Leopard Attack – ಸಾಮಾನ್ಯವಾಗಿ ಹೇಳಿದ್ರೆ, ವನ್ಯಜೀವಿ ಸಫಾರಿ (Wildlife Safari) ಅಂದ್ರೆನೇ ಒಂದು ಥ್ರಿಲ್ಲಿಂಗ್ ಅನುಭವ. ಅದ್ರಲ್ಲೂ ನಮ್ಮ ಕರ್ನಾಟಕದ ಹೆಮ್ಮೆಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ (Bannerghatta National Park) ಅಂತೂ ಚಿರತೆ ಮತ್ತು ಹುಲಿಗಳನ್ನ ಹತ್ತಿರದಿಂದ ನೋಡೋಕೆ ಫೇಮಸ್. ಆದ್ರೆ, ಗುರುವಾರ ಮಧ್ಯಾಹ್ನ ಇಲ್ಲಿ ನಡೆದ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಚೆನ್ನೈನಿಂದ ಕುಟುಂಬದವರ ಜೊತೆ ಬಂದಿದ್ದ ವೃದ್ಧ ಮಹಿಳೆ ವಹಿತಾ ಬಾನು (56) ಅವರು ಸಫಾರಿ ಬಸ್‌ನಲ್ಲಿದ್ದಾಗ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ.

Leopard Attack – ವಿಡಿಯೋದಲ್ಲಿ ಏನಿದೆ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಸಫಾರಿ ಬಸ್‌ನ ಮುಂದೆ ಆರಾಮವಾಗಿ ಕುಳಿತಿದ್ದ ಚಿರತೆ, ಪ್ರವಾಸಿಗರತ್ತ ನಡೆದು ಬಂದಿದೆ. ಬಸ್‌ನ ಕಿಟಕಿಯ ಬಳಿ ಬಂದು, ದಿಢೀರನೆ ಬಸ್ ಮೇಲೆ ಹಾರಿದೆ. ಚಿರತೆಯು ಕಿಟಕಿಯಲ್ಲಿದ್ದ ಜಾಳಿಗೆಯ (Metal Wire Mesh) ಸಣ್ಣ ಅಂತರದ ಮೂಲಕ ತನ್ನ ಕೈಯನ್ನು ಒಳಗೆ ತೂರಿಸಿ, ಮಹಿಳೆಯ ಬಟ್ಟೆಯನ್ನು ಹಿಡಿದು ಎಳೆದಿದೆ.
ಪ್ರವಾಸಿಗರೆಲ್ಲಾ ಗಾಬರಿಗೊಂಡು ಮಹಿಳೆಯ ಸಹಾಯಕ್ಕೆ ಧಾವಿಸಿದ್ದಾರೆ. ಕೊನೆಗೂ ಬಟ್ಟೆ ಹರಿದುಹೋಗಿ, ಉಳಿದ ಪ್ರವಾಸಿಗರು ಕಿಟಕಿಯನ್ನು ಮುಚ್ಚಲು ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಜಾಳಿಗೆ ಇದ್ದಿದ್ದರಿಂದ ಚಿರತೆ ಒಳಗೆ ಬರಲು ಸಾಧ್ಯವಾಗಿಲ್ಲ. ಬಟ್ಟೆ ಎಳೆಯುವ ಮತ್ತು ಚಿರತೆಯ ಉಗುರಿನಿಂದಾಗಿ ವಹಿತಾ ಬಾನು ಅವರ ಕೈಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣಕ್ಕೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಆಕೆ ಸ್ಥಿರವಾಗಿದ್ದಾರೆ ಎಂದು ತಿಳಿದುಬಂದಿದೆ. Read this also : ಒಂಟಿ ಕೈಯಲ್ಲಿ ಬೃಹತ್ ಹೆಬ್ಬಾವು ಹಿಡಿದ ಮಹಿಳೆ, ವೀಡಿಯೊ ವೈರಲ್, ನೆಟ್ಟಿಗರು ಫಿದಾ…!
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Leopard Attack – ಇದೇ ಮೊದಲಲ್ಲ, ಪದೇ ಪದೇ ಆಗ್ತಿದೆ ಇಂತಹ ಘಟನೆಗಳು!
ಇದೇ ರೀತಿ ಚಿರತೆ ದಾಳಿಯ ಘಟನೆ ಬನ್ನೇರುಘಟ್ಟದಲ್ಲಿ ನಡೆದಿರೋದು ಇದೇ ಮೊದಲಲ್ಲ. ಕಳೆದ ವರ್ಷ ಕೂಡ, ಇದೇ ಸಫಾರಿ ವಲಯದಲ್ಲಿ ಚಿರತೆಯೊಂದು ಬಸ್ ಮೇಲೆ ಹಾರಿ ಪ್ರವಾಸಿಗರನ್ನು ಆತಂಕಕ್ಕೆ ದೂಡಿತ್ತು. ಆಗಲೂ ಬಸ್ ಚಾಲಕನ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿತ್ತು. ಕಳೆದ ಆಗಸ್ಟ್‌ನಲ್ಲಿ ಸಹ 12 ವರ್ಷದ ಬಾಲಕನ ಕೈಗೆ ಚಿರತೆ ಉಗುರಿನಿಂದ ಗಾಯವಾಗಿತ್ತು. ಈ ಘಟನೆಗಳು ಉದ್ಯಾನವನದಲ್ಲಿ ಪ್ರವಾಸಿಗರ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
