Mumbai Pregnant Woman : ಮುಂಬೈ ಬಳಿ ಘೋರ ಅವಾಂತರ: ರಸ್ತೆಯಿಲ್ಲದೆ ಗರ್ಭಿಣಿಯನ್ನು ಜೋಳಿಗೆಯಲ್ಲಿ ಹೊತ್ತೊಯ್ದ ಗ್ರಾಮಸ್ಥರು! ವಿಡಿಯೋ ವೈರಲ್

ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಕೂಗಳತೆಯ ದೂರದಲ್ಲಿರುವ ಹಳ್ಳಿಯೊಂದರಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳಿಲ್ಲ ಎಂಬ ಕಹಿ ಸತ್ಯ ಹೊರಬಿದ್ದಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರನ್ನು (Mumbai Pregnant Woman) ಆಂಬ್ಯುಲೆನ್ಸ್ ಸಿಗದೆ, ಬಟ್ಟೆಯ ಜೋಳಿಗೆಯಲ್ಲಿ ಹೊತ್ತುಕೊಂಡು ಗ್ರಾಮಸ್ಥರು ಆಸ್ಪತ್ರೆಗೆ ಸಾಗಿಸಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಖಾಲಾಪುರ ತಾಲೂಕಿನ ಉಂಬರನೆ ವಾಡಿಯಲ್ಲಿ ನಡೆದಿದೆ.

Mumbai pregnant woman being carried by villagers in a cloth hammock after an ambulance could not reach the tribal village due to the lack of a road.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಖಾಲಾಪುರ ಟೋಲ್ ಪ್ಲಾಜಾದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿದ್ದರೂ ಈ ಹಳ್ಳಿಗೆ ಇಂದಿಗೂ ಕನಿಷ್ಠ ಸಂಪರ್ಕ ರಸ್ತೆಯೂ ಇಲ್ಲದಿರುವುದು ದೇಶದ ಅಭಿವೃದ್ಧಿಯ ದಪ್ಪ ಚರ್ಮದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.

Mumbai Pregnant Woman – ರಾಯಗಡ ಜಿಲ್ಲೆಯ ಬುಡಕಟ್ಟು ಹಳ್ಳಿಯ ದುಸ್ಥಿತಿ

ಮುಂಬೈನಿಂದ ಕೇವಲ 80 ಕಿಲೋಮೀಟರ್ ದೂರದಲ್ಲಿರುವ ಉಂಬರನೆ ವಾಡಿ ಎಂಬ ಬುಡಕಟ್ಟು ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಅನಂತ ಪರ್ಧಿ ಎಂಬುವವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ, ಹಳ್ಳಿಗೆ ಬರಲು ಯಾವುದೇ ರಸ್ತೆ ಇರಲಿಲ್ಲ. ಆಂಬ್ಯುಲೆನ್ಸ್ ಬರುವುದು ಇರಲಿ, ಕನಿಷ್ಠ ಗಾಡಿ ಹೋಗುವಷ್ಟು ಜಾಗವೂ ಅಲ್ಲಿರಲಿಲ್ಲ. ಗತ್ಯಂತರವಿಲ್ಲದೆ ಗ್ರಾಮಸ್ಥರು ಬೆಡ್‌ಶೀಟ್ ಮತ್ತು ಕೋಲಿನ ಸಹಾಯದಿಂದ ತಾತ್ಕಾಲಿಕವಾಗಿ ಜೋಳಿಗೆಯೊಂದನ್ನು ಸಿದ್ಧಪಡಿಸಿದರು. ಆ ಜೋಳಿಗೆಯಲ್ಲಿ ಗರ್ಭಿಣಿಯನ್ನು ಕೂರಿಸಿ, ಕಲ್ಲು-ಮುಳ್ಳುಗಳ ಹಾದಿ, ಜಾರುವ ಬಂಡೆಗಳು ಹಾಗೂ ತುಂಬಿ ಹರಿಯುತ್ತಿದ್ದ ಹಳ್ಳಗಳನ್ನು ದಾಟುತ್ತಾ ಚೌಕ್ ಆಸ್ಪತ್ರೆಗೆ ತಲುಪಿಸಿದ್ದಾರೆ. ಪ್ರಸ್ತುತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸೂಕ್ತ ಚಿಕಿತ್ಸೆ ಮುಂದುವರಿದಿದೆ.

ಇನ್ನೂ ಈ ಭಾಗದಲ್ಲಿ ಕೇವಲ ಉಂಬರನೆ ವಾಡಿ ಮಾತ್ರವಲ್ಲ, ಪಿರ್ಕದ್ವಾಡಿ ಮತ್ತು ಅರ್ಕಸ್ವಾಡಿ ಸೇರಿದಂತೆ ಒಟ್ಟು ನಾಲ್ಕು ಬುಡಕಟ್ಟು ವಸಾಹತುಗಳು ಇಂದಿಗೂ ಕತ್ತಲೆಯಲ್ಲೇ ಕಾಲ ಕಳೆಯುತ್ತಿವೆ. ಸ್ವಾತಂತ್ರ್ಯ (Mumbai Pregnant Woman) ಬಂದು ಇಷ್ಟು ವರ್ಷಗಳಾದರೂ ಇಲ್ಲಿಗೆ ಆಲ್ ವೆದರ್ ಅಂದರೆ ಎಲ್ಲಾ ಕಾಲಕ್ಕೂ ಒಪ್ಪುವ ರಸ್ತೆಗಳಾಗಲಿ ಅಥವಾ ವಿದ್ಯುತ್ ಸಂಪರ್ಕವಾಗಲಿ ಸಿಕ್ಕಿಲ್ಲ.

ಮಳೆಯಿಂದ ಕೊಚ್ಚಿಹೋದ ಕಾಲುದಾರಿ

ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ಈ ಹಳ್ಳಿಯನ್ನು ಚೌಕ್ ಪ್ರದೇಶಕ್ಕೆ ಸಂಪರ್ಕಿಸುವ ಏಕೈಕ ಕಿರಿದಾದ ಕಾಲುದಾರಿ ಇತ್ತೀಚಿನ ಭಾರಿ ಮುಂಗಾರು ಮಳೆಗೆ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಇದರಿಂದಾಗಿ ಗ್ರಾಮಸ್ಥರು ತುರ್ತು ಪರಿಸ್ಥಿತಿಯಲ್ಲಿ ಕಾಡಿನ ಹಾದಿಯಲ್ಲೇ ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಅನಿವಾರ್ಯತೆ ಎದುರಾಗಿದೆ. Read this also : ಮಗನ ಶವವನ್ನು ತಳ್ಳುಗಾಡಿಯಲ್ಲೇ ಸಾಗಿಸಿದ ಅಸಹಾಯಕ ಪೋಷಕರು ಕರೀಂನಗರದಲ್ಲಿ ಅಮಾನವೀಯ ಘಟನೆ..!

ಹೈವೇ ಪಕ್ಕದಲ್ಲೇ ಇದ್ದರೂ ಸಿಗದ ಭಾಗ್ಯ

ಇಲ್ಲಿನ ಮತ್ತೊಂದು ದೊಡ್ಡ ವಿಪರ್ಯಾಸವೆಂದರೆ, ಈ ಹಿಂದುಳಿದ ಹಳ್ಳಿಗಳು ನವಿ ಮುಂಬೈಗೆ ಕುಡಿಯುವ ನೀರು ಪೂರೈಸುವ ಮೋರ್ಬೆ ಅಣೆಕಟ್ಟಿನ ತೀರಾ ಹತ್ತಿರದಲ್ಲಿವೆ. ಅಷ್ಟೇ ಅಲ್ಲದೆ, ಭಾರತದ ಅತ್ಯಂತ ಜನನಿಬಿಡ (Mumbai Pregnant Woman) ಮತ್ತು ಆಧುನಿಕ ಹೆದ್ದಾರಿಗಳಲ್ಲಿ ಒಂದಾದ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಕೂಡ ಇಲ್ಲಿಗೆ ಕೆಲವೇ ಕಿಲೋಮೀಟರ್ ದೂರದಲ್ಲಿದೆ.

Mumbai pregnant woman being carried by villagers in a cloth hammock after an ambulance could not reach the tribal village due to the lack of a road.

ಟೋಲ್ ಕಟ್ಟುವ ವಾಹನ ಸವಾರರು ಮತ್ತು ರಸ್ತೆಯೇ ಇಲ್ಲದ ಗ್ರಾಮಸ್ಥರು

ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ವಾಹನ ಸವಾರರು ಖಾಲಾಪುರ ಟೋಲ್ ಪ್ಲಾಜಾದಲ್ಲಿ ಲಕ್ಷಾಂತರ ರೂಪಾಯಿ ಟೋಲ್ ಪಾವತಿಸುತ್ತಿದ್ದಾರೆ. ಆದರೆ ಅದರ ಪಕ್ಕದಲ್ಲೇ ಇರುವ ಜನರಿಗೆ ಕನಿಷ್ಠ ಆಸ್ಪತ್ರೆಗೆ ಹೋಗಲು ರಸ್ತೆಯೂ (Mumbai Pregnant Woman) ಇಲ್ಲದಿರುವುದು ಸರ್ಕಾರದ ಅಭಿವೃದ್ಧಿ ವಾದವನ್ನು ಅಣಕಿಸುವಂತಿದೆ.

ಸರ್ಕಾರದ ಅಭಿವೃದ್ಧಿ ಘೋಷಣೆಗಳ ವಿರುದ್ಧ ಸಾರ್ವಜನಿಕ ಆಕ್ರೋಶ

ಈ ವಿಡಿಯೋ (Viral Video Link Here) ವೈರಲ್ ಆಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು (Mumbai Pregnant Woman) ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ನಮಗೆ ತಕ್ಷಣವೇ ರಸ್ತೆ, ವಿದ್ಯುತ್ ಮತ್ತು ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಮಳೆಗಾಲದಲ್ಲಿ ಕಾಯಿಲೆ ಬಿದ್ದರೆ ಕಾಡು, ತೊರೆಗಳನ್ನು ದಾಟಿಕೊಂಡು ಹೋಗುವ ಈ ಭೀಕರ ಪರಿಸ್ಥಿತಿಗೆ ತಕ್ಷಣವೇ ಮುಕ್ತಿ ಸಿಗಬೇಕು ಎಂಬುದು ಅವರ ಒಕ್ಕೊರಲ ಒತ್ತಾಯವಾಗಿದೆ.

Leave a Comment

Your email address will not be published. Required fields are marked *

Scroll to Top