0.9 C
New York
Sunday, February 16, 2025

Buy now

Sad News: ಕೋಲಾರದಲ್ಲಿ ಮದುವೆಯಾದ ಕೆಲವೇ ಗಂಟೆಗಳಲ್ಲಿ ಹೊಡೆದಾಟ, ವಧು ಸಾವು, ವರನ ಸ್ಥಿತಿ ಗಂಭೀರ….!

ಕೆಲವೊಂದು ವರ್ಷಗಳಿಂದ ಇಬ್ಬರೂ ಪ್ರೀತಿಸಿ, ಮನೆಯವರನ್ನು ತುಂಬಾ ಕಷ್ಟದಿಂದ ಒಪ್ಪಿಸಿ ಮದುವೆಯಾದ ಜೋಡಿ, ಮದುವೆಯಾದ ಕೆಲವೇ ಗಂಟೆಗಳಲ್ಲಿ ‌ಇಬ್ಬರ ನಡುವೆ (Sad News) ಗಲಾಟೆಯಾಗಿದೆ. ಈ ಗಲಾಟೆಯಲ್ಲಿ ಗಂಭೀರವಾಗಿ ಗಾಯಗೊಂಡ ವಧು ಮೃತಪಟ್ಟಿದ್ದಾರೆ, ವರನ ಪರಿಸ್ಥಿತಿ ಗಂಭೀರವಾಗಿದೆ (Sad News) ಎಂದು ತಿಳಿದುಬಂದಿದೆ.

ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿ ಮನೆಗೆ ಹೋದ ಜೋಡಿ ಕೆಲವೇ ಗಂಟೆಗಳಲ್ಲಿ (Sad News) ಹೊಡೆದಾಡಿಕೊಂಡಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆ.7ರ ಬೆಳಿಗ್ಗೆ ಚಂಬರಸನಹಳ್ಳಿ ಗ್ರಾಮದಲ್ಲಿ ಲಿಖೀತಶ್ರೀ ಹಾಗೂ ನವೀನ್ ಎಂಬ ಜೋಡಿಯ ಮದುವೆಯಾಗಿತ್ತು. ಅವರಿಬ್ಬರು ಸುಮಾರು ವರ್ಷಗಳ ಕಾಲ ಪ್ರೀತಿಸಿ ಮನೆಯವರನ್ನು ತುಂಬಾ ಕಷ್ಟದಿಂದಲೇ ಒಪ್ಪಿಸಿ ಮದುವೆಯಾದರು. ಇನ್ನೂ ಮದುವೆಯಾದ ಕೆಲವೇ ಗಂಟೆಗಳಲ್ಲಿ ಕೋಣೆಯಲ್ಲಿದ್ದ ಜೋಡಿ ಮಾರಕಾಸ್ತ್ರಗಳಿಂದ (Sad News) ಹೊಡೆದಾಡಿಕೊಂಡಿದ್ದಾರೆ. ಕೋಣೆಗೆ ಹೋದ ಇಬ್ಬರ ನಡುವೆ ಅದು ಏನಾಯ್ತೋ ಏನೋ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

Newly married couple quarrel in kolar 0

ಇನ್ನೂ ಗಲಾಟೆ (Sad News) ಜೋರಾಗುತ್ತಿದ್ದಂತೆ ಅದನ್ನು ಗಮನಿಸಿದ ಮನೆಯವರು ಇಬ್ಬರನ್ನು ಬಿಡಿಸಲು ಕೊಣೆಯ ಬಾಗಿಲು ಬಡಿದಿದ್ದಾರೆ. ಕೋಣೆಯ ಬಾಗಿಲು ತೆರೆಯದ ಕಾರಣ ಬಾಗಿಲು ಮುರಿದು ಒಳಗೆ ಹೋದ ಮನೆಯವರು ರಕ್ತಸ್ರಾವದಿಂದ ಬಿದ್ದ ನವದಂಪತಿಯನ್ನು ಹತ್ತಿರದ ಕೆಜಿಎಫ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಹೊಡೆದಾಟದಲ್ಲಿ (Sad News) ಗಂಭೀರವಾಗಿ ಗಾಯಗೊಂಡಿದ್ದ ವಧು ಲಿಖಿತಶ್ರೀ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಅತ್ತ ವರ ನವೀನ್ ಸ್ಥಿತಿ ಕೂಡ ಗಂಭೀರವಾಗಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ (Sad News) ಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಹೇಳಲಾಗಿದೆ. ಇನ್ನೂ ಸ್ಥಳಕ್ಕೆ ಅಂಡರ್‍ ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಲಾರದ ಚಂಬರಸನಹಳ್ಳಿ ಗ್ರಾಮದ ನವೀನ್ ಹಾಗೂ ಆಂಧ್ರಪ್ರದೇಶ ಮೂಲದ ಬೈನಪಲ್ಲಿ ಗ್ರಾಮದ ಲಿಖಿತಶ್ರೀ ಹಲವು ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದರು. ಆದರೆ ಜೋಡಿಯ ಪೋಷಕರು ಅವರ ಮದುವೆಗೆ ಒಪ್ಪಿರಲಿಲ್ಲವಂತೆ. ಇಬ್ಬರೂ ಸೇರಿ ತುಂಬಾನೆ ಕಷ್ಟದಿಂದ ಪೋಷಕರನ್ನು ಒಪ್ಪಿಸಿ ಗ್ರಾಮದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಮದುವೆಯಾಗಿ ನೂರು ವರ್ಷಗಳ ಕಾಲ ಬಾಳಬೇಕಾದ ಈ ಜೋಡಿ ಕೊಣೆಗೆ ಹೋದ ಬಳಿಕ (Sad News)  ಹೊಡೆದಾಡಿಕೊಂಡಿದ್ದಾರೆ. ಇನ್ನೂ ಈ ಗಲಾಟೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles