Kerala Elephant Video : ವಯನಾಡ್-ಗುಂಡ್ಲುಪೇಟೆ ಹೆದ್ದಾರಿಯಲ್ಲಿ ವಾಹನದತ್ತ ನುಗ್ಗಿದ ಕಾಡಾನೆ: ಕೂದಲೆಳೆಯ ಅಂತರದಲ್ಲಿ ಪಾರಾದ ಕೇರಳ ಕುಟುಂಬ!

ಕಾಡಿನ ರಸ್ತೆಯಲ್ಲಿ ಪ್ರಯಾಣಿಸುವಾಗ ನಿಸರ್ಗದ ಸೊಬಗು ಎಷ್ಟು ಆಕರ್ಷಕವೋ, ಅಲ್ಲಿನ ಅನಿರೀಕ್ಷಿತ ಸವಾಲುಗಳು ಅಷ್ಟೇ ಭಯಾನಕ. ಇತ್ತೀಚೆಗೆ ಗುಂಡ್ಲುಪೇಟೆ–ಸುಲ್ತಾನ್ (Kerala Elephant Video) ಬತ್ತೇರಿ ಅರಣ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕುಟುಂಬವೊಂದಕ್ಕೆ ಅಂತಹದ್ದೇ ಒಂದು ಮೈ ಜುಂ ಎನಿಸುವ ಅನುಭವವಾಗಿದೆ.

ರಸ್ತೆಯಲ್ಲಿ ದಿಢೀರನೆ ಎದುರಾದ ಕಾಡಾನೆಯೊಂದು ಕಾರಿನತ್ತ ರೊಚ್ಚಿಗೆದ್ದು ಮುನ್ನುಗ್ಗಿ ಬಂದಿದ್ದು, ಚಾಲಕನ ಸಮಯಪ್ರಜ್ಞೆ ಹಾಗೂ ಅದೃಷ್ಟದಿಂದ ಕುಟುಂಬವೊಂದು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ. ಈ ಆತಂಕಕಾರಿ ದೃಶ್ಯವನ್ನು ಕಾರಿನಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

Kerala elephant video shows a wild elephant charging toward a car on the Sulthan Bathery-Gundlupet forest road

Kerala Elephant Video – ಗುಂಡ್ಲುಪೇಟೆ-ಸುಲ್ತಾನ್ ಬತ್ತೇರಿ ಹೆದ್ದಾರಿಯಲ್ಲಿ ನಡೆದಿದ್ದೇನು?

ಕೆಲವು ದಿನಗಳ ಹಿಂದೆಯಷ್ಟೆ ತ್ರಿಕ್ಕೈಪೆಟ್ಟಾದ ಸೇಂಟ್ ಥಾಮಸ್ ಜಾಕೋಬೈಟ್ ಚರ್ಚ್‌ನ ಫಾದರ್ ರೆಜಿ ಪೌಲ್ (Father Regi Paul) ಮತ್ತು ಅವರ ಕುಟುಂಬ ಗುಂಡ್ಲುಪೇಟೆಯಿಂದ ಸುಲ್ತಾನ್ ಬತ್ತೇರಿ ಮಾರ್ಗವಾಗಿ ತಮ್ಮೂರಿಗೆ ಮರಳುತ್ತಿದ್ದರು. ಎಲ್ಲವೂ ಸಹಜವಾಗಿತ್ತು, ಆದರೆ ಮುಂದಿನ ಕೆಲವೇ ನಿಮಿಷಗಳಲ್ಲಿ ಅವರ ಜೀವವೇ ಬಾಯಿಗೆ ಬಂದಂತಾಗಿತ್ತು.

ಸುಲ್ತಾನ್ ಬತ್ತೇರಿ-ಗುಂಡ್ಲುಪೇಟೆ ರಸ್ತೆಯಲ್ಲಿ ಸ್ತಬ್ಧವಾದ ಟ್ರಾಫಿಕ್

ಸುಲ್ತಾನ್ ಬತ್ತೇರಿ-ಗುಂಡ್ಲುಪೇಟೆ (Sulthan Bathery-Gundlupet road) ಅರಣ್ಯ ಮಾರ್ಗದಲ್ಲಿ ದಿಢೀರನೆ ಮೂರು ಕಾಡಾನೆಗಳು ರಸ್ತೆಯ ಕೆಳಗಿನಿಂದ ಮೇಲಕ್ಕೆ ಬಂದು ರಸ್ತೆ ದಾಟಲು ಮುಂದಾಗಿವೆ. ಇದನ್ನು ಗಮನಿಸಿದ ವಾಹನ ಸವಾರರು ತಕ್ಷಣವೇ ತಮ್ಮ ವಾಹನಗಳನ್ನು ನಿಲ್ಲಿಸಿದ್ದಾರೆ. ಆನೆಗಳು ಕಾಡಿನತ್ತ ಸಾಗಿದವು ಎಂದು ಖಚಿತಪಡಿಸಿಕೊಂಡ ಬಳಿಕವಷ್ಟೇ ವಾಹನಗಳು ನಿಧಾನವಾಗಿ ಮುಂದೆ ಸಾಗಲು ಆರಂಭಿಸಿದವು. Read this also : ಹಸುವಿನ ಕರುವಿಗೆ ಹಾಲೂಡಿಸಿ ತಾಯಿಯಾದ ಬೀದಿ ನಾಯಿ! ನೆಟ್ಟಿಗರ ಮನ ಗೆದ್ದ ಅಪರೂಪದ ಮಾತೃಪ್ರೇಮ…!

ದಿಢೀರ್ ಹಿಂದಿರುಗಿ ವಾಹನದತ್ತ ನುಗ್ಗಿ ಬಂದ ಗಜರಾಜ!

ಮೊದಲಿಗೆ ಒಂದು ಟ್ರಾವೆಲರ್ ವಾಹನ ಮುಂದೆ ಸಾಗಿತು. ಅದರ ಹಿಂದೆಯೇ ಒಂದು ಎರ್ಟಿಗಾ (Ertiga) ಕಾರು ಹೊರಟಿತ್ತು. ಈ ಎರ್ಟಿಗಾ ಕಾರಿನ ಹಿಂದೆಯೇ ಫಾದರ್ ರೆಜಿ ಪೌಲ್ ಅವರ ಕಾರು ಇತ್ತು. (Kerala Elephant Video) ಆದರೆ ಯಾರೂ ಊಹಿಸದ ರೀತಿಯಲ್ಲಿ, ಕಾಡಿನತ್ತ ತೆರಳಿದ್ದ ಆನೆಯೊಂದು ದಿಢೀರನೆ ರಸ್ತೆಯತ್ತ ಹಿಂದಿರುಗಿ ಆಕ್ರಮಣಕಾರಿಯಾಗಿ ಎರ್ಟಿಗಾ ಕಾರಿನತ್ತ ನುಗ್ಗಿ ಬಂದಿತು!

ಕೇವಲ ಕೆಲವೇ ಮೀಟರ್‌ಗಳ ಅಂತರದಲ್ಲಿ ಬದುಕುಳಿದ ಕುಟುಂಬ

ಹಿಂದೆ ವಾಹನಗಳ ಉದ್ದನೆಯ ಸಾಲು, ಮುಂದೆ ಕೋಪಗೊಂಡ ಕಾಡಾನೆ. ವಾಹನವನ್ನು ಹಿಂದಕ್ಕೆ ತೆಗೆದುಕೊಳ್ಳಲು ಸ್ವಲ್ಪವೂ ಜಾಗವಿರಲಿಲ್ಲ. ಫಾದರ್ ರೆಜಿ ಅವರ ಕಾರು ಮತ್ತು ಆನೆಯ ನಡುವೆ ಇದ್ದದ್ದು ಕೇವಲ ಕೆಲವೇ ಮೀಟರ್‌ಗಳ ಅಂತರ. ಆ ಕ್ಷಣದಲ್ಲಿ ಏನಾಗುತ್ತದೆಯೋ ಎಂಬ ಆತಂಕ ಮನೆಮಾಡಿತ್ತು. ಆದರೆ ಅದೃಷ್ಟವಶಾತ್, ವಾಹನದಲ್ಲಿದ್ದ ಯಾರಿಗೂ ಯಾವುದೇ ಗಾಯಗಳಾಗದೆ, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಫಾದರ್ ರೆಜಿ ಪೌಲ್, ಆ ಭಯಾನಕ ಕ್ಷಣಗಳನ್ನು ನೆನೆದು, ತಾವು ಹೇಗೆ ಆ ಘಟನೆಯಿಂದ ಪಾರಾದೆವು ಎಂಬುದನ್ನು ವಿವರಿಸಿದ್ದಾರೆ.

Kerala elephant video shows a wild elephant charging toward a car on the Sulthan Bathery-Gundlupet forest road

ಸಾಮಾಜಿಕ ಜಾಲತಾಣಗಳಲ್ಲಿ ಕಾಡಾನೆ ವಿಡಿಯೋ ವೈರಲ್

ಈ ಇಡೀ ಘಟನೆಯನ್ನು ಹಿಂದಿದ್ದ ವಾಹನ ಸವಾರರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಈ ವಿಡಿಯೋ (Kerala elephant video Link Here) ಈಗ ಇಂಟರ್ನೆಟ್‌ನಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ಅನೇಕರು ಕುಟುಂಬದ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಕೆಲವರು, ಆನೆಗಳು ಸಂಪೂರ್ಣವಾಗಿ (Kerala Elephant Video) ರಸ್ತೆ ದಾಟುವ ಮೊದಲೇ ವಾಹನವನ್ನು ಚಲಾಯಿಸಿದ ಚಾಲಕರ ಆತುರವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಅರಣ್ಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ನೆನಪಿರಬೇಕಾದ ಸುರಕ್ಷತಾ ಮುನ್ನೆಚ್ಚರಿಕೆಗಳು

ಕಾಡು ಪ್ರಾಣಿಗಳು ರಸ್ತೆ ದಾಟುವಾಗ ಚಾಲಕರು ಅತ್ಯಂತ ಎಚ್ಚರದಿಂದಿರಬೇಕು. ಪ್ರಾಣಿಗಳು ರಸ್ತೆ ದಾಟಿದ ತಕ್ಷಣ ವಾಹನ ಚಲಾಯಿಸದೆ, ಅವು ಕಾಡಿನೊಳಗೆ ಪೂರ್ಣವಾಗಿ ಸರಿಯುವವರೆಗೂ ಸಾಕಷ್ಟು ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಅಗತ್ಯ. ಅಲ್ಲದೆ ಪ್ರಾಣಿಗಳು ಸಮೀಪದಲ್ಲಿದ್ದಾಗ ಹಾರ್ನ್ ಮಾಡುವುದು, ಹೆಡ್‌ಲೈಟ್ ಡಿಪ್ಪರ್ ಬಳಸುವುದು ಅಥವಾ ಗಾಬರಿಯಿಂದ ಗಲಾಟೆ ಮಾಡುವುದರಿಂದ ಅವು ಇನ್ನಷ್ಟು ಪ್ರಚೋದನೆಗೊಳ್ಳಬಹುದು. ಅರಣ್ಯ ವ್ಯಾಪ್ತಿಯ ರಸ್ತೆಗಳಲ್ಲಿ ತಾಳ್ಮೆ ಹಾಗೂ ಶಾಂತತೆಯಿಂದ ವರ್ತಿಸುವುದೇ ಇಂತಹ ಸಂಭವನೀಯ ಅಪಾಯಗಳಿಂದ ಪಾರಾಗಲು ಏಕೈಕ ದಾರಿ.

Leave a Comment

Your email address will not be published. Required fields are marked *

Scroll to Top