ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ನೂರಾರು ವಿಡಿಯೋಗಳು ಹರಿದಾಡುತ್ತವೆ. ಆದರೆ ಫೆಬ್ರವರಿ 13ರಂದು ಪೋಸ್ಟ್ ಆದ ಒಂದು ವಿಡಿಯೋ ಮಾತ್ರ ಈಗ ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿದೆ. ತುಂಡುಡುಗೆ ಧರಿಸಿದ ಯುವತಿಯರ ಗುಂಪೊಂದು (Viral Street Fight) ನಡುರಸ್ತೆಯಲ್ಲೇ ಒಬ್ಬರನ್ನೊಬ್ಬರು ಬಡಿದಾಡಿಕೊಳ್ಳುತ್ತಿರುವ ದೃಶ್ಯ ಕಂಡು ನೆಟ್ಟಿಗರು ದಂಗಾಗಿದ್ದಾರೆ. ಈಗಾಗಲೇ ಈ ವಿಡಿಯೋ ಎರಡು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡು ಸಖತ್ ಸದ್ದು ಮಾಡುತ್ತಿದೆ.

Viral Street Fight – ನಡುರಸ್ತೆಯಲ್ಲೇ ನರ್ತಿಸಿದ ‘ಹಿಂಸೆ’ಯ ಅವತಾರ
ಈ ವೈರಲ್ ವಿಡಿಯೋದಲ್ಲಿ ಆರಂಭದಲ್ಲಿ ಇಬ್ಬರು ಯುವತಿಯರು ಪರಸ್ಪರ ಕೆನ್ನೆಗೆ ಬಾರಿಸಿಕೊಳ್ಳುತ್ತಾ ಜಗಳ ಆರಂಭಿಸುತ್ತಾರೆ. ನೋಡನೋಡುತ್ತಿದ್ದಂತೆ ಜಗಳದ ತೀವ್ರತೆ ಹೆಚ್ಚಾಗಿ, ರಸ್ತೆ ಬದಿಯಲ್ಲಿ ಮತ್ತಿಬ್ಬರ ನಡುವೆಯೂ ಭೀಕರ ಫೈಟ್ ಶುರುವಾಗುತ್ತದೆ. ಸಾರ್ವಜನಿಕ ಸ್ಥಳ ಎಂಬ ಪರಿವೆಯೇ ಇಲ್ಲದೆ ಒಬ್ಬರನ್ನೊಬ್ಬರು ನೆಲಕ್ಕೆ ತಳ್ಳಿ ಹಲ್ಲೆ ಮಾಡುತ್ತಿರುವುದು ಸಿನಿಮಾದ ಆಕ್ಷನ್ ದೃಶ್ಯವನ್ನೂ ಮೀರಿಸುವಂತಿದೆ. ಈ ರಂಪಾಟದ ನಡುವೆ ಅವರ ಉಡುಪುಗಳು ಅಸ್ತವ್ಯಸ್ತವಾಗುತ್ತಿದ್ದರೂ ಯಾರೊಬ್ಬರೂ ಹೊಡೆದಾಟ ನಿಲ್ಲಿಸುವ ಮನಸ್ಸು ಮಾಡುವುದಿಲ್ಲ.
Read this also : ಅಳಿಯನ ಜೊತೆ ಓಡಿಹೋಗಿದ್ದ ಅತ್ತೆ ಈಗ ‘ಬಾವ’ನ ಜೊತೆ ಪರಾರಿ! ಯುಪಿಯ ಈ ಕಿಲಾಡಿ ಮಹಿಳೆಯ ಕಥೆ ಕೇಳಿದ್ರೆ ಶಾಕ್ ಆಗ್ತೀರಾ!
ರಕ್ಷಕಿಯಾಗಿ ಧಾವಿಸಿದ ಆ ‘ಹಸಿರು ಸುಂದರಿ’
ಈ ಇಡೀ ಗಲಾಟೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ಹಸಿರು ಬಣ್ಣದ ಡ್ರೆಸ್ ಧರಿಸಿದ್ದ ಯುವತಿ. ತನ್ನ ಸ್ನೇಹಿತೆಯ ಮೇಲೆ ಮೂವರು ಯುವತಿಯರ ಗುಂಪು ಒಮ್ಮೆಲೆ ಅಟ್ಯಾಕ್ ಮಾಡಿದಾಗ, ಈಕೆ ಒಬ್ಬಳೇ ಎದುರಾಳಿಗಳನ್ನು ಎಳೆದು ಬಿಸಾಡುತ್ತಾಳೆ. ಎದುರಾಳಿಗಳು ಎಷ್ಟೇ ಬಲವಾಗಿ ಮುಗಿಬಿದ್ದರೂ ಎದೆಗುಂದದೆ ತನ್ನ ಗೆಳತಿಯನ್ನು ರಕ್ಷಿಸುವ (Viral Street Fight) ಈಕೆಯ ಸಾಹಸ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೊನೆಗೆ ದಾರಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಧಾವಿಸಿ ಬಂದು ಈ ಐವರ ಜಗಳವನ್ನು ಬಿಡಿಸಲು ಹರಸಾಹಸ ಪಡಬೇಕಾಯಿತು.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here
ನೆಟ್ಟಿಗರ ಕಮೆಂಟ್ ಬಾಕ್ಸ್‌ನಲ್ಲಿ ಚರ್ಚೆಯ ಸುರಿಮಳೆ
ವಿಡಿಯೋ ನೋಡಿದ ಜನರು ಇದನ್ನು ಕೇವಲ ಜಗಳ ಎನ್ನದೆ ‘ಘನಘೋರ ಯುದ್ಧ’ ಎಂದು ಕರೆದಿದ್ದಾರೆ. ಕೆಲವರು ಇವರ ಫೈಟಿಂಗ್ ಅನ್ನು ಪ್ರಸಿದ್ಧ WWE ಆಟಕ್ಕೆ ಹೋಲಿಕೆ ಮಾಡಿದ್ದರೆ, ಇನ್ನೂ ಕೆಲವರು ಇವರು ನಿಜವಾಗಿಯೂ ಮಹಿಳೆಯರಲ್ಲ, ಬದಲಾಗಿ ವಿದೇಶಿ ಮಂಗಳಮುಖಿಯರು ಇರಬಹುದು ಎಂದು ಅನುಮಾನ (Viral Street Fight) ವ್ಯಕ್ತಪಡಿಸಿದ್ದಾರೆ. ಬಹುಶಃ ಗ್ರಾಹಕರಿಗಾಗಿ ಅಥವಾ ಹಣದ ವಿಷಯಕ್ಕಾಗಿ ಈ ಮಟ್ಟದ ಜಗಳ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ.
