Kunigal Priyanka Case : ಆಧಾರ್ ಕಾರ್ಡ್ ಒಂದು ಕಡೆ, ಚಪ್ಪಲಿ ಇನ್ನೊಂದು ಕಡೆ: ಸಿನಿಮೀಯ ಶೈಲಿಯಲ್ಲಿ ನಾಪತ್ತೆ ನಾಟಕವಾಡಿದ ಕಿಲಾಡಿ ಆಂಟಿ!

ಒಂದೆಡೆ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಕಣ್ಣೀರು ಹಾಕುತ್ತಿದ್ದ ಪತಿ, ಮತ್ತೊಂದೆಡೆ ಮಗಳು ಕೆರೆಯಲ್ಲಿ ಬಿದ್ದಿರಬಹುದು ಎಂದು ಆತಂಕದಲ್ಲಿದ್ದ ಪೋಷಕರು, ಇನ್ನೊಂದೆಡೆ ರಾತ್ರಿ ಹಗಲೆನ್ನದೆ ಕೆರೆಯಲ್ಲಿ ಶವಕ್ಕಾಗಿ ಹುಡುಕಾಡುತ್ತಿದ್ದ ಪೊಲೀಸರು ಮತ್ತು ಮುಳುಗು ತಜ್ಞರು. ಆದರೆ, ಇಷ್ಟೆಲ್ಲಾ ಹೈಡ್ರಾಮಾಕ್ಕೆ ಕಾರಣವಾಗಿದ್ದ ಆಕೆ ಮಾತ್ರ (Kunigal Priyanka Case) ಪ್ರಿಯಕರನ ಜೊತೆ ಮಜಾ ಮಾಡುತ್ತಿದ್ದಳು! ಕುಣಿಗಲ್ ಮೂಲದ ಪ್ರಿಯಾಂಕಾ ನಾಪತ್ತೆ ಪ್ರಕರಣ ಈಗ ಸಿನಿಮಾ ಸ್ಟೈಲ್‌ನಲ್ಲಿ ಅಸಲಿ ಅಂತ್ಯ ಕಂಡಿದೆ.

Kunigal Priyanka Case – Staged Missing Drama Near Kalkere Lake

Kunigal Priyanka Case – ಮದುವೆಗೆಂದು ಹೋದವಳು ಪ್ರಿಯಕರನ ಜೊತೆ ಎಸ್ಕೇಪ್

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಲಿಯೂರು ಗ್ರಾಮದ ಪ್ರಿಯಾಂಕಾ ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ನಡೆದ ಸಂಬಂಧಿಕರ ಮದುವೆಗೆ ಹೋಗಿದ್ದಳು. ಮೈಮೇಲೆ ಬರೋಬ್ಬರಿ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಧರಿಸಿದ್ದ ಈಕೆ, ಮದುವೆ ಮುಗಿಸಿ ಹಾಸನದ ಬೇಲೂರಿನಲ್ಲಿದ್ದ ತಾಯಿ ಮನೆಗೆ ಬಂದಿದ್ದಳು. ಅಲ್ಲಿಂದ ವಾಪಸ್ ಊರಿಗೆ ಹೋಗುತ್ತೇನೆ ಎಂದು ಅಮ್ಮನಿಗೆ ಹೇಳಿ ಬಸ್ ಹತ್ತಿದವಳು ದಿಢೀರ್ ನಾಪತ್ತೆಯಾಗಿದ್ದಳು. ಈಕೆಯ ಪತ್ತೆಗಾಗಿ ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದರು.

ಪೊಲೀಸರ ದಿಕ್ಕು ತಪ್ಪಿಸಲು ಕೆರೆ ಬಳಿ ಕ್ರೈಮ್ ಸೀನ್ ಸೃಷ್ಟಿ

ಪ್ರಿಯಾಂಕಾ ನಾಪತ್ತೆಯಾದ ಬೆನ್ನಲ್ಲೇ ಹಾಸನದ ಹೆದ್ದಾರಿ ಬದಿಯ ಕಲ್ಕೆರೆ ಬಳಿ ಆಕೆಯ ಆಧಾರ್ ಕಾರ್ಡ್, ಚಪ್ಪಲಿ, ವ್ಯಾನಿಟಿ ಬ್ಯಾಗ್ ಮತ್ತು ಹರಿದ ಒಳಉಡುಪುಗಳು ಪತ್ತೆಯಾಗಿದ್ದವು. ಇದನ್ನು ನೋಡಿದ (Kunigal Priyanka Case) ಪೊಲೀಸರು ಮತ್ತು ಕುಟುಂಬಸ್ಥರು ಬೆಚ್ಚಿಬಿದ್ದಿದ್ದರು. ಯಾರಾದರೂ ಚಿನ್ನಕ್ಕಾಗಿ ಈಕೆಯನ್ನು ಕೊಲೆ ಮಾಡಿ ಕೆರೆಗೆ ಎಸೆದಿದ್ದಾರಾ ಅಥವಾ ಅತ್ಯಾಚಾರ ನಡೆದಿದೆಯೇ ಎಂಬ ಅನುಮಾನ ಮೂಡಿತ್ತು. ಈ ಅನುಮಾನದ ಬೆನ್ನಲ್ಲೇ ಪ್ರಸಿದ್ಧ ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡ ಹಾಗೂ ಅಗ್ನಿಶಾಮಕ ದಳದವರು ರಾತ್ರಿಯಿಡೀ ಕೆರೆಯಲ್ಲಿ ಗಾಳ ಹಾಕಿ ಹುಡುಕಾಡಿದ್ದರು. ಆದರೆ ಪೊಲೀಸರಿಗೆ ಗೊತ್ತಿರಲಿಲ್ಲ, ಇದೆಲ್ಲಾ ಆಕೆ ಪೊಲೀಸರ ಹಾದಿ ತಪ್ಪಿಸಲು ಮಾಡಿದ ಮಾಸ್ಟರ್ ಪ್ಲ್ಯಾನ್ ಎಂದು.

Kunigal Priyanka Case – Staged Missing Drama Near Kalkere Lake

ಡೇವಿಡ್ ಜೊತೆ ಹೊಸ ಜೀವನಕ್ಕೆ ಸ್ಕೆಚ್ ಹಾಕಿದ್ದ ಪ್ರಿಯಾಂಕಾ

ಅಸಲಿಗೆ ಪ್ರಿಯಾಂಕಾಳಿಗೆ ತನ್ನ ಸಹೋದ್ಯೋಗಿ ಡೇವಿಡ್ ಎಂಬಾತನ ಮೇಲೆ ಪ್ರೇಮ ಅಂಕುರವಾಗಿತ್ತು. ಗಂಡನನ್ನು ಬಿಟ್ಟು ಆತನ ಜೊತೆ ಸಂಸಾರ ಮಾಡಲು ನಿರ್ಧರಿಸಿದ್ದ ಈಕೆ, ವ್ಯಾಲೆಂಟೈನ್ಸ್ ಡೇ ದಿನವೇ ಈ ಸ್ಕೆಚ್ ಹಾಕಿದ್ದಳು. ಬಸ್ ಹತ್ತಿದವಳೇ ಮುಂದಿನ ಸ್ಟಾಪ್‌ನಲ್ಲಿ ಇಳಿದು ಡೇವಿಡ್ ಬೈಕ್ ಹತ್ತಿದ್ದಳು. ದಾರಿಯಲ್ಲಿ ಬಟ್ಟೆ (Kunigal Priyanka Case) ಬದಲಿಸಿ, ಹಳೆಯ ಬಟ್ಟೆ ಹಾಗೂ ವಸ್ತುಗಳನ್ನು ಕೆರೆ ಬಳಿ ಎಸೆದಿದ್ದಳು. ಪೊಲೀಸರು ಕೆರೆಯಲ್ಲಿ ಹುಡುಕಾಡಿ ಸುಸ್ತಾಗಿ, ಈಕೆ ಸತ್ತಿರಬಹುದು ಎಂದು ಕೇಸ್ ಕ್ಲೋಸ್ ಮಾಡುತ್ತಾರೆ ಎಂಬುದು ಈಕೆಯ ಯೋಜನೆಯಾಗಿತ್ತು. Read this also : ಜ್ಯೋತಿಷಿಯ ಮಾತಿಗೆ ಮರುಳಾಗಿ ಹೆತ್ತ ತಾಯಿಯನ್ನೇ ಕೊಂದಳೇ ಮಗಳು? ಹೃದಯಾಘಾತದ ನಾಟಕವಾಡಿದ ಸುಚಿತ್ರಾ ಸಿಕ್ಕಿಬಿದ್ದಿದ್ದು ಹೇಗೆ?

ಸ್ಫೋಟಕ ಸತ್ಯ ಬಯಲು ಮಾಡಿದ ಪೊಲೀಸರ ಚಾಣಾಕ್ಷತನ

ತಾನು ಸಿಕ್ಕಿಬೀಳಬಾರದು ಎಂದು ಪ್ರಿಯಾಂಕಾ ಬೇರೆಯದೇ ಸಿಮ್ ಬಳಸುತ್ತಿದ್ದಳು. ಆದರೆ ಪೊಲೀಸರು ತಾಂತ್ರಿಕ ತನಿಖೆ ನಡೆಸಿದಾಗ, ಒಂದೇ ಮೊಬೈಲ್‌ನಲ್ಲಿ ಎರಡು ಸಿಮ್ ಬಳಕೆಯಾಗುತ್ತಿರುವುದು ಪತ್ತೆಯಾಯಿತು. ಈ ಸುಳಿವು ಬೆನ್ನತ್ತಿದ ಹಾಸನ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಅಸಲಿ ಸತ್ಯ (Kunigal Priyanka Case) ಹೊರಬಂದಿದೆ. ತಾವು ಕೆಲಸ ಮಾಡುತ್ತಿದ್ದ ಕಂಪನಿ ಮಧ್ಯಪ್ರದೇಶಕ್ಕೆ ಶಿಫ್ಟ್ ಆಗುತ್ತಿದೆ ಎಂದು ತಿಳಿದಿದ್ದ ಈ ಜೋಡಿ, 20 ಲಕ್ಷದ ಒಡವೆ ಸಮೇತ ಅಲ್ಲಿಗೆ ಹೋಗಿ ಸೆಟಲ್ ಆಗಲು ಪ್ಲ್ಯಾನ್ ಮಾಡಿತ್ತು. ಆದರೆ ಫೆಬ್ರವರಿ 14ರ ರಾತ್ರಿ ಕುಣಿಗಲ್‌ನಲ್ಲಿ ಈ ಪ್ರೇಮಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

Leave a Comment

Your email address will not be published. Required fields are marked *

Scroll to Top