HomeStateಅದ್ದೂರಿಯಾಗಿ ನಡೆದ ಗುಡಿಬಂಡೆ ಏಡುಗರ ಅಕ್ಕಮ್ಮ ಕಾಯುಟ್ಲು ಪರುಷೆ

ಅದ್ದೂರಿಯಾಗಿ ನಡೆದ ಗುಡಿಬಂಡೆ ಏಡುಗರ ಅಕ್ಕಮ್ಮ ಕಾಯುಟ್ಲು ಪರುಷೆ

ಗುಡಿಬಂಡೆ: ಪಟ್ಟಣದ ಹೊರವಲಯದ ಐತಿಹಾಸಿಕ ಹಿನ್ನೆಲೆಯ ಏಡುಗರ ಅಕ್ಕಮ್ಮ ದೇವತೆಗೆ ಪ್ರತಿ ವರ್ಷದಂತೆ ಈ ವರ್ಷವೂ ಎರಡು ದಿನಗಳ ಗ್ರಾಮ ದೇವತೆ ಜಾತ್ರೆಯ ಅಂಗವಾಗಿ ಬುಧವಾರ ಕಾಯಿ ಉಟ್ಲು ಪರುಷೆ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಗುಡಿಬಂಡೆ ಸೇರಿದಂತೆ ವಿವಿಧ ಕಡೆಯಿಂದ ನೂರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

utlu parishe 2

ಗುಡಿಬಂಡೆಯ ಏಳು ಗ್ರಾಮ ದೇವತೆಗಳ ಪೈಕಿ ಹಿರಿಯಳಾದ ಏಡುಗರ ಅಕ್ಕಮ್ಮ ದೇವತೆಗೆ  ಮಂಗಳವಾರ ಮತ್ತು ಬುಧವಾರ ಎರಡು ದಿನಗಳ ಗ್ರಾಮ ದೇವತೆ ಜಾತ್ರೆಯ ಅಂಗವಾಗಿ ಮಂಗಳವಾರ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ತಂಬಿಟ್ಟಿನಿಂದ ಮಾಡಿದ ದೀಪಗಳಿಗೆ ವಿವಿಧ ಹೂವಿನಿಂದ ಅಲಂಕರಿಸಿ ಪಟ್ಟಣದ ವಿವಿಧ ಗ್ರಾಮ ದೇವತೆಗಳಿಗೆ ದೀಪ ಬೆಳಗುವ 5 ಮತ್ತು 6ನೇ ವಾರ್ಡಿನ ವಾಲ್ಮೀಕಿ ನಗರದಲ್ಲಿ ನಡೆದಿದೆ.

ಏಡುಗರ ಅಕ್ಕಮ್ಮ, ಮುತ್ಯಾಲಮ್ಮ, ಸಪ್ಪಲಮ್ಮ, ಮಾರೇಮ್ಮ, ಕೋಲ್ಲಾಪುರಿ ಮಹಾಲಕ್ಷ್ಮೀ, ಗಂಗಮ್ಮ, ಸತ್ಯಮ್ಮ ಸೇರಿ ಏಳು ಅಮ್ಮನವರು ಪಟ್ಟಣದ ಗ್ರಾಮ ದೇವತೆಗಳಾಗಿದ್ದು ಶತಮಾನಗಳ ಹಿಂದೆ ಪ್ಲೇಗೂ ಹಾಗೂ ಇತರೆ ಮಾರಣಾಂತಿಕ ರೋಗಗಳು ಕಂಡು ಬಂದಗಾ ಗ್ರಾಮ ದೇವತೆಗಳಿಗೆ ಹರಿಕೆ ಮಾಡಿ ಕೂಂಡು ರೋಗಗಳು ವಾಸಿಯಾದ ಹಿನ್ನಲೇಯಲ್ಲಿ ವರ್ಷಕ್ಕೊಮ್ಮೆ ಜಾತ್ರೆ ಮಾಡಿ ಹರಿಕೆ ಒಪ್ಪಿಸುವ ಸಂಪ್ರದಾಯ ಇಂದಿಗೂ ಬೆಳೆದು ಬಂದಿದೆ. ಏಳು ಗ್ರಾಮ ದೇವತೆಗಳ ಪೈಕಿ ಕೊಲ್ಲಾಪುರಿ ಮಹಾಲಕ್ಷ್ಮೀ ದೇವತೆಯನ್ನು ಬಿಟ್ಟು ಉಳಿದ ಎಲ್ಲಾ ಗ್ರಾಮ ದೇವತೆಗಳಿಗೂ ಮಂಗಳವಾರದ ಈ ದಿನ ಪ್ರಾಣಿ ಬಲಿ ಕೂಡುವ ಮೂಲಕ ಹರಿಕೆ ತಿರಿಸುಕೂಳ್ಳುತ್ತಾರೆ. ಈ ಹಬ್ಬಕ್ಕೆ ವಿವಿಧ ಗ್ರಾಮಗಳಿಂದ ಬಂಧು ಬಳಗದವರು ಬಂದು ಎರಡು ದಿನಗಳು ಕಾಲ ಗ್ರಾಮ ದೇವತೆ ಹಬ್ಬದಲ್ಲಿ ಭಾಗವಹಿಸುತ್ತಾರೆ.

utlu parishe 1

ಜಾತ್ರೆ ಆಚರಣೆಯ ಅಂಗವಾಗಿ ಸೋಮವಾರ ಸಂಜೆ ಸುಮಾರು 60 ಅಡಿ ಎತ್ತರದ ಉಟ್ಲು ಮರವನ್ನು ಪತ್ರಿಷ್ಠಾಪನೆ ಮಾಡಿ ಬುಧವಾರ ಎತ್ತರವಾದ ಕಲ್ಲು ಕಂಬದ ಮೇಲೆ ನಿರ್ಮಿಸಿರುವ ತಿರುಗುವ ತೊಟ್ಟಿಲಲ್ಲಿ ಕುಳಿತು ಉದ್ದವಾದ ಹಗ್ಗಕ್ಕೆ ತೆಂಗಿನ ಕಾಯಿ ಕಟ್ಟಿ ತಿರುಗಿಸಲಾಗುತ್ತದೆ. ಹತ್ತಾರು ಯುವಕರು ಉದ್ದನೆಯ ದೊಣ್ಣೆಗಳನ್ನು ಹಿಡಿದು ಕಾಯಿ ಒಡೆಯಲು ಪ್ರಯತ್ನಿಸುತ್ತಿದ್ದರು. ಕಾಯಿ ವೇಗವಾಗಿ ವಿವಿಧ ಎತ್ತರಗಳಲ್ಲಿ ತಿರುಗಿಸಲ್ಪಡುವ ಕಾಯಿ ಒಡೆದವರಿಗೆ ಬಹುಮಾನ ನೀಡಲಾಗುತ್ತದೆ. ಈ ದೃಶ್ಯಗಳು ಪರಿಷೆಯಲ್ಲಿ ನೆರೆದಿದ್ದ ಜನರನ್ನು ರಂಜಿಸಿತ್ತು.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt