Savings Scheme : ಕೇಂದ್ರ ಸರ್ಕಾರದ ಬಂಫರ್ ಆಫರ್, ಪ್ರತಿ 3 ತಿಂಗಳಿಗೊಮ್ಮೆ ನಿಮ್ಮ ಅಕೌಂಟ್‌ಗೆ ಬರಲಿದೆ ₹50,000!

ಕಷ್ಟಪಟ್ಟು ದುಡಿದ ಹಣವನ್ನು ಎಲ್ಲೂ ಕಳೆದುಕೊಳ್ಳದೆ, ಸುರಕ್ಷಿತವಾಗಿ ಇಟ್ಟುಕೊಂಡು ಭವಿಷ್ಯದಲ್ಲಿ ದೊಡ್ಡ ಮೊತ್ತದ ಲಾಭ ಗಳಿಸಬೇಕು ಎಂಬುದು ಮಧ್ಯಮ ವರ್ಗದವರ (Savings Scheme) ದೊಡ್ಡ ಕನಸು. ನಿಮಗೂ ಇದೇ ಆಸೆ ಇದೆಯೇ? ಹಾಗಿದ್ದರೆ ನಿಮಗಾಗಿ ಒಂದು ಸೂಪರ್ ಸುದ್ದಿ ಇಲ್ಲಿದೆ. ಭಾರತ ಸರ್ಕಾರವು ಸಾರ್ವಜನಿಕರಿಗಾಗಿ ಹಲವು ಅದ್ಭುತ ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಪೋಸ್ಟ್ ಆಫೀಸ್ (ಅಂಚೆ ಕಚೇರಿ) ಯೋಜನೆಗಳು ಇತ್ತೀಚಿನ ದಿನಗಳಲ್ಲಿ ಸಖತ್ ಫೇಮಸ್ ಆಗುತ್ತಿವೆ.

Savings Scheme by India Post SCSS offering 8.20% annual interest with secure quarterly income for senior citizens.

ಇತರ ಖಾಸಗಿ ಹೂಡಿಕೆಗಳಿಗೆ ಹೋಲಿಸಿದರೆ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಬಡ್ಡಿ ದರ ಹೆಚ್ಚು. ಜೊತೆಗೆ ಕೇಂದ್ರ ಸರ್ಕಾರದ ಗ್ಯಾರಂಟಿ ಇರುವುದರಿಂದ ನಿಮ್ಮ ಹಣಕ್ಕೆ ನೂರಕ್ಕೆ ನೂರು ರಕ್ಷಣೆ ಇರುತ್ತದೆ. ಇಂತಹ ಯೋಜನೆಗಳಲ್ಲಿ ಸದ್ಯ ಹಿರಿಯ ನಾಗರಿಕರಿಗಾಗಿ ಇರುವ ಒಂದು ಯೋಜನೆ ಭಾರೀ ಸೌಂಡ್ ಮಾಡುತ್ತಿದೆ. ಅದೇ ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕಿಮ್ (SCSS). ಈ ಯೋಜನೆಯಲ್ಲಿ ಹಣ ಹೂಡಿದರೆ ಎಷ್ಟು ಲಾಭ ಸಿಗುತ್ತದೆ? ಬಡ್ಡಿ ದರ ಎಷ್ಟು? ಎಂಬ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

Savings Scheme – ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕಿಮ್ ಎಂದರೇನು?

ನಿಮ್ಮ ನಿವೃತ್ತಿ ಜೀವನದ ನಂತರ ಯಾವುದೇ ರಿಸ್ಕ್ ಇಲ್ಲದೆ, ಪ್ರತಿ ತಿಂಗಳು ಅಥವಾ ನಿಗದಿತ ಅವಧಿಗೆ ಉತ್ತಮ ಆದಾಯ ಬರಬೇಕು ಎಂದುಕೊಳ್ಳುವವರಿಗೆ ಇದು ಬೆಸ್ಟ್ ಆಪ್ಷನ್. ಹಿರಿಯ ನಾಗರಿಕರ (Savings Scheme) ಆರ್ಥಿಕ ಭದ್ರತೆಗಾಗಿ ಕೇಂದ್ರ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.

ಯಾವುದೇ ರಿಸ್ಕ್ ಇಲ್ಲದೆ ಪ್ರತಿ 3 ತಿಂಗಳಿಗೊಮ್ಮೆ ಆದಾಯ

ಹೌದು, ನೀವು ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಪ್ರತಿ ಮೂರು ತಿಂಗಳಿಗೊಮ್ಮೆ (ತ್ರೈಮಾಸಿಕ) ನಿಮ್ಮ ಬ್ಯಾಂಕ್ ಖಾತೆಗೆ ಬಡ್ಡಿಯ ಹಣ ನೇರವಾಗಿ ಜಮೆಯಾಗುತ್ತದೆ.

  • ಪ್ರಸ್ತುತ ಬಡ್ಡಿ ದರ: ಶೇಕಡಾ20% (8.20% p.a.)
  • ಬಡ್ಡಿ ಪಾವತಿ: ಪ್ರತಿ ತ್ರೈಮಾಸಿಕಕ್ಕೊಮ್ಮೆ

Savings Scheme by India Post SCSS offering 8.20% annual interest with secure quarterly income for senior citizens.

ಪ್ರತಿ 3 ತಿಂಗಳಿಗೆ ₹50,000 ಬಡ್ಡಿ ಪಡೆಯುವುದು ಹೇಗೆ?

ಒಂದು ಉದಾಹರಣೆಯ ಮೂಲಕ ಈ ಲೆಕ್ಕಾಚಾರವನ್ನು (Savings Scheme) ಅರ್ಥಮಾಡಿಕೊಳ್ಳೋಣ:

  • ನೀವು ಈ ಯೋಜನೆಯಲ್ಲಿ ಒಮ್ಮೆಲೆ ₹24.40 ಲಕ್ಷ ಹೂಡಿಕೆ ಮಾಡಿದರೆ, 8.20% ಬಡ್ಡಿ ದರದಂತೆ ಪ್ರತಿ 3 ತಿಂಗಳಿಗೆ ನಿಮ್ಮ ಖಾತೆಗೆ ಬರೊಬ್ಬರಿ ₹50,000 ಬಂದು ಬೀಳುತ್ತದೆ.
  • ಅಂದರೆ, ಒಂದು ವರ್ಷಕ್ಕೆ ನಿಮಗೆ ₹2 ಲಕ್ಷ ಬಡ್ಡಿ ಆದಾಯವೇ ಸಿಗುತ್ತದೆ!
  • ಈ ಯೋಜನೆಯ ಅವಧಿ 5 ವರ್ಷಗಳಾಗಿರುವುದರಿಂದ, ಒಟ್ಟು 5 ವರ್ಷಗಳಲ್ಲಿ ನಿಮಗೆ ಬಡ್ಡಿಯ ರೂಪದಲ್ಲಿಯೇ ₹10 ಲಕ್ಷ ಲಾಭ ಸಿಗುತ್ತದೆ.
  • 5 ವರ್ಷಗಳ ಮೆಚ್ಯೂರಿಟಿ ಅವಧಿ ಮುಗಿದ ನಂತರ, ನಿಮ್ಮ ಅಸಲು (ನೀವು ಹೂಡಿಕೆ ಮಾಡಿದ ₹24.40 ಲಕ್ಷ ಮೊತ್ತ) ಮತ್ತು ಉಳಿದ ಬಡ್ಡಿಯನ್ನು ನೀವು ಸುರಕ್ಷಿತವಾಗಿ ಹಿಂಪಡೆಯಬಹುದು. Read this also : ಅತ್ಯುತ್ತಮ ಉಳಿತಾಯ ಯೋಜನೆ: ₹15 ಲಕ್ಷ ಹೂಡಿಕೆ ಮಾಡಿ, 5 ವರ್ಷಗಳಲ್ಲಿ ₹22 ಲಕ್ಷ ಗಳಿಸಿ..!

ಗಮನಿಸಿ: ಕೇಂದ್ರ ಸರ್ಕಾರವು ಪ್ರತಿ ತ್ರೈಮಾಸಿಕಕ್ಕೊಮ್ಮೆ ಈ ಯೋಜನೆಗಳ (Savings Scheme) ಬಡ್ಡಿ ದರಗಳನ್ನು ಪರಿಶೀಲಿಸುತ್ತದೆ ಮತ್ತು ಮಾರುಕಟ್ಟೆಗೆ ತಕ್ಕಂತೆ ಬದಲಾಯಿಸಬಹುದು. ಆದರೆ ಹೆಚ್ಚಾಗಿ ಇದು ಸ್ಥಿರವಾಗಿರುತ್ತದೆ.

ಹಿರಿಯ ನಾಗರಿಕರ ಉಳಿತಾಯ ಯೋಜನೆಯ (SCSS) ಪ್ರಮುಖ ಪ್ರಯೋಜನಗಳು

ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ನಿಯಮಗಳು ಮತ್ತು ಲಾಭಗಳು ಇಲ್ಲಿವೆ:

  • ಕನಿಷ್ಠ ಹೂಡಿಕೆ: ಕೇವಲ ₹1,000 ದಿಂದ ನೀವು ಈ (Savings Scheme) ಖಾತೆಯನ್ನು ತೆರೆಯಬಹುದು. ಸಣ್ಣ ಮೊತ್ತದಿಂದಲೂ ಉಳಿತಾಯ ಶುರು ಮಾಡಬಹುದು.
  • ಗರಿಷ್ಠ ಹೂಡಿಕೆ: ಗರಿಷ್ಠ ಮಿತಿ ₹30 ಲಕ್ಷ. ನೀವು ₹30 ಲಕ್ಷಕ್ಕಿಂತ ಹೆಚ್ಚು ಹಣ ಜಮೆ ಮಾಡಲು ಬರುವುದಿಲ್ಲ. ಒಂದು ವೇಳೆ ನೀವು ಮೀರಿದ ಮೊತ್ತವನ್ನು ಡೆಪಾಸಿಟ್ ಮಾಡಿದರೆ, ಆ ಹೆಚ್ಚುವರಿ ಮೊತ್ತವನ್ನು ನಿಮಗೆ ಮರುಪಾವತಿಸಲಾಗುತ್ತದೆ ಅಥವಾ ಆ ಹೆಚ್ಚುವರಿ ಹಣಕ್ಕೆ ಕೇವಲ ‘ಸಾಮಾನ್ಯ ಪೋಸ್ಟ್ ಆಫೀಸ್ ಉಳಿತಾಯ ಖಾತೆ’ಯ ಕಡಿಮೆ ಬಡ್ಡಿ ದರ ಮಾತ್ರ ಅನ್ವಯವಾಗುತ್ತದೆ.
  • ಮೆಚ್ಯೂರಿಟಿ ಅವಧಿ: ಈ ಯೋಜನೆಯ ಲಾಕ್-ಇನ್ ಅವಧಿ 5 ವರ್ಷಗಳು. ಆದರೆ, 5 ವರ್ಷಗಳ ನಂತರ ನಿಮಗೆ ಇಚ್ಛೆ ಇದ್ದರೆ ಈ ಅವಧಿಯನ್ನು ಮತ್ತೊಂದು 3 ವರ್ಷಗಳವರೆಗೆ ವಿಸ್ತರಿಸಿಕೊಳ್ಳುವ ಅವಕಾಶವೂ ಇದೆ.

Savings Scheme by India Post SCSS offering 8.20% annual interest with secure quarterly income for senior citizens.

ತೆರಿಗೆ ವಿನಾಯಿತಿ ಮತ್ತು ಖಾತೆ ತೆರೆಯುವ ಸುಲಭ ವಿಧಾನ

  • ತೆರಿಗೆ ಲಾಭ: ಆದಾಯ ತೆರಿಗೆ ಕಾಯ್ದೆಯ (Income Tax Act) ಸೆಕ್ಷನ್ 80C ಅಡಿಯಲ್ಲಿ, ನೀವು ಹೂಡಿಕೆ ಮಾಡಿದ ಮೊತ್ತದ ಮೇಲೆ ₹1.50 ಲಕ್ಷದವರೆಗೆ ತೆರಿಗೆ ವಿನಾಯಿತಿ (Tax Deduction) ಪಡೆಯಬಹುದು. ಇದು ನಿಮ್ಮ ತೆರಿಗೆ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.
  • ಖಾತೆ ತೆರೆಯುವುದು ಹೇಗೆ?: ಈ ಅಕೌಂಟ್ ಓಪನ್ ಮಾಡುವುದು (Savings Scheme) ಅತ್ಯಂತ ಸರಳ. ಯಾವುದೇ ಮಧ್ಯವರ್ತಿಗಳಿಲ್ಲದೆ, ನೇರವಾಗಿ ನಿಮ್ಮ ಹತ್ತಿರದ ಅಂಚೆ ಕಚೇರಿಗೆ (Post Office) ಭೇಟಿ ನೀಡಿ. ಕೇವಲ ನಿಮ್ಮ ಆಧಾರ್ ಕಾರ್ಡ್ (Aadhaar Card), ಪ್ಯಾನ್ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅಳತೆಯ ಫೋಟೋಗಳಿದ್ದರೆ ಸಾಕು, ಕೆಲವೇ ನಿಮಿಷಗಳಲ್ಲಿ ಖಾತೆ ತೆರೆಯಬಹುದು.

ವಯಸ್ಸಾದ ಕಾಲದಲ್ಲಿ ಯಾರಿಗೂ ಹೊರೆಯಾಗದೆ, ತಮ್ಮದೇ ಆದ ಆದಾಯದಲ್ಲಿ ನೆಮ್ಮದಿ ಹಾಗೂ ಸ್ವತಂತ್ರ ಜೀವನ ನಡೆಸಲು ಬಯಸುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದ ಈ ‘SCSS ಯೋಜನೆ’ಯು ಅತ್ಯುತ್ತಮ ಆಯ್ಕೆಯಾಗಿದೆ!

Leave a Comment

Your email address will not be published. Required fields are marked *

Scroll to Top