Snake Video- ಸೋಷಿಯಲ್ ಮಿಡಿಯಾ ಪುಣ್ಯ ಎಂಬಂತೆ ಅನೇಕ ಚಿತ್ರ-ವಿಚಿತ್ರ, ಅಪರೂಪದ ವಿಡಿಯೋಗಳು, ವಿಚಾರಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಅದರಲ್ಲೂ ಹಾವುಗಳ ವಿಡಿಯೋಗಳು ತುಂಬಾನೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹುದೆ ವಿಡಿಯೋ ಒಂದು ವೈರಲ್ ಆಗುತ್ತಿದೆ. ಕೆಲವೊಂದು ಜೀವಿಗಳು ಭೂಮಿಯನ್ನು ಅಗೆದು ಗುಣಿ ತೆಗೆಯುವುದರ (Snake Video) ಬಗ್ಗೆ ಕೇಳಿರುತ್ತೇವೆ. ಹಾವು ಗುಣಿ ತೋಡುವುದನ್ನು ನೋಡಿರಲು ಸಾಧ್ಯವಿಲ್ಲ ಎನ್ನಬಹುದಾಗಿದೆ. ನೋಡಿದರೂ ತುಂಬಾನೆ ವಿರಳ ಎನ್ನಬಹುದು. ಸದ್ಯ ಹಾವೊಂದು ಗುಣಿ ತೆಗೆಯುವ ವಿಡಿಯೋ (Snake Video) ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಸದ್ಯ ಈ ವಿಡಿಯೋ ಸನ್ ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ ಎಂಬ ಇನ್ಸ್ಟಾಗ್ರಾಂ ಪೇಜ್ ನಲ್ಲಿ ವಿಡಿಯೋ (Snake Video) ಹಂಚಿಕೊಳ್ಳಲಾಗಿದೆ. ಪ್ರಪಂಚದಲ್ಲಿ ಅತ್ಯಧಿಕ ಹಾವುಗಳು ಹಾಗೂ ವಿಷಪೂರಿತ ಹಾವುಗಳು ಇರುವುದು ಆಸ್ಟ್ರೇಲಿಯಾ ಖಂಡದಲ್ಲಿ ಎನ್ನಲಾಗಿದೆ. ಸೌತ್ ಈಸ್ಟ್ ಕ್ವಿನ್ಸ್ ಲ್ಯಾಂಡ್ ನ ಹಾವು ಹಿಡಿಯುವವರ ಇನ್ಸ್ಟಾಗ್ರಾಂ ಪೇಜ್ ನಿಂದ ಈ ವಿಡಿಯೋ (Snake Video) ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಹಾವೊಂದು ರಸ್ತೆ ಪಕ್ಕದಲ್ಲಿ ಮಣ್ಣನ್ನು ತೆಗೆಯುತ್ತಿರುತ್ತದೆ. ತನ್ನ ತಲೆ ಹಾಗೂ ಶರೀರದ ಮುಂದು ಭಾಗದ ರಂಧ್ರದ ಮೂಲಕ ಮಣ್ಣನ್ನು ಶ್ರದ್ದೆಯಿಂದ ತೆಗೆಯುತ್ತಿರುತ್ತದೆ. ಹೀಗೆ ತೆಗೆದ ಮಣ್ಣು ಮತ್ತೆ ಗುಣಿಯೊಳಗೆ ಬೀಳುತ್ತಿದ್ದರಿಂದ (Snake Video) ಅದನ್ನು ಹೊರತೆಗೆಯಲು ಹಾವು ತುಂಬಾನೆ ಕಷ್ಟಪಡುತ್ತಿರುತ್ತದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಈ ವಿಡಿಯೋವನ್ನು ಸನ್ ಶೈನ್ ಕೋಸ್ಟ್ ಸ್ನೇಕ್ ಕ್ಯಾಚರ್ಸ್ ಪೇಜ್ ನಲ್ಲಿ (Snake Video) ಹಂಚಿಕೊಂಡಿದ್ದಾರೆ. ಹಾವು ತನ್ನ ತಲೆಯಿಂದ ರಂದ್ರ ಮಾಡುವುದು ನೀವು ಎಲ್ಲಾದರೂ ನೋಡಿದ್ದೀರಾ, ಈ ಹಿಂದೆ ಕಪ್ಪೆಗಳು, ಆಮೆಗಳು, ಇಲಿಗಳಂತಹ ಪ್ರಾಣಿಗಳು ತಲೆಯ ಮೂಲಕ ರಂದ್ರ ಮಾಡುವ ಗುಣಿಗಳನ್ನು ಹಾವುಗಳು ತಮ್ಮ ನಿವಾಸವನ್ನಾಗಿ ಮಾಡಿಕೊಳ್ಳುತ್ತಿದ್ದವು (Snake Video) ಆದರೆ ಇದೀಗ ಹಾವುಗಳು ತಮಗೆ ಮತಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಸ್ವತಃ ಹಾವುಗಳೇ ಗುಣಿಗಳನ್ನು ತೆಗೆಯುತ್ತಿವೆಯೇ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು (Snake Video) ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.