Saturday, July 12, 2025
HomeNationalಭಾಷಣ ಮಾಡುತ್ತಾ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್ ಗಾಂಧಿ, ವೈರಲ್ ಆದ ವಿಡಿಯೋ…..!

ಭಾಷಣ ಮಾಡುತ್ತಾ ತಲೆ ಮೇಲೆ ನೀರು ಸುರಿದುಕೊಂಡ ರಾಹುಲ್ ಗಾಂಧಿ, ವೈರಲ್ ಆದ ವಿಡಿಯೋ…..!

ದೇಶದಲ್ಲಿ ಹಲವು ಕಡೆ ಮಳೆಯಾಗುತ್ತಿದ್ದರೂ ಕೆಲವು ಕಡೆ ಬಿಸಿಲಿನ ತಾಪ ಹೆಚ್ಚಾಗಿದೆ. ಹೆಚ್ಚಿನ ತಾಪಮಾನದಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ಲೋಕಸಭಾ ಚುನಾವಣೆ 2024 ಕದನ ಸಹ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಜನರ ಜೊತೆಗೆ ರಾಜಕೀಯ ನಾಯಕರು ಸಹ ಸಮಸ್ಯೆ ಎದುರಿಸುತ್ತಿದ್ದಾರೆ. ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಸಹ ಬಿಸಿಲಿನ ತಾಪ ಎದುರಿಸಿದ್ದಾರೆ. ಭಾಷಣದ ನಡುವೆಯೇ ರಾಹುಲ್ ಗಾಂಧಿ ತಲೆ ಮೇಲೆ ನೀರು ಸುರಿದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Rahul gandhi water to his head 2

ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಉತ್ತರ ಪ್ರದೇಶದ ಪ್ರವಾಸದಲ್ಲಿದ್ದರು. ಉತ್ತರ ಪ್ರದೇಶದಲ್ಲಿ ಮಿತಿಮೀರಿದ ಬಿಸಿಯಿಂದ ರಾಹುಲ್ ಗಾಂಧಿಯವರು ಸಹ ಸಮಸ್ಯೆ ಎದುರಿಸಿದ್ದಾರೆ. ಉತ್ತರಪ್ರದೇಶದ ರುದ್ರಪುರದ ವೇದಿಕೆಯಲ್ಲಿ ಭಾಷಣ ಮಾಡುತ್ತಾ ತಲೆ ಮೇಲೆ ನೀರು ಸುರಿದುಕೊಂಡಿದ್ದಾರೆ. ಭಾಷಣ ಮಾಡುತ್ತಾ ನೀರು ಕುಡಿಯಲು ಕೈಯಲ್ಲಿದ್ದ ಬಾಟಲಿಯನ್ನು ಹಿಡಿದುಕೊಂಡರು. ಆಗ ವೇದಿಕೆ ಮುಂಭಾಗ ಜನರು ಜೋರಾಗಿ ಕೂಗಿದರು. ಈ ವೇಳೆ ಇವತ್ತು ಬಿಸಿಲು ತುಂಬಾನೆ ಇದೆ ಎಂದು ರಾಹುಲ್ ಗಾಂಧಿ ಬಾಟಲಿಯಲ್ಲಿದ್ದ ನೀರನ್ನು ತಲೆಗೆ ತಣ್ಣಿರು ಸುರಿದುಕೊಂಡಿದ್ದಾರೆ. ಕಾಂಗ್ರೇಸ್ ನಾಯಕನ ನಡೆಗೆ ವೇದಿಕೆಯಲ್ಲಿದ್ದ ಹಲವರು ಅಚ್ಚರಿ ವ್ಯಕ್ತಪಡಿಸಿದರು.

ಇದೇ ಸಮಯದಲ್ಲಿ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿರುದ್ದ ಟೀಕಾ ಪ್ರಹಾರ ನಡೆಸಿದರು. ಈ ಚುನಾವಣೆ ಎಂಬ ಯುದ್ದ ಸಿದ್ದಾಂತದ ಯುದ್ದವಾಗಿದೆ. ಒಂದು ಕಡೆ ಭಾರತ ಆಘಾಡಿ, ಮತ್ತೊಂದು ಕಡೆ ಸಂವಿಧಾನ ಬದಲಿಸಬೇಕು ಎನ್ನುವಂತಹ ಜನರಿದ್ದಾರೆ. ಬಿಜೆಪಿ ನಾಯಕರು ಸಂವಿಧಾನ ಬದಲಿಸುವ ಬಗ್ಗೆ ಸಾರ್ವಜನಿಕವಾಗಿ ಹೇಳಿದ್ದಾರೆ. ಆದರೆ ಭಾರತ ಅಘಾಟಿ ಇದನ್ನು ಎಂದಿಗೂ ಅನುಮತಿಸುವುದಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್‍ ರವರು ರಚನೆ ಸಂವಿಧಾನದಿಂದ ದೇಶದ ಹಿಂದುಳಿದ ವರ್ಗದವರಿಗೆ ಹಕ್ಕು ಸಿಕ್ಕಿದೆ. ಸಂವಿಧಾನ ಅವರಿಗೆ ಮೀಸಲಾತಿ ನೀಡಿದ. ಆದರೆ ಬಿಜೆಪಿ ದಲಿತ ಸಂತ್ರಸ್ತರಿಗೆ ನೀಡಲಾದ ಮೀಸಲಾತಿಯನ್ನು ರದ್ದು ಪಡಿಸಲು ಬಯಸು‌ತ್ತಿದೆ ಎಂದು ಆಕ್ರೋಷ ಹೊರಹಾಕಿದ್ದಾರೆ.

Rahul gandhi water to his head 1

ಇನ್ನೂ ಅಗ್ನೀವೀರ್‍ ಯೋಜನೆ ವಿಚಾರದಲ್ಲಿ ಮೋದಿ ಸರ್ಕಾರವನ್ನು ಗುರಿಯಾಗಿಸಿ ಮಾತನಾಡಿದರು. ಅಗ್ನಿವೀರ್‍ ಯೋಜನೆ ಮೂಲಕ ಮೋದಿ ಸರ್ಕಾರ ದೇಶದ ಸೈನಿಕರನ್ನು ಕಾರ್ಮಿಕರನ್ನಾಗಿ ಮಾಡುವ ಕೆಲಸ ಮಾಡಿದೆ. ಈಗ ಗಡಿಯಲ್ಲಿ ಹುತಾತ್ಮರಾದರೇ ಅವರಿಗೆ ಪಿಂಚಣಿ, ಹುತಾತ್ಮ ಸ್ಥಾನಮಾನ ಸಿಗುವುದಿಲ್ಲ. ಭಾರತ ಮೈತ್ರಿ ಸರ್ಕಾರ ಬಂದರೇ, ನಾವು ಈ ಅಗ್ನಿವೀರ್‍ ಯೋಜನೆಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular