ಕುರ್ ಕುರೇ ಗಾಗಿ ವಿಚ್ಚೇದನ ನೀಡಲು ಮುಂದಾದ ಪತ್ನಿ, ಎಂತಾ ವಿಚಿತ್ರ ಘಟನೆ ನೋಡಿ….!

ಆಧುನಿಕ ಸಮಾಜದಲ್ಲಿ ಮದುವೆ ಎಷ್ಟು ಬೇಗ ಆಗುತ್ತಿರುತ್ತವೆಯೋ ಅದೇ ರೀತಿ ವಿಚ್ಚೇದನಗಳೂ ಸಹ ನಡೆಯುತ್ತಿರುತ್ತವೆ. ಹಣ, ಆಸ್ತಿ ಸೇರಿದಂತೆ ಕೆಲವೊಂದು ಪ್ರಮುಖ ಕಾರಣಗಳಿಂದಾಗಿ ವಿಚ್ಚೇದನ ಪಡೆದುಕೊಳ್ಳುವಂತಹ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿ ಕುರ್‍ ಕುರೇ ಪ್ಯಾಕೆಟ್ ತಂದಿಲ್ಲ ಅಂತ ಗಂಡನನ್ನು ಬಿಡಲು ಮುಂದಾಗಿದ್ದಾಳೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ.

ಕುರ್‍ ಕುರೇ ಪ್ಯಾಕೆಟ್ ಗಾಗಿ ಗಂಡನನ್ನು ಬಿಡಲು ಮುಂದಾದ ಪತ್ನಿ ಎಂದ ಕೂಡಲೇ ಎಲ್ಲರೂ ಇದೊಂದು ತಮಾಷೆ ಎಂದೇ ಭಾವಿಸಬಹುದು. ಆದರೆ ಇದು ನಿಜ. ಉತ್ತರ ಪ್ರದೇಶದ ಆಗ್ರಾದ ದಂಪತಿ ಬೇರೆಯಾಗಲು ಕುರ್‍ ಕುರೇ ಪ್ಯಾಕೆಟ್ ಕಾರಣವಾಗಿದೆ. ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ದಂಪತಿಯ ಸಮಸ್ಯೆ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. 5 ರೂಪಾಯಿ ಕುರ್‍ ಕುರೇ ಪ್ಯಾಕೆಟ್ ಗಾಗಿ ಗೃಹಿಣಿಯೊಬ್ಬಳು ತನ್ನ ಪತಿಗೆ ವಿಚ್ಚೇದನ ನೀಡಲು ಮುಂದಾಗಿದ್ದಾಳೆ. ಮಹಿಳೆ ತನ್ನ ಪತಿಗೆ ಕುರ್‍ ಕುರೇ ಪ್ಯಾಕೆಟ್ ತರಲು ಹೇಳಿದ್ದಾಳೆ. ಆದರೆ ಗಂಡ ಅದನ್ನು ತರದೇ ಮರೆತು ಮನೆಗೆ ಬಂದಿದ್ದಾನೆ. ಈ ಕಾರಣದಿಂದ ಕೋಪಗೊಂಡ ಮಹಿಳೆ ನನಗೆ ಗಂಡನೇ ಬೇಡ ಎಂದು ಆತನೊಂದಿಗೆ ಬೇರೆಯಾಗಲು ಮುಂದಾಗಿದ್ದಾಳೆ ಎಂದು ತಿಳಿದಬಂದಿದೆ.

women wants divorce for kurkure 1

ಇನ್ನೂ ಕಳೆದ ವರ್ಷವಷ್ಟೆ ಈ ಜೋಡಿ ಮದುವೆಯಾದರು. ಮದುವೆಯಾಗಿ ಒಂದು ವರ್ಷ ಕಳೆಯುತ್ತಿದ್ದಂತೆ ಇಬ್ಬರೂ ಬೇರೆಯಾಗಿದ್ದಾರೆ. ಕೇವಲ 5 ರೂಪಾಯಿ ಕುರ್‍ ಕುರೇ ಪ್ಯಾಕೆಟ್ ಇಡೀ ಸಂಸಾರವನ್ನೇ ಒಡೆದು ಹಾಕಿದೆ. ಇನ್ನೂ ಪ್ರತಿ ನಿತ್ಯ ಪತಿ ಆಫಿಸ್ ನಿಂದ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ಸಾಗುವಾಗ 5 ರೂಪಾಯಿಯ ಕುರ್‍ ಕುರೇ ಪ್ಯಾಕೆಟ್ ತರುತ್ತಿದ್ದನಂತೆ. ಮಾಹಿತಿಯಂತೆ ಮಹಿಳೆ ಕುರ್‍ ಕುರೇ ತಿನ್ನುವುದನ್ನ ತುಂಬಾ ಅಭ್ಯಾಸ ಮಾಡಿಕೊಂಡಿದ್ದು, ಅದೊಂದು ಗೀಳಾಗಿ ಪರಿಣಮಿಸಿದೆಯಂತೆ. ಪ್ರತಿನಿತ್ಯ ಪತಿಗೆ ಪಫ್ ಕಾರ್ನ್ ಕುರ್‍ ಕುರೇ ಪ್ಯಾಕೆಟ್ ತರಲು ಡಿಮ್ಯಾಡ್ ಮಾಡುತ್ತಿದ್ದಳಂತೆ. ಅದರಂತೆ ಪತಿ ಸಹ ಪ್ರತಿನಿತ್ಯ ಪತ್ನಿಗೆ ಕುರ್‍ ಕುರೇ ತರುತ್ತಿದ್ದನಂತೆ. ಆದರೆ ಒಂದು ದಿನ ಮರೆತು ಬಂದ ಕಾರಣದಿಂದ ಪತ್ನಿ ಮನೆ ಬಿಟ್ಟು ತವರು ಮನೆ ಸೇರಿಕೊಂಡಿದ್ದಾಳೆ. ಕಳೆದ ಒಂದು ತಿಂಗಳಿನಿಂದ ತವರು ಮನೆಯಲ್ಲುಯೇ ಪತ್ನಿ ಇದ್ದಾಳೆ ಎಂದು ಪೊಲೀಸರ ಬಳಿ ಪತಿ ಹೇಳಿದ್ದಾನಂತೆ.

ಇನ್ನೂ ಇಬ್ಬರೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ ಮಹಿಳೆ ತನಗೆ ಪತಿ ದೈಹಿಕ ಕಿರುಕುಳ ನೀಡುತ್ತಾನೆ. ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಈ ಕಾರಣದಿಂದ ತವರು ಮನೆಯಲ್ಲಿ ಇರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಸದ್ಯ ಪೊಲೀಸರು ಫ್ಯಾಮಿಲಿ ಕೌನ್ಸಿಲಿಂಗ್ ಸೆಂಟರ್‍ ಗೆ ಈ ಪ್ರಕರಣವನ್ನು ಕಳುಹಿಸಿದ್ದಾರೆ. ದಂಪತಿಗೆ ಕೌನ್ಸಿಲಿಂಗ್ ಮಾಡಿ ಕೆಲವೊಂದು ಸಲಹೆಗಳನ್ನು ಸಹ ನೀಡಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *

Scroll to Top
WordPress Lab Ankara Escort: Çankaya Escort, Mamak Escort, Polatlı Escort İstanbul Escort: Avcılar Escort, Beylikdüzü Escort, Esenyurt Escort Bursa Escort: İznik Escort, Büyükorhan Escort, İnegöl Escort ರಾಜ್ಯ ಮಟ್ಟದ ಪ್ರವಾಸೋದ್ಯಮದತ್ತ ಗುಡಿಬಂಡೆ, ಚಲನಚಿತ್ರೊದ್ಯಮವೇ ಚಿತ್ರೀಕರಣಕ್ಕಾಗಿ ಇಲ್ಲಿದೆ ಐತಿಹಾಸಿಕ ಪ್ರಾಕೃತಿಕ ತಾಣಗಳು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಕುಟುಂಬದ ಹೆಸರು ತರೋದು ಏಕೆ ಎಂದ ಹೆಚ್.ಡಿ.ಕೆ….! ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ? Custom Product Tabs Manager Plugin – Product Tabs Manager Password Protected Categories, Products & Pages Plugin For WooCommerce Weather for Visual Composer Floating Call Button – All In One Call Button Elyasa – Responsive Coming Soon WordPress Plugin Perfect WooCommerce Brands Helium: WordPress Full Screen Menu WooCommerce License Delivery & Management WPBakery Page Intro Card Slider – Addon for WPBakery Page Builder