ಕರ್ನಾಟಕದ ಕರಾವಳಿಯಲ್ಲಿ ಅತಿ ಹೆಚ್ಚು ಪ್ರಖ್ಯಾತಿ ಪಡೆದುಕೊಂಡ ಯಕ್ಷಗಾನ ಕಲೆ ದೇಶ ವಿದೇಶದಲ್ಲೂ ಪ್ರಖ್ಯಾತಿ ಪಡೆದಿದೆ. ದಕ್ಷಿಣ ಕನ್ನಡ, ಮಲೆನಾಡು, ಉಡುಪಿ ಕಡೆ ಆಗಾಗ ಯಕ್ಷಗಾನದ ಬಯಲಾಟಗಳು ನಡೆಯುತ್ತಲೇ ಇರುತ್ತದೆ. ಇದೀಗ ಮಂಗಳೂರಿನ ಯಕ್ಷಗಾನ ನೃತ್ಯ ಅಮೇರಿಕಾದಲ್ಲಿ (America) ಸದ್ದು ಮಾಡಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕದ ಪ್ರಖ್ಯಾತ ಯಕ್ಷಗಾನ ನೃತ್ಯ ಇದೀಗ ಅಮೇರಿಕಾದಲ್ಲಿ ಸದ್ದು ಮಾಡಿದೆ. ಯಕ್ಷಗಾನದ ಖ್ಯಾತಿ ಅಮೇರಿಕಾದಲ್ಲಿ ಪಸರಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ಅಮೇರಿಕಾದಲ್ಲಿ ನಡೆದ ಸ್ವಾತಂತ್ರೋತ್ಸವದ ಕಾರ್ಯಕ್ರಮದಲ್ಲಿ ಯಕ್ಷಗಾನ ಕಲೆಯನ್ನು ಪ್ರದರ್ಶನ ಮಾಡಲಾಗಿತ್ತು. ಯಕ್ಷಗಾನ ಕಲಾವಿದರು ಪಟ್ಲ ಸತೀಶ್ ಶೆಟ್ಟಿ ಕಂಠದಲ್ಲಿ ಮೂಡಿಬಂದ ಅದ್ಭುತವಾದ ಸಂಗೀತಕ್ಕೆ ಹೆಜ್ಜೆ ಹಾಕಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಅಭಿಮಾನಿ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: https://www.facebook.com/reel/1141594366939613
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಅಭಿಮಾನಿ ಹೆಸರಿನ ಫೇಸ್ ಬುಕ್ ಪೇಜ್ ನಲ್ಲಿ ಅಮೇರಿಕಾದಲ್ಲಿ ಪ್ರದರ್ಶನಗೊಂಡ ಯಕ್ಷಗಾನದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಮೇರಿಕಾದ ಬೀದಿ ಬೀದಿಯೂ ಯಕ್ಷಗಾನಮಯ, ಪಟ್ಲಮಯ; ಸ್ವಾತಂತ್ರ್ಯೋತ್ಸವದ ಸರ್ಕಾರಿ ಕಾರ್ಯಕ್ರಮದ ಪರೇಡ್‌ನಲ್ಲಿ ವಿಜೃಂಭಿಸಿದ ನಮ್ಮ ಹೆಮ್ಮೆಯ ಕಲೆ ಎಂಬ ಶೀರ್ಷಿಕೆಯನ್ನು ಬರೆದು ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಯಕ್ಷಗಾನ ಕಲಾವಿದರು ಯಕ್ಷಗಾನ ನೃತ್ಯ ಮಾಡುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೀಕ್ಷಣೆ ಕಂಡಿದೆ. ನೆಟ್ಟಿಗರು, ಲೈಕ್ ಗಳು, ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.