Blinkit Delivery Agent : ‘ನನ್ನನ್ನೇ ಬಳಸಿಕೊಳ್ಳಿ ಮೇಡಂ’: ವೈಬ್ರೇಟರ್ ಆರ್ಡರ್ ಮಾಡಿದ್ದ ಯುವತಿಗೆ ಬ್ಲಿಂಕಿಟ್ ಏಜೆಂಟ್‌ನಿಂದ ಕಾಮದ ಆಫರ್!

ಆನ್‌ಲೈನ್‌ನಲ್ಲಿ ವಸ್ತುಗಳನ್ನು ಆರ್ಡರ್ ಮಾಡುವುದು ಈಗಿನ ದಿನಗಳಲ್ಲಿ ಅತ್ಯಂತ ಸಾಮಾನ್ಯ. ಅದರಲ್ಲೂ ನಮ್ಮ ವೈಯಕ್ತಿಕ ವಸ್ತುಗಳನ್ನು ಯಾರಿಗೂ ತಿಳಿಯದಂತೆ ರಹಸ್ಯವಾಗಿ ತರಿಸಿಕೊಳ್ಳಬಹುದು ಎಂಬುದು ಗ್ರಾಹಕರ ಪ್ರಮುಖ ನಂಬಿಕೆ. ಆದರೆ, ಇದೇ ನಂಬಿಕೆಯನ್ನು ಹುಸಿಯಾಗಿಸುವ ಅತ್ಯಂತ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಖ್ಯಾತ ಕ್ವಿಕ್-ಕಾಮರ್ಸ್ ಆ್ಯಪ್ ಬ್ಲಿಂಕಿಟ್ (Blinkit Delivery Agent) ಮೂಲಕ ಲೈಂಗಿಕ ಕ್ಷೇಮ ಉತ್ಪನ್ನವೊಂದನ್ನು (Sexual Wellness Product) ತರಿಸಿಕೊಂಡಿದ್ದ ಯುವತಿಗೆ, ಆ ಡೆಲಿವರಿ ಏಜೆಂಟ್ ಲೈಂಗಿಕ ಕಿರುಕುಳ ನೀಡಿ ಕೆಲಸ ಕಳೆದುಕೊಂಡಿದ್ದಾನೆ.

Blinkit delivery agent harassment case involving woman customer after ordering personal wellness product online

Blinkit Delivery Agent – ಗೌಪ್ಯತೆ ಕಳೆದುಕೊಂಡ ಆನ್‌ಲೈನ್ ಆರ್ಡರ್!

ಪೂಜಾ ಜೋಶಿ ಎಂಬ ಗ್ರಾಹಕಿ ಪ್ರೊಫೆಷನಲ್ ನೆಟ್‌ವರ್ಕಿಂಗ್ ತಾಣವಾದ ಲಿಂಕ್ಡ್‌ಇನ್‌ನಲ್ಲಿ (LinkedIn) ತಮಗಾದ ಭೀಕರ ಅನುಭವವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. “ಒಬ್ಬ ಮಹಿಳೆಯಾಗಿ ನಾನು ಅತ್ಯಂತ ಆತಂಕಕಾರಿ ಘಟನೆಯನ್ನು ಎದುರಿಸಿದ್ದೇನೆ. ನಾನು ಬ್ಲಿಂಕಿಟ್ ಆ್ಯಪ್ ಮೂಲಕ ಸಂಪೂರ್ಣವಾಗಿ ಕಾನೂನುಬದ್ಧವಾಗಿರುವ ಲೈಂಗಿಕ ಕ್ಷೇಮ ಉತ್ಪನ್ನವೊಂದನ್ನು ಆರ್ಡರ್ ಮಾಡಿದ್ದೆ. ಆದರೆ, ನನ್ನದೇ ಮನೆಗೆ ಆರ್ಡರ್ ಮಾಡಿದ ಆ ಒಂದು ವಸ್ತು ಇಷ್ಟೊಂದು ದೊಡ್ಡ ಆತಂಕಕ್ಕೆ ಕಾರಣವಾಗುತ್ತದೆ ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ” ಎಂದು ಪೂಜಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮುರಿದ ಸೀಲ್, ಬೆಚ್ಚಿಬೀಳಿಸುವ ಫೋನ್ ಕಾಲ್!

ಡೆಲಿವರಿ ಏಜೆಂಟ್ ಪಾರ್ಸೆಲ್ ತಂದುಕೊಡುವಾಗಲೇ ಆತನ ದೃಷ್ಟಿ ವಿಚಿತ್ರವಾಗಿತ್ತು. ಇದರಿಂದ ಗಾಬರಿಗೊಂಡ ಯುವತಿ, ಪಾರ್ಸೆಲ್ ಇಸ್ಕೊಂಡು ತರಾತುರಿಯಲ್ಲಿ ಬಾಗಿಲು ಹಾಕಿಕೊಂಡಿದ್ದಾರೆ. ಆಮೇಲೆ ಗಮನಿಸಿದಾಗಲೇ ಆ ಪಾರ್ಸೆಲ್ ಸೀಲ್ ಓಪನ್ ಆಗಿರುವುದು (Unsealed) ಅವರಿಗೆ ಗೊತ್ತಾಗಿದೆ. ಅಂದರೆ, ಒಳಗೆ ಏನಿದೆ ಎಂದು ಆತ ಮೊದಲೇ ಕದ್ದು ನೋಡಿದ್ದ.

ಇದಾಗಿ ಕೆಲವೇ ನಿಮಿಷಗಳಲ್ಲಿ ಪೂಜಾ ಅವರ ವೈಯಕ್ತಿಕ ಮೊಬೈಲ್ ನಂಬರ್‌ಗೆ ಕರೆ ಮಾಡಿದ ಆ ಕಾಮುಕ ಏಜೆಂಟ್ ಅತ್ಯಂತ ಅಸಹ್ಯವಾಗಿ ಕಾಮದ ಆಫರ್ ನೀಡಿದ್ದಾನೆ. ಮೇಡಂ, ಅದನ್ನೆಲ್ಲ ಯಾಕೆ ಬಳಸ್ತೀರಾ? ನನ್ನನ್ನೇ ಬಳಸಿಕೊಳ್ಳಿ.. ನಿಮಗೆ ತುಂಬಾ ಮಜಾ ಕೊಡ್ತೀನಿ” (Ye sab kyun use kar rahi ho ma’am, mujhe kar lo use.. bhot maza dunga). ಈ ಮಾತುಗಳನ್ನು ಕೇಳಿ ಯುವತಿ ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ. Read this also : ವೈಕಲ್ಯವನ್ನೇ ಶಕ್ತಿಯಾಗಿಸಿದ ಯೋಧ: ಈ ಡೆಲಿವರಿ ಬಾಯ್ ನಗು ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೆ!

ಬೆದರಿದ ಕಾಮುಕ, ಆಕ್ರೋಶಗೊಂಡ ನೆಟ್ಟಿಗರು

ಈ ವಿಕೃತ ಮಾತುಗಳಿಂದ ಆಘಾತಗೊಂಡರೂ ಧೈರ್ಯ ಕಳೆದುಕೊಳ್ಳದ ಪೂಜಾ, ಆತನ ವಿರುದ್ಧ ತಕ್ಷಣವೇ ಪೊಲೀಸರಿಗೆ ಹಾಗೂ ಕಂಪನಿಗೆ ದೂರು ನೀಡುವುದಾಗಿ ಎಚ್ಚರಿಸಿದ್ದಾರೆ. ಇದರಿಂದ ಹೆದರಿದ ಆತ ಕ್ಷಮೆ ಕೇಳಿದ್ದಾನೆ. “ಆದರೆ, ಆ ಕ್ಷಣದಲ್ಲಿ ನನಗಾದ ಮಾನಸಿಕ ಆಘಾತ ಹಾಗೂ ನನ್ನ ಗೌರವಕ್ಕೆ ಧಕ್ಕೆಯಾದ ಭಾವನೆಯನ್ನು ಆತನ ಒಂದು ಸಣ್ಣ ಕ್ಷಮಾಪಣೆಯಿಂದ ಸರಿಪಡಿಸಲು ಖಂಡಿತಾ ಸಾಧ್ಯವಿಲ್ಲ” ಎಂದು ಪೂಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Blinkit delivery agent harassment case involving woman customer after ordering personal wellness product online

ಪೂಜಾ ಅವರ ಈ ಪೋಸ್ಟ್ ವೈರಲ್ (Post Link Here) ಆಗುತ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಮಹಿಳೆಯೊಬ್ಬಳು ವೈಯಕ್ತಿಕ ವಸ್ತುವನ್ನು ಆರ್ಡರ್ ಮಾಡಿದರೆ, ಅದು ಆಕೆಗೆ ಕಿರುಕುಳ ನೀಡಲು ಕೊಟ್ಟ ಆಮಂತ್ರಣವಲ್ಲ.”
  • ಯಾವುದೇ ಮಹಿಳೆ ತಾನು ಲೀಗಲ್ ಆದ ವಸ್ತುವನ್ನು ಆರ್ಡರ್ ಮಾಡಿದ್ದಕ್ಕೆ ಗಿಲ್ಟ್ ಅನುಭವಿಸಬಾರದು. ಇದು ಆಕೆಯ ತಪ್ಪಲ್ಲ, ಡೆಲಿವರಿ ಬಾಯ್‌ವಿಕೃತ ಮನಸ್ಥಿತಿ.” ಹೀಗೆ ಪಿಒಎಸ್‌ಹೆಚ್ (POSH) ಸಲಹೆಗಾರ್ತಿ ಸೇರಿದಂತೆ ಹಲವರು ಯುವತಿಗೆ ಬೆಂಬಲ ಸೂಚಿಸಿದ್ದಾರೆ.

ತಕ್ಷಣವೇ ಆ್ಯಕ್ಷನ್ ತೆಗೆದುಕೊಂಡ ‘ಬ್ಲಿಂಕಿಟ್’

ಸೋಷಿಯಲ್ ಮೀಡಿಯಾದಲ್ಲಿ ವಿಷಯ ಗಂಭೀರವಾಗುತ್ತಿದ್ದಂತೆ ಬ್ಲಿಂಕಿಟ್ ಸಂಸ್ಥೆ ಎಚ್ಚೆತ್ತುಕೊಂಡಿದೆ. ಪೂಜಾ ಅವರ ಪೋಸ್ಟ್‌ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿದ ಸಂಸ್ಥೆ ಗ್ರಾಹಕಿಯ ಕ್ಷಮೆಯಾಚಿಸಿದೆ. “ಈ ಘಟನೆಯ ಬಗ್ಗೆ ಕೇಳಿ ನಮಗೆ ತೀವ್ರ ಆಘಾತವಾಗಿದೆ. ನಮ್ಮ ಸಿಬ್ಬಂದಿಯ ಈ ಅಸಭ್ಯ ವರ್ತನೆಗೆ ನಾವು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಗ್ರಾಹಕರ ಸುರಕ್ಷತೆಯೇ ನಮಗೆ ಅತ್ಯಂತ ಪ್ರಮುಖ ವಿಚಾರ” ಎಂದು ಬ್ಲಿಂಕಿಟ್ ತಿಳಿಸಿದೆ.

ಇದರ ಬೆನ್ನಲ್ಲೇ ಉನ್ನತ ಅಧಿಕಾರಿಗಳು ಪೂಜಾ ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸಿದ್ದು, ಡೆಲಿವರಿ ಬಾಯ್ ಅನ್ನು ತಕ್ಷಣವೇ ಕೆಲಸದಿಂದ ವಜಾಗೊಳಿಸಲಾಗಿದೆ (Fired) ಹಾಗೂ ಆತನ ವಿರುದ್ಧ ಕಠಿಣ ಆಂತರಿಕ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ವ್ಯವಸ್ಥೆಯನ್ನು ಸರಿಪಡಿಸುವುದಾಗಿಯೂ ಸಂಸ್ಥೆ ಸ್ಪಷ್ಟಪಡಿಸಿದೆ.

Leave a Comment

Your email address will not be published. Required fields are marked *

Scroll to Top