Kanpur Hospital Wedding : ಹಳದಿ ಶಾಸ್ತ್ರದ ವೇಳೆ ಬೆಂಕಿ ಅವಘಡ; ಸುಟ್ಟ ಗಾಯಗಳಾಗಿದ್ದರೂ ಆಸ್ಪತ್ರೆಯಲ್ಲೇ ವಧುವನ್ನು ವರಿಸಿದ ವರ! ರಿಯಲ್ ಲೈಫ್ ‘ವಿವಾಹ್’

ಮದುವೆ ಅಂದ್ರೆ ಅಲ್ಲಿ ನಗು, ಸಂಭ್ರಮ, ನಂಟರ ಗದ್ದಲ, ಬ್ಯಾಂಡ್-ಬಾಜಾ ಎಲ್ಲವೂ ಇರಬೇಕು ಅಲ್ವಾ? ಆದ್ರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ (Kanpur Hospital Wedding) ಈ ಘಟನೆ ಮಾತ್ರ ಮೊದಲು ಎಲ್ಲರ ಕಣ್ಣೀರು ತರಿಸಿ, ಆಮೇಲೆ ಹೃದಯ ತುಂಬಿ ಬರುವಂತೆ ಮಾಡಿದೆ. ಹಳದಿ ಶಾಸ್ತ್ರದ ಸಂಭ್ರಮದಲ್ಲಿದ್ದ ಮನೆಯಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡು ವಧು ಸೇರಿದಂತೆ 12 ಜನರು ಗಂಭೀರವಾಗಿ ಗಾಯಗೊಂಡರು. ಆದರೆ, ವಿಧಿಯಾಟಕ್ಕೆ ಸೋಲದ ವರ, ಮರುದಿನವೇ ಆಸ್ಪತ್ರೆಯ ಬೆಡ್ ಮೇಲಿದ್ದ ವಧುವಿನ ಕೈ ಹಿಡಿದು ರಿಯಲ್ ಲೈಫ್ ‘ವಿವಾಹ್’ ಸಿನಿಮಾ ಕ್ಷಣವನ್ನು ಮರುಸೃಷ್ಟಿಸಿದ್ದಾರೆ.

Kanpur hospital wedding where groom marries injured bride inside hospital ward after Haldi ceremony fire accident

Kanpur Hospital Wedding – ಹಳದಿ ಸಂಭ್ರಮದ ಬೆನ್ನಲ್ಲೇ ನುಗ್ಗಿದ ವಿಧಿಯಾಟ

ಕಾನ್ಪುರದ ಘಟಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜಗನ್ನಾಥಪುರ ಗ್ರಾಮದಲ್ಲಿ 22 ವರ್ಷದ ಶ್ವೇತಾ ಎಂಬಾಕೆಯ ಮದುವೆಗೆ bharaದ ಸಿದ್ಧತೆ ನಡೆದಿತ್ತು. ಬುಧವಾರ ಸಂಜೆ ನೆರೆಹೊರೆಯವರು, ಬಂಧುಗಳೆಲ್ಲ ಸೇರಿ ಶ್ವೇತಾಗೆ ಹಳದಿ ಶಾಸ್ತ್ರ (Haldi Ceremony) ಮಾಡುತ್ತಿದ್ದರು. ಇತ್ತ ಅತಿಥಿಗಳಿಗೆ ಭರ್ಜರಿ ಅಡುಗೆ ಸಿದ್ಧವಾಗುತ್ತಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಅಡುಗೆ ಮನೆಗೆ ಸಂಪರ್ಕ ಹೊಂದಿದ್ದ ಗ್ಯಾಸ್ ಸಿಲಿಂಡರ್ ಪೈಪ್‌ಲೈನ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ದಿಢೀರನೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಆರಿಸಲು ಜನರು ಓಡಿ ಬಂದಾಗ, ಎಣ್ಣೆ ತುಂಬಿದ್ದ ಬಾಂಡ್ಲಿ ಉಲ್ಟಾ ಬಿದ್ದು ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಯಿತು. ಕ್ಷಣಾರ್ಧದಲ್ಲಿ ಇಡೀ ಸಂಭ್ರಮದ ಮನೆ ಕಿರುಚಾಟ, ಆಕ್ರಂದನದಿಂದ ತುಂಬಿಹೋಯಿತು.

ವಧು ಸೇರಿ 12 ಜನರಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು

ಗ್ರಾಮಸ್ಥರು ತಕ್ಷಣವೇ  ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತಂದರು. ಆದರೆ ಈ ಭೀಕರ ಅವಘಡದಲ್ಲಿ ವಧು ಶ್ವೇತಾ, ಆಕೆಯ ತಂದೆ ಜಗದೀಶ್, ಅಜ್ಜಿ ಉಷಾ, ಸಹೋದರ ಹಂಸರಾಜ್ ಸೇರಿದಂತೆ ಒಟ್ಟು 12 ಜನರು ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಮಹಿಳೆಯರು, (Kanpur Hospital Wedding) ವೃದ್ಧರು ಮತ್ತು 5 ವರ್ಷದ ಮಗುವೂ ಸೇರಿತ್ತು. ತಕ್ಷಣ ಎಲ್ಲರನ್ನೂ ಘಟಾಂಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಆದರೆ ಗಾಯಗಳು ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಉರ್ಸುಲಾ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಯಲ್ಲೇ ಮಂಟಪ: ಕಣ್ಣೀರು ತರಿಸಿದ ಆ ಒಂದು ಮಾತು!

ಮದುವೆ ದಿನವೇ ವಧು ಆಸ್ಪತ್ರೆ ಪಾಲಾಗಿದ್ದನ್ನು ಕಂಡು ಎರಡೂ ಕುಟುಂಬದವರು ಕಣ್ಣೀರಲ್ಲಿ ಮುಳುಗಿದ್ದರು. ಆದರೆ, ಈ ದುರಂತ ತಮ್ಮ ಪ್ರೀತಿ ಮತ್ತು ಬದ್ಧತೆಗೆ ಅಡ್ಡಿಯಾಗಲು ವರ ಒಪ್ಪಲಿಲ್ಲ. ವೈದ್ಯರು, ನರ್ಸ್‌ಗಳು ಮತ್ತು ಎರಡೂ ಕುಟುಂಬದವರು ಸೇರಿ ಆಸ್ಪತ್ರೆಯ ವಾರ್ಡ್‌ನಲ್ಲೇ ಸಣ್ಣದೊಂದು ಮಂಟಪ ಸಿದ್ಧಪಡಿಸಿದರು. Read this also : ಕಾರಿನಲ್ಲೇ ಪ್ರಿಯಕರನಿಂದ ತಾಳಿ ಕಟ್ಟಿಸಿಕೊಂಡ ಹಾಸನದ ಮಹಿಳೆ: ಅಜ್ಞಾತ ಸ್ಥಳದಿಂದ ಹರ್ಷಿತಾ ಬಿಡುಗಡೆ ಮಾಡಿದ ವಿಡಿಯೋದಲ್ಲೇನಿದೆ?

ಮೇ 14ರ ಗುರುವಾರ ರಾತ್ರಿ, ಕೈ-ಕಾಲುಗಳಿಗೆ ಬ್ಯಾಂಡೇಜ್ ಸುತ್ತಿದ್ದ (Kanpur Hospital Wedding) ವಧು ಶ್ವೇತಾಳನ್ನು ಕೂರಿಸಿ, ವೈದ್ಯಕೀಯ ಉಪಕರಣಗಳು ಮತ್ತು ಪ್ರೀತಿಪಾತ್ರರ ಪ್ರಾರ್ಥನೆಗಳ ನಡುವೆಯೇ ಮದುವೆ ಶಾಸ್ತ್ರಗಳು ನಡೆದವು. ವರ ಶ್ವೇತಾಳ ಹಣೆಗೆ ಸಿಂಧೂರ ಇಟ್ಟು, “ಪರಿಸ್ಥಿತಿ ಏನೇ ಇರಲಿ, ನಾನು ಯಾವತ್ತೂ ನಿನ್ನ ಕೈ ಬಿಡಲ್ಲ, ನಿನ್ನ ಜೊತೆಯಿರುತ್ತೇನೆ” ಎಂದು ಭರವಸೆ ನೀಡಿದಾಗ ಅಲ್ಲಿದ್ದ ವೈದ್ಯರು, ನರ್ಸ್‌ಗಳು ಹಾಗೂ ನೆರೆದಿದ್ದವರ ಕಣ್ಣುಗಳು ತೇವವಾಗಿದ್ದವು.

Kanpur hospital wedding where groom marries injured bride inside hospital ward after Haldi ceremony fire accident

ಸಾಮಾಜಿಕ ಜಾಲತಾಣಗಳಲ್ಲಿ ‘ವಿವಾಹ್’ ಸಿನಿಮಾ ನೆನಪಿಸಿದ ಜೋಡಿ

ಆಸ್ಪತ್ರೆಯಲ್ಲಿ ನಡೆದ ಈ (Kanpur Hospital Wedding) ಅಪರೂಪದ ಮದುವೆಯ ಫೋಟೋ ಮತ್ತು ವೀಡಿಯೊಗಳು (Video here) ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಶಾಹಿದ್ ಕಪೂರ್ ಮತ್ತು ಅಮೃತಾ ರಾವ್ ನಟನೆಯ ಸೂಪರ್ ಹಿಟ್ ಸಿನಿಮಾ ‘ವಿವಾಹ್’ (Vivah) ಕಥೆಯನ್ನು ಈ ಘಟನೆ ನೆನಪಿಸಿದೆ. ವರನ ಧೈರ್ಯ ಮತ್ತು ನಿಷ್ಕಲ್ಮಶ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದು, ನವಜೋಡಿಗೆ ಶುಭ ಹಾರೈಸುತ್ತಿದ್ದಾರೆ. “ಕಷ್ಟದ ಸಮಯದಲ್ಲಿ ಕೈಹಿಡಿಯುವವನೇ ನಿಜವಾದ ಸಂಗಾತಿ” ಎಂದು ನೆಟ್ಟಿಗರು ವರನಿಗೆ ಹ್ಯಾಟ್ಸಾಫ್ ಹೇಳುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top