾಹಕರು ಹಣಕಾಸಿನ ವ್ಯವಹಾರ ನಡೆಸಲು ತುಂಬಾನೆ ಕಷ್ಟ ಪಡುತ್ತಿದ್ದರು. ಆದರೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಬಂದ ಬಳಿಕ ಬ್ಯಾಂಕ್ ರಜೆಯಿದ್ದರೂ ಹಣಕಾಸಿನ ವ್ಯವಹಾರ ನಡೆಸಲು ಅಷ್ಟೊಂದು ಸಮಸ್ಯೆಯಾಗುವುದಿಲ್ಲ ಎಂದೇ ಹೇಳಬಹುದಾಗಿದೆ. ಸದ್ಯ ಡಿಸೆಂಬರ್‍ 2024 ಮಾಹೆಯಲ್ಲಿ ಎಷ್ಟು ದಿನಗಳು ಬ್ಯಾಂಕ್ ಗಳಿಗೆ […]
December bank holidays
error: Content is protected !!