ಮಂಗಳೂರಿನಲ್ಲಿ ಮ್ಯಾಟ್ರಿಮೋನಿ ವಂಚನೆ ಪ್ರಕರಣಗಳು ಇತ್ತೀಚೆಗೆ ಸದ್ದು ಮಾಡುತ್ತಿರುವ ಬೆನ್ನಲ್ಲೇ, ಇದೀಗ ಮತ್ತೊಂದು ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಸುಂದರ ಮಾತುಗಳಿಂದ ಯುವತಿಯರ ಮನಗೆದ್ದು, ಬಳಿಕ ಹಣ ದೋಚಿ (Mangaluru Matrimony Fraud) ಪರಾರಿಯಾಗುತ್ತಿದ್ದ ‘ಮಂಗಳೂರು ಮನ್ಮಥ’ನ ಅಸಲಿ ಮುಖವಾಡವನ್ನು ಆತನ ಪತ್ನಿಯೇ ಈಗ ಕಳಚಿಟ್ಟಿದ್ದಾರೆ. ವಿದೇಶದಲ್ಲಿ ಕುಳಿತುಕೊಂಡು ಮಂಗಳೂರಿನ ಮುಗ್ಧ ಯುವತಿಯರಿಗೆ ಗಾಳ ಹಾಕುತ್ತಿದ್ದ ಈತನ ಕರಾಳ ಕಥೆ ಈಗ ಪೊಲೀಸ್ ಮೆಟ್ಟಿಲೇರಿದೆ.

Mangaluru Matrimony Fraud – ಪ್ರೀತಿ ಹೆಸರಲ್ಲಿ ಶುರುವಾದ ಬ್ಲ್ಯಾಕ್‌ಮೇಲ್ ಕಹಾನಿ
ಬಜಪೆ ನಿವಾಸಿ ಮನೀಶ್ ಎಂಬಾತನೇ ಈ ಕಿಲಾಡಿ ಪತಿ. ಸಂತ್ರಸ್ತೆ ಪ್ರೀತಿಗೆ ಈತನ ಪರಿಚಯವಾಗಿದ್ದು ಫೇಸ್‌ಬುಕ್ ಮೂಲಕ. ಆರಂಭದಲ್ಲಿ ಸ್ನೇಹದಿಂದ ಶುರುವಾದ ಮಾತುಕತೆ ಬಳಿಕ ಪ್ರೀತಿಯ ಹಂತಕ್ಕೆ ತಲುಪಿತ್ತು. ಆದರೆ, ಮನೀಶ್ ಹೂಡಿದ ಬಲೆ ಅಷ್ಟಕ್ಕೇ ನಿಲ್ಲಲಿಲ್ಲ. ಪ್ರೀತಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಮದುವೆಗೆ ಒಪ್ಪಿಸಿದ್ದ ಈತ, ಮದುವೆಗೆ ಕೇವಲ ಮೂರು ದಿನ ಬಾಕಿ ಇರುವಾಗ ಹಣದ ನೆಪವೊಡ್ಡಿ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ್ದ. ಮನೀಶ್ ಮಾತುಗಳನ್ನು ನಂಬಿದ ಪ್ರೀತಿ ಪೋಷಕರು, ಮದುವೆಯ ಸಂಪೂರ್ಣ ಖರ್ಚನ್ನು ತಾವೇ ಭರಿಸಿ ಅದ್ದೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು.
ಹೆಂಡತಿಯ ಹಣದಲ್ಲಿ ವಿದೇಶಕ್ಕೆ ಹಾರಿ ಲವ್ವಿಡವ್ವಿ ಶುರು!
ಮದುವೆಯ ನಂತರವೂ ಮನೀಶ್ ತನ್ನ ಬುದ್ಧಿ ಕಲಿತಿರಲಿಲ್ಲ. ಹೇಗಾದರೂ ಮಾಡಿ ವಿದೇಶಕ್ಕೆ ಹೋಗಬೇಕೆಂಬ ಹಂಬಲದಲ್ಲಿದ್ದ ಈತನಿಗೆ ಪತ್ನಿ ಪ್ರೀತಿಯೇ 2 ಲಕ್ಷ ರೂಪಾಯಿ ನೀಡಿ ಸಹಾಯ ಮಾಡಿದ್ದರು. ದುಬೈಗೆ ಕೆಲಸಕ್ಕೆ ಹೋದ ಮನೀಶ್ ಅಲ್ಲಿ ಸುಮ್ಮನಿರದೆ ಬಹರೇನ್‌ನಲ್ಲಿದ್ದ ಮಹಿಳೆಯೊಬ್ಬಳ ಜೊತೆ ಪ್ರೇಮ ಸಲ್ಲಾಪ ಶುರು ಮಾಡಿದ್ದಾನೆ. (Mangaluru Matrimony Fraud) ಗಂಡನ ವರ್ತನೆಯಲ್ಲಿ ಬದಲಾವಣೆ ಕಂಡು ಅನುಮಾನಗೊಂಡ ಪ್ರೀತಿ, ಆತನ ಹಿನ್ನೆಲೆ ಕೆದಕಲು ಶುರು ಮಾಡಿದಾಗ ಅತ ದೊಡ್ಡ ಆಘಾತವೇ ಎದುರಾಗಿತ್ತು.
ಬ್ರೈನ್ ಟ್ಯೂಮರ್ ಎಂಬ ‘ಬ್ರೇಕ್ ಅಪ್’ ಡ್ರಾಮಾ
ಮನೀಶ್‌ನ ಅಸಲಿ ಮುಖವಾಡ ಕೇವಲ ಪ್ರೀತಿಗೆ ಮಾತ್ರ ಸೀಮಿತವಾಗಿರಲಿಲ್ಲ. ಈತ ಮದುವೆಗಿಂತ ಮೊದಲು ಹತ್ತಾರು ಯುವತಿಯರ ಜೊತೆ ಪ್ರೇಮದಾಟವಾಡಿದ್ದ ಎನ್ನುವ (Mangaluru Matrimony Fraud) ಸತ್ಯ ಬಯಲಾಗಿದೆ. ಮೋಜು ಮಸ್ತಿಗಾಗಿ ಯುವತಿಯರಿಂದ ಹಣ ಪಡೆದು ಬಳಿಕ ಕೈಕೊಡುವುದು ಈತನ ಹಳೆಯ ಚಾಳಿ. ಹಣ ವಾಪಸ್ ಕೇಳಿದಾಗ ತನಗೆ ‘ಬ್ರೈನ್ ಟ್ಯೂಮರ್’ ಇದೆ ಅಥವಾ ‘ಹೃದಯದಲ್ಲಿ ತೂತಿದೆ’ ಎಂದು ಸುಳ್ಳು ಹೇಳಿ ಸಾವಿನ ನಾಟಕವಾಡಿ ಅವರ ಪ್ರೇಮಕ್ಕೆ ಎಳ್ಳುನೀರು ಬಿಡುತ್ತಿದ್ದ. ಈ ವಿಚಾರವನ್ನು ಸ್ವತಃ ಮೋಸ ಹೋದ ಯುವತಿಯರೇ ಈಗ ಪತ್ನಿ ಪ್ರೀತಿಗೆ ವಿವರಿಸಿದ್ದಾರೆ. Read this also : Live-in Relationship ದುರಂತ: ಪ್ರಿಯತಮೆಯನ್ನ ಕೊಂದ ಪಾಪಿ; ಹೆಣ ವಿಲೇವಾರಿಗೆ ಸಾಥ್ ಕೊಟ್ಟಿದ್ದೇ ಮನೆಯವರು!

ನ್ಯಾಯಕ್ಕಾಗಿ ಪತ್ನಿಯ ಹೋರಾಟ
ಟಿಕ್ ಟಾಕ್ ವಿಡಿಯೋಗಳ ಮೂಲಕ ಸ್ಟೈಲಿಶ್ (Mangaluru Matrimony Fraud) ಆಗಿ ಕಾಣಿಸಿಕೊಂಡು ಯುವತಿಯರನ್ನು ಸೆಳೆಯುತ್ತಿದ್ದ ಮನೀಶ್ ನಡೆತೆಯಿಂದ ಬೇಸತ್ತ ಪ್ರೀತಿ, ಈಗ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂತಹ ವಂಚಕ ಪತಿ ನನಗೆ ಬೇಡವೇ ಬೇಡ ಎಂದು ನಿರ್ಧರಿಸಿರುವ ಅವರು, ಇನ್ನು ಮುಂದೆ ಯಾವ ಯುವತಿಯೂ ಇವನ ಮಾತು ನಂಬಿ ಮೋಸ ಹೋಗಬಾರದು ಎಂದು ಸಮಾಜಕ್ಕೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ಪೊಲೀಸರು ಈ ‘ಮಂಗಳೂರು ಮನ್ಮಥ’ನ ವಿರುದ್ಧ ತನಿಖೆ ಕೈಗೊಂಡಿದ್ದಾರೆ.
