Friday, February 20, 2026
HomeNationalPMJJBY Scheme : ಸಾಮಾನ್ಯ ಜನರಿಗೆ 'ಶ್ರೀರಾಮರಕ್ಷೆ'.. ತಿಂಗಳಿಗೆ ಕೇವಲ ₹36 ಪಾವತಿಸಿ ₹2 ಲಕ್ಷ...

PMJJBY Scheme : ಸಾಮಾನ್ಯ ಜನರಿಗೆ ‘ಶ್ರೀರಾಮರಕ್ಷೆ’.. ತಿಂಗಳಿಗೆ ಕೇವಲ ₹36 ಪಾವತಿಸಿ ₹2 ಲಕ್ಷ ಲೈಫ್ ಇನ್ಶೂರೆನ್ಸ್ ಪಡೆಯಿರಿ!

ಇಂದಿನ ಅನಿಶ್ಚಿತ ಜೀವನದಲ್ಲಿ ಕುಟುಂಬದ ಆರ್ಥಿಕ ಭದ್ರತೆ ಎಂಬುದು ಪ್ರತಿಯೊಬ್ಬರಿಗೂ ಅನಿವಾರ್ಯ. ಆದರೆ, ಹೆಚ್ಚಿನ ಪ್ರೀಮಿಯಂ ಹಣ ಕಟ್ಟಲು ಸಾಧ್ಯವಾಗದೆ ಅನೇಕರು ವಿಮೆಯಿಂದ ದೂರ ಉಳಿಯುತ್ತಾರೆ. ಅಂತಹ ಸಾಮಾನ್ಯ ಜನರಿಗಾಗಿ ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (PMJJBY Scheme) ಎಂಬ ಅದ್ಭುತ ಯೋಜನೆಯನ್ನು ಜಾರಿಗೆ ತಂದಿದೆ.

PMJJBY scheme offering ₹2 lakh life insurance coverage at ₹436 annual premium under Government of India

ಕೇವಲ ಒಂದು ಸಣ್ಣ ಮೊತ್ತದ ಉಳಿತಾಯದಿಂದ ನಿಮ್ಮ ಕುಟುಂಬಕ್ಕೆ ದೊಡ್ಡ ಮಟ್ಟದ ಆರ್ಥಿಕ ಆಸರೆ ನೀಡಲು ಈ ಯೋಜನೆ ಸಹಕಾರಿ. ಇದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.

PMJJBY Scheme – ಯಾವುದೇ ಕಾರಣಕ್ಕೆ ಮರಣ ಹೊಂದಿದರೂ ವಿಮೆ ಅನ್ವಯ!

ಈ ಯೋಜನೆಯ ವಿಶೇಷತೆಯೆಂದರೆ, ಪಾಲಿಸಿದಾರರು ಅಪಘಾತದಿಂದ ಮರಣ ಹೊಂದಲಿ ಅಥವಾ ಅನಾರೋಗ್ಯದಂತಹ ನೈಸರ್ಗಿಕ ಕಾರಣಗಳಿಂದ ಮರಣ ಹೊಂದಲಿ, ಅವರ ಕುಟುಂಬಕ್ಕೆ (ನಾಮಿನಿಗೆ) ₹2 ಲಕ್ಷ ರೂಪಾಯಿಗಳ ವಿಮಾ ಮೊತ್ತ ಸಿಗುತ್ತದೆ. ಇದು ಒಂದು ‘ಪ್ಯೂರ್ ಟರ್ಮ್’ ಪಾಲಿಸಿಯಾಗಿದ್ದು, ಮೆಚ್ಯೂರಿಟಿ ಪ್ರಯೋಜನಗಳು ಇರುವುದಿಲ್ಲ. ಆದರೆ ಕುಟುಂಬದ ಮುಖ್ಯಸ್ಥರ ಅಕಾಲಿಕ ಮರಣದ ಸಮಯದಲ್ಲಿ ಇದು ಬೆನ್ನೆಲುಬಾಗಿ ನಿಲ್ಲುತ್ತದೆ.

ಅರ್ಹತೆಗಳೇನು?

ಈ ಯೋಜನೆಯ (PMJJBY Scheme) ಲಾಭ ಪಡೆಯಲು ಈ ಕೆಳಗಿನ ಅರ್ಹತೆಗಳು ಇರಬೇಕು:

  • ವಯಸ್ಸು: 18 ವರ್ಷದಿಂದ 50 ವರ್ಷದೊಳಗಿನ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಸೇರಬಹುದು.
  • ಬ್ಯಾಂಕ್ ಖಾತೆ: ಯಾವುದೇ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆ (Savings Account) ಇರಬೇಕು.
  • ಆಧಾರ್ ಲಿಂಕ್: ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ಮತ್ತು ಕೆವೈಸಿ (KYC) ಪ್ರಕ್ರಿಯೆ ಪೂರ್ಣಗೊಂಡಿರಬೇಕು.
  • ಮಿತಿ: ಒಬ್ಬ ವ್ಯಕ್ತಿಗೆ ಎಷ್ಟು ಬ್ಯಾಂಕ್ ಖಾತೆಗಳಿದ್ದರೂ, ಕೇವಲ ಒಂದು ಖಾತೆಯ ಮೂಲಕ ಮಾತ್ರ ಈ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶವಿರುತ್ತದೆ.

PMJJBY scheme offering ₹2 lakh life insurance coverage at ₹436 annual premium under Government of India

ಪ್ರೀಮಿಯಂ ವಿವರ

ಈ ಯೋಜನೆಗೆ (PMJJBY Scheme) ವಾರ್ಷಿಕವಾಗಿ ಕೇವಲ ₹436 ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಂದರೆ ತಿಂಗಳಿಗೆ ಸರಾಸರಿ ₹36 ಮಾತ್ರ.  ಪ್ರತಿ ವರ್ಷ ಮೇ 25 ರಿಂದ ಮೇ 31 ರ ನಡುವೆ ನಿಮ್ಮ ಬ್ಯಾಂಕ್ ಖಾತೆಯಿಂದ ‘ಆಟೋ-ಡೆಬಿಟ್’ (ತಾನಾಗಿಯೇ ಹಣ ಕಡಿತ) ಮೂಲಕ ಈ ಮೊತ್ತವನ್ನು ಕತ್ತರಿಸಲಾಗುತ್ತದೆ. ನೀವು 55 ವರ್ಷ ವಯಸ್ಸಿನವರೆಗೆ ಈ ವಿಮಾ ರಕ್ಷಣೆಯನ್ನು ಮುಂದುವರಿಸಬಹುದು.

ಕ್ಲೈಮ್ ಮಾಡುವುದು ಹೇಗೆ?

  • ಕಾಯುವ ಅವಧಿ: ಯೋಜನೆಯಲ್ಲಿ ಹೊಸದಾಗಿ ಸೇರಿದ 30 ದಿನಗಳ ನಂತರವಷ್ಟೇ (Lien Period) ಸಾಮಾನ್ಯ ಮರಣಗಳಿಗೆ ವಿಮೆ ಕ್ಲೈಮ್ ಮಾಡಲು ಅವಕಾಶವಿರುತ್ತದೆ.
  • ಅಪಘಾತ: ಒಂದು ವೇಳೆ (PMJJBY Scheme) ರಸ್ತೆ ಅಪಘಾತಗಳಲ್ಲಿ ಮರಣ ಸಂಭವಿಸಿದರೆ, ಯಾವುದೇ ಕಾಯುವ ಅವಧಿ ಇರುವುದಿಲ್ಲ, ತಕ್ಷಣವೇ ಕ್ಲೈಮ್ ಮಾಡಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ನಿಮ್ಮ ಖಾತೆ ಇರುವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ ಒಂದು ಸರಳ ಅರ್ಜಿಯನ್ನು ಭರ್ತಿ ಮಾಡುವ ಮೂಲಕ ಅಥವಾ ನೆಟ್ ಬ್ಯಾಂಕಿಂಗ್/ಮೊಬೈಲ್ ಬ್ಯಾಂಕಿಂಗ್ ಮೂಲಕ ಸುಲಭವಾಗಿ ಈ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬಹುದು. ಜಂಟಿ ಖಾತೆ (Joint Account) ಹೊಂದಿರುವವರು ಕೂಡ ಪ್ರತ್ಯೇಕವಾಗಿ ಪ್ರೀಮಿಯಂ ಪಾವತಿಸಿ ಇದರ ಸೌಲಭ್ಯ ಪಡೆಯಬಹುದು.

ಅರ್ಜಿ ಸಲ್ಲಿಸಲು ಇರುವ 3 ಪ್ರಮುಖ ವಿಧಾನಗಳು ಇಲ್ಲಿವೆ:

  1. ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ (ಅತಿ ಸುಲಭ)

ನೀವು (PMJJBY Scheme) ಈಗಾಗಲೇ ಬ್ಯಾಂಕ್ ಆಪ್ ಬಳಸುತ್ತಿದ್ದರೆ, ಕೇವಲ 2 ನಿಮಿಷಗಳಲ್ಲಿ ಈ ಕೆಲಸ ಮುಗಿಯುತ್ತದೆ.

  • ನಿಮ್ಮ ಬ್ಯಾಂಕಿನ Mobile App ಅಥವಾ Net Banking ಗೆ ಲಾಗಿನ್ ಆಗಿ.
  • ಅಲ್ಲಿ ‘Insurance’ ಅಥವಾ ‘Social Security Schemes’ ಎಂಬ ಆಯ್ಕೆಯನ್ನು ಹುಡುಕಿ.
  • ಅದರಲ್ಲಿ ‘PMJJBY’ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆ ಆರಿಸಿ ಮತ್ತು Nominee (ವಂಶಸ್ಥರು/ವಾರಸುದಾರರು) ಹೆಸರನ್ನು ನಮೂದಿಸಿ.
  • ಷರತ್ತುಗಳನ್ನು ಒಪ್ಪಿ ‘Submit’ ಕೊಟ್ಟರೆ, ನಿಮ್ಮ ಖಾತೆಯಿಂದ ಹಣ ಕಡಿತವಾಗಿ ವಿಮೆ ಸಕ್ರಿಯಗೊಳ್ಳುತ್ತದೆ.
  1. ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ

ನೀವು ಆನ್‌ಲೈನ್ (PMJJBY Scheme) ಬಳಸದಿದ್ದರೆ ನೇರವಾಗಿ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಬಹುದು.

  • ನಿಮ್ಮ ಬ್ಯಾಂಕ್‌ಗೆ ಹೋಗಿ PMJJBY Application Form ಕೇಳಿ ಪಡೆಯಿರಿ.
  • ಅದರಲ್ಲಿ ನಿಮ್ಮ ಹೆಸರು, ಆಧಾರ್ ಸಂಖ್ಯೆ ಮತ್ತು ನಾಮಿನಿ ವಿವರಗಳನ್ನು ತುಂಬಿ ಸಹಿ ಮಾಡಿ.
  • ಅದರೊಂದಿಗೆ ಆಧಾರ್ ಕಾರ್ಡ್ ನಕಲು (Zerox) ನೀಡಿ.
  • ಬ್ಯಾಂಕ್ ಸಿಬ್ಬಂದಿ ಅದನ್ನು ಪರಿಶೀಲಿಸಿ ನಿಮ್ಮ ಖಾತೆಗೆ ವಿಮೆಯನ್ನು ಲಿಂಕ್ ಮಾಡುತ್ತಾರೆ.

PMJJBY scheme offering ₹2 lakh life insurance coverage at ₹436 annual premium under Government of India

  1. ಎಸ್‌ಎಂಎಸ್ (SMS) ಮೂಲಕ (ಕೆಲವು ಬ್ಯಾಂಕ್‌ಗಳಲ್ಲಿ ಮಾತ್ರ)

ಕೆಲವು ಬ್ಯಾಂಕ್‌ಗಳು ಗ್ರಾಹಕರಿಗೆ ಈ ಬಗ್ಗೆ ಮೆಸೇಜ್ ಕಳುಹಿಸುತ್ತವೆ.

ಅರ್ಜಿ ಸಲ್ಲಿಸುವಾಗ ಇವು ನೆನಪಿರಲಿ:

  • ಬ್ಯಾಂಕ್ ಬ್ಯಾಲೆನ್ಸ್: ನಿಮ್ಮ ಖಾತೆಯಲ್ಲಿ ಕನಿಷ್ಠ ₹436 ಹಣ ಇರಲಿ.
  • ಆಟೋ ಡೆಬಿಟ್: ಒಮ್ಮೆ (PMJJBY Scheme) ಅರ್ಜಿ ಸಲ್ಲಿಸಿದರೆ, ಪ್ರತಿ ವರ್ಷ ಮೇ ತಿಂಗಳಲ್ಲಿ ನಿಮ್ಮ ಖಾತೆಯಿಂದ ಹಣ ತಾನಾಗಿಯೇ ಕಡಿತವಾಗುತ್ತದೆ. ಆದ್ದರಿಂದ ನೀವು ಪ್ರತಿ ವರ್ಷ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
  • ಒಂದೇ ಖಾತೆ: ನಿಮಗೆ 2-3 ಬ್ಯಾಂಕ್‌ಗಳಲ್ಲಿ ಖಾತೆ ಇದ್ದರೂ, ಕೇವಲ ಒಂದು ಬ್ಯಾಂಕ್ ಮೂಲಕ ಮಾತ್ರ ಈ ವಿಮೆ ಪಡೆಯಲು ಸಾಧ್ಯ.

ಸೂಚನೆ: ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರ. ಹೆಚ್ಚಿನ ವಿವರಗಳಿಗಾಗಿ ಮತ್ತು ನಿಯಮ ನಿಬಂಧನೆಗಳಿಗಾಗಿ ದಯವಿಟ್ಟು ನಿಮ್ಮ ಬ್ಯಾಂಕ್ ಅಥವಾ ಅಧಿಕೃತ ವಿಮಾ ಏಜೆಂಟ್‌ರನ್ನು ಸಂಪರ್ಕಿಸಿ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

1 COMMENT

LEAVE A REPLY

Please enter your comment!
Please enter your name here

- Advertisment -

Most Popular