Viral News: 70 ವರ್ಷದ ಮುದುಕನ್ನು ವರಿಸಿದ 20 ತರುಣಿ, ವೈರಲ್ ಆದ ವಿಡಿಯೋ….!

ನಮ್ಮ ಸಂಪ್ರದಾಯದಲ್ಲಿ ಮದುವೆಗೆ ತುಂಬಾನೆ ಪ್ರಾಮುಖ್ಯತೆಯಿದೆ. ವಯಸ್ಸಿಗೆ ಬಂದವರು ತಾವು ವರಿಸುವವರು ಹಾಗಿರಬೇಕು, ಹೀಗಿರಬೇಕು ಎಂಬೆಲ್ಲಾ ಕನಸುಗಳನ್ನು ಕಂಡಿರುತ್ತಾರೆ. ಅದರಲ್ಲೂ ಹೆಣ್ಣು ತಾನು ಮದುವೆಯಾಗುವ ಗಂಡಿನ ಬಗ್ಗೆ ಅನೇಕ ಕನಸುಗಳನ್ನು ಇಟ್ಟುಕೊಂಡಿರುತ್ತಾಳೆ. ಆದರೆ ಇತ್ತೀಚಿಗೆ ಕೆಲವರು ತಮಗಿಂತ 20-30 ವರ್ಷಗಳ ಅಂತರದ ವ್ಯಕ್ತಿಗಳನ್ನು ಮದುವೆಯಾಗುವ ಹೊಸ ಟ್ರೆಂಡ್ ಸೃಷ್ಟಿಯಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ 20 ವರ್ಷದ ಯುವತಿಯೊಬ್ಬಳು 70 ವರ್ಷದ (Viral News) ಮುದುಕನನ್ನು ಮದುವೆಯಾಗಿದ್ದಾರೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

70 20 age marriage

ಇತ್ತೀಚಿಗೆ ತಮಗಿಂತ ವಯಸ್ಸಿನಲ್ಲಿ ತುಂಬಾ ಅಂತರ ಇರುವಂತಹ ವ್ಯಕ್ತಿಗಳೊಂದಿಗೆ ಮದುವೆಗಳು ನಡೆಯುತ್ತಿವೆ. ಸಾಮಾನ್ಯವಾಗಿ ಯುವತಿಯರು ತಮಗಿಂತ 5-6 ವರ್ಷ ಅಂತರ ಇರುವಂತಹ ಯುವತಿಯರನ್ನು ಮದುವೆಯಾಗುತ್ತಿದ್ದರು. ಇದೀಗ ಹೊಸ ಟ್ರೆಂಡ್ ಸೃಷ್ಟಿಯಾಯ್ತಾ ಎಂಬ ಅನುಮಾನ ಮೂಡತೊಡಗಿದೆ. 30 – 40 ವರ್ಷ ಅಂತರ ಇರುವ ಮುದುಕರೊಂದಿಗೆ ಹದಿಹರೆಯದ ಯುವತಿಯರು ಮದುವೆಯಾಗುತ್ತಾರೆ. ಈ ಸುದ್ದಿಯೊಂದು ಅದಕ್ಕೆ ಉತ್ತಮ ಉದಾಹರಣೆ ಎನ್ನಬಹುದು. 20 ವರ್ಷ ಯುವತಿಯೊಬ್ಬಳು 70 ವರ್ಷದ ಮುದುಕನೊಂದಿಗೆ ಮದುವೆಯಾಗಿದ್ದಾಳೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ: ಇಲ್ಲಿ ಕ್ಲಿಕ್ ಮಾಡಿ

ಈ ವಿಭಿನ್ನ ಮದುವೆಯ ವಿಡಿಯೋವನ್ನು Gulzar_sahab ಹೆಸರಿನ ಎಕ್ಸ್‌ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ 70 ವರ್ಷದ ಮುದುಕನೋರ್ವ 20 ಯುವತಿಯನ್ನು ಮದುವೆಯಾಗುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ನಡೆದ ಈ ಮದುವೆಯಲ್ಲಿ ಯುವತಿಯ ಕೊರಳಿಗೆ ಮುದುಕ ಹೂವಿನ ಹಾರ ಹಾಕುತ್ತಾನೆ. ಅದೇ ರೀತಿ ಯುವತಿ ಸಹ ಮುದುಕನಿಗೆ ಖುಷಿಯಿಂದ ಹಾರ ಹಾಕುತ್ತಾಳೆ. ಕಳೆದ ಸೆ.26 ರಂದು ಈ ವಿಡಿಯೋ ಹಂಚಿಕೊಂಡಿದ್ದು, ಕಡಿಮೆ ಸಮಯದಲ್ಲೆ ಸಖತ್ ವೈರಲ್ ಆಗಿದೆ. ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top