ಶಿಕ್ಷಣ ಎನ್ನುವುದು ಕೇವಲ ಅಕ್ಷರ ಕಲಿಯುವುದಲ್ಲ, ಅದು ಮನುಷ್ಯನಿಗೆ ಸಂಸ್ಕಾರ ಮತ್ತು ಗೌರವವನ್ನು ಕಲಿಸಿಕೊಡುವ ಒಂದು ಸಾಧನ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ (Bihar Students) ದಾರಿ ತಪ್ಪುತ್ತಿದೆಯೇ ಎಂಬ ಅನುಮಾನ ಮೂಡುವಂತಹ ಘಟನೆಗಳು ಪದೇ ಪದೇ ವರದಿಯಾಗುತ್ತಿವೆ.

ಇದಕ್ಕೆ ಪೂರಕವೆಂಬಂತೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೇವಲ 21 ಸೆಕೆಂಡುಗಳ ವಿಡಿಯೋ ಇಡೀ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ಶಾಲೆಯ ಆವರಣದಲ್ಲೇ ವಿದ್ಯಾರ್ಥಿಗಳ ಗುಂಪೊಂದು ಕ್ರೈಸ್ತ ಸನ್ಯಾಸಿನಿಯೊಬ್ಬರ ಜೊತೆ ನಡೆದುಕೊಂಡ ರೀತಿ ಅಕ್ಷರಶಃ ಅಮಾನವೀಯ ಮತ್ತು ಅಸಹ್ಯಕರವಾಗಿದೆ.
Bihar Students – 21 ಸೆಕೆಂಡ್ ವಿಡಿಯೋದಲ್ಲಿ ನಡೆದಿದ್ದೇನು?
ಬಿಹಾರದ ಜಮುಯಿ ಜಿಲ್ಲೆಯ ಝಝಾದಲ್ಲಿರುವ ಸೆಂಟ್ ಜೊಸೆಫ್ ಶಾಲೆಯ ಮೈದಾನದಲ್ಲಿ ಈ ಘಟನೆ ನಡೆದಿದೆ. ವೈರಲ್ ಆಗಿರುವ ದೃಶ್ಯದಲ್ಲಿ ಕ್ರೈಸ್ತ ಸನ್ಯಾಸಿನಿಯೊಬ್ಬರು ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತದೆ. ಅವರು ಮಕ್ಕಳನ್ನು ಹೆಸರಿಡಿದು ಕರೆದು ಶಾಂತವಾಗಿರುವಂತೆ ಸೂಚನೆ ನೀಡುತ್ತಿದ್ದರೆ, ಅತ್ತ ಮೊಬೈಲ್ ಹಿಡಿದು ವಿಡಿಯೋ ಮಾಡುತ್ತಿದ್ದ ವಿದ್ಯಾರ್ಥಿಗಳ ತಂಡ ಮಾತ್ರ ವಿಕೃತ ಮನಸ್ಥಿತಿ ಪ್ರದರ್ಶಿಸಿದೆ.
ಸಿಸ್ಟರ್ ಬಳಿ ತೆರಳುವ ವಿದ್ಯಾರ್ಥಿಗಳು, ಜಗತ್ಪ್ರಸಿದ್ಧ (Bihar Students) ನೀಲಿ ಚಿತ್ರಗಳ ಸಂಸ್ಥೆಯ ಹೆಸರನ್ನು ಪ್ರಸ್ತಾಪಿಸಿ ಅಸಭ್ಯವಾಗಿ ಮಾತನಾಡಿದ್ದಾರೆ. ಅಷ್ಟಕ್ಕೇ ನಿಲ್ಲದ ಈ ಯುವಕರು, ಖ್ಯಾತ ನೀಲಿ ಚಿತ್ರದ ತಾರೆಯರಾದ ಜಾನಿ ಸಿನ್ಸ್ ಮತ್ತು ಮಿಯಾ ಕಲೀಫಾ ಅವರ ಹೆಸರನ್ನು ಎಳೆದು ತಂದು ಆ ಪವಿತ್ರ ವಸ್ತ್ರಧಾರಿ ಸನ್ಯಾಸಿನಿಗೆ ಕಾಮ ಪ್ರಚೋದಕ ಮಾತುಗಳಿಂದ ಅಪಮಾನಿಸಿದ್ದಾರೆ.
ಹಾಸ್ಯದ ಹೆಸರಲ್ಲಿ ಹರಿದಾಡುತ್ತಿರುವ ವಿಕೃತಿ
ಇದನ್ನು ಕೇವಲ ಮಕ್ಕಳ ತುಂಟಾಟ ಅಥವಾ ‘ಡಾರ್ಕ್ ಹ್ಯೂಮರ್’ ಎಂದು ಕಡೆಗಣಿಸಲು ಸಾಧ್ಯವಿಲ್ಲ. ಶಾಲೆಯಂತಹ ಶಿಸ್ತಿನ ಆವರಣದಲ್ಲಿ, ತಮಗೆ ಪಾಠ ಕಲಿಸುವ ಅಥವಾ ಮಾರ್ಗದರ್ಶನ ನೀಡುವ ಸನ್ಯಾಸಿನಿಯೊಬ್ಬರ ಮುಂದೆ ಇಷ್ಟೊಂದು ಸಲೀಸಾಗಿ ಅಶ್ಲೀಲ ಮಾತುಗಳನ್ನಾಡುವುದು ಅವರ ನೈತಿಕ ಅಧಃಪತನಕ್ಕೆ ಸಾಕ್ಷಿಯಾಗಿದೆ. ಸ್ಮಾರ್ಟ್ಫೋನ್ ಮತ್ತು ಇಂಟರ್ನೆಟ್ನ ಅತಿಯಾದ ಬಳಕೆಯಿಂದ ಮಕ್ಕಳು ಪೋರ್ನ್ ವಿಡಿಯೋಗಳಿಗೆ ಎಷ್ಟರಮಟ್ಟಿಗೆ ವ್ಯಸನಿಗಳಾಗುತ್ತಿದ್ದಾರೆ ಎಂಬುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹಿರಿಯರು ಮತ್ತು ಮಹಿಳೆಯರ ಬಗ್ಗೆ ಕನಿಷ್ಠ ಗೌರವವಿಲ್ಲದೆ ವರ್ತಿಸುವ ಈ ವಿದ್ಯಾರ್ಥಿಗಳ ನಡೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಾನೂನು ಸಮರ ಮತ್ತು ಶಾಲೆಯ ಮೇಲಿನ ಒತ್ತಡ
ಈ ವಿಡಿಯೋ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಸಾಮಾಜಿಕ ಕಾರ್ಯಕರ್ತ ಸೂರಜ್ ಬರ್ನವಾಲ್ ಅವರು ಜಮುಯಿ ಜಿಲ್ಲಾಧಿಕಾರಿಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಸಮಗ್ರ ತನಿಖೆಗೆ ಆದೇಶಿಸಿದೆ. ಆದರೆ ಈ ವಿದ್ಯಾರ್ಥಿಗಳು ಅಪ್ರಾಪ್ತರಾಗಿರುವುದರಿಂದ (Bihar Students) ಪ್ರಕರಣವು ಜುವೆನೈಲ್ ನ್ಯಾಯಾಲಯದ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ದೂರುದಾರ ಸೂರಜ್ ಅವರು ಶಾಲಾ ಆಡಳಿತ ಮಂಡಳಿಯ ವಿರುದ್ಧವೂ ಕಿಡಿಕಾರಿದ್ದು, ಶಾಲೆಯಲ್ಲಿ ಅಶಿಸ್ತು ತಾಂಡವವಾಡುತ್ತಿದೆ ಎಂದು ಆರೋಪಿಸಿದ್ದಾರೆ. ಶಾಲೆಯ ಕಟ್ಟುನಿಟ್ಟಿನ ಕ್ರಮದ ಕೊರತೆಯಿಂದಲೇ ವಿದ್ಯಾರ್ಥಿಗಳು ಇಷ್ಟು ಧೈರ್ಯದಿಂದ ಅಸಭ್ಯ ವರ್ತನೆ ತೋರಿದ್ದಾರೆ ಎಂಬುದು ಅವರ ವಾದವಾಗಿದೆ. Read this also : ಮಹಾರಾಷ್ಟ್ರದ ಶಾಲೆಯಲ್ಲಿ ಪಾಕ್ ಮಿಲಿಟರಿ ಗೀತೆಗೆ ವಿದ್ಯಾರ್ಥಿಗಳ ನೃತ್ಯ: ತೀವ್ರ ಆಕ್ರೋಶ, ಎಫ್ಐಆರ್ ದಾಖಲು
ಸಂಸ್ಕಾರ ಮರೆಯುತ್ತಿರುವ ಇಂದಿನ ಪೀಳಿಗೆ
ಈ ಘಟನೆ ಕೇವಲ ಒಂದು ಶಾಲೆಯ ಸಮಸ್ಯೆಯಲ್ಲ, ಬದಲಾಗಿ ಇಡೀ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಸೋಶಿಯಲ್ ಮೀಡಿಯಾದ ಪ್ರಭಾವದಿಂದಾಗಿ ಮಕ್ಕಳು ಯಾವುದನ್ನು ಹಾಸ್ಯ ಎಂದು(Bihar Students) ಪರಿಗಣಿಸಬೇಕು ಮತ್ತು ಯಾವುದನ್ನು ಗೌರವಿಸಬೇಕು ಎಂಬ ವಿವೇಚನೆಯನ್ನು ಕಳೆದುಕೊಳ್ಳುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಲೈಂಗಿಕ ವಸ್ತುಗಳಂತೆ ಕಾಣುವ ಈ ಮನಸ್ಥಿತಿ ಬೆಳೆಯಲು ಕಾರಣವೇನು ಎಂಬ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಗಂಭೀರವಾಗಿ ಯೋಚಿಸಬೇಕಿದೆ. ಮನೆಯಲ್ಲಿ ಸರಿಯಾದ ಸಂಸ್ಕಾರ ಮತ್ತು ಶಾಲೆಯಲ್ಲಿ ನೈತಿಕ ಶಿಕ್ಷಣದ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.
