HomeNationalIT Auto Driver : 9 ವರ್ಷದ ಐಟಿ ಕೆಲಸ ಬಿಟ್ಟು ಆಟೋ ಓಡಿಸುತ್ತಿರುವ ಮಹಿಳೆ:...

IT Auto Driver : 9 ವರ್ಷದ ಐಟಿ ಕೆಲಸ ಬಿಟ್ಟು ಆಟೋ ಓಡಿಸುತ್ತಿರುವ ಮಹಿಳೆ: ‘ಕಾರ್ಪೊರೇಟ್’ ಬದುಕಿಗಿಂತ ಇಲ್ಲೇ ನೆಮ್ಮದಿ ಇದೆ ಎಂದ ಆಟೋ ಡ್ರೈವರ್!

ನಮ್ಮಲ್ಲಿ ಎಷ್ಟೋ ಜನ ಲಕ್ಷಾಂತರ ರೂಪಾಯಿ ಸಂಬಳ ಬರುವ ಐಟಿ (IT) ಕೆಲಸ ಬಿಟ್ಟು, ಬೇರೆ ಯಾವುದೋ ವೃತ್ತಿ ಆರಂಭಿಸಿದ ಕಥೆಗಳನ್ನು ಆಗಾಗ ಕೇಳುತ್ತಿರುತ್ತೇವೆ. ಈಗ ಅಂಥದ್ದೇ ಒಂದು ಸ್ಫೂರ್ತಿದಾಯಕ ಕಥೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬರೋಬ್ಬರಿ 9 ವರ್ಷಗಳ ಕಾಲ ಐಟಿ ಮ್ಯಾನೇಜರ್ (IT Auto Driver) ಆಗಿ ಕೆಲಸ ಮಾಡಿದ ಮಹಿಳೆಯೊಬ್ಬರು, ಈಗ ಆಟೋ ಡ್ರೈವರ್ ಆಗಿ ಹೊಸ ಬದುಕು ಕಟ್ಟಿಕೊಂಡಿದ್ದಾರೆ.

IT auto driver who left a high-paying IT manager job and now earns a living as an auto-rickshaw driver with a happier li

ನೆಝ್ರಿನ್ ಮಿಧ್ಲಾಜ್ (Nezrin Midhlaj) ಎಂಬ ಉದ್ಯಮಿ ಇತ್ತೀಚೆಗೆ ಆಟೋದಲ್ಲಿ ಪ್ರಯಾಣಿಸುವಾಗ ನಡೆದ ಈ ಸಂಭಾಷಣೆಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

IT Auto Driver – ಅನಿರೀಕ್ಷಿತ ಭೇಟಿ, ಸ್ಫೂರ್ತಿದಾಯಕ ಕಥೆ

“ಕೆಲವೊಮ್ಮೆ ಅನಿರೀಕ್ಷಿತ ಭೇಟಿಗಳು ಅದ್ಭುತವಾದ ಕಥೆಗಳನ್ನು ಹೇಳುತ್ತವೆ” ಎಂದು ನೆಝ್ರಿನ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಪುರುಷರೇ ಹೆಚ್ಚಿರುವ ಈ ಆಟೋ ಚಾಲನಾ ವೃತ್ತಿಯಲ್ಲಿ, ಈ ಮಹಿಳಾ ಆಟೋ ಡ್ರೈವರ್‌ನ ಆತ್ಮವಿಶ್ವಾಸ ಮತ್ತು ಪ್ರಶಾಂತತೆಯನ್ನು ನೋಡಿ ನೆಝ್ರಿನ್ ಅಚ್ಚರಿಪಟ್ಟರು.

“ಇಂದು ನಾನು ಒಬ್ಬ ಮಹಿಳಾ ಆಟೋ ಡ್ರೈವರ್ ಅನ್ನು ಭೇಟಿಯಾದೆ. ಅವರು ತುಂಬಾನೇ ಕಾನ್ಫಿಡೆಂಟ್ ಆಗಿದ್ದರು. ಪುರುಷರೇ ತುಂಬಿರುವ ಈ ಕ್ಷೇತ್ರದಲ್ಲಿ ಕೆಲಸ ಮಾಡುವುದು ಹೇಗಿದೆ ಎಂದು ನಾನು ಕೇಳಿದಾಗ, ಅವರು ನೀಡಿದ ಉತ್ತರ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಿತು” ಎಂದು ನೆಝ್ರಿನ್ ವಿವರಿಸಿದ್ದಾರೆ. Read this also : ಮಾನವೀಯತೆ ಮೆರೆದ ರಾಪಿಡೋ ಚಾಲಕ: ಅಂಧ ವಿದ್ಯಾರ್ಥಿಯ ಕೈಹಿಡಿದು ತರಗತಿಗೇ ಬಿಟ್ಟು ಬಂದ ವಿಡಿಯೋ ವೈರಲ್!

ಕಾರ್ಪೊರೇಟ್ ಒತ್ತಡಕ್ಕೆ ಗುಡ್ ಬೈ!

ಮಾತುಕತೆಯ ನಡುವೆ, ಆ ಮಹಿಳೆ ತಾವು ಹಿಂದೆ 9 ವರ್ಷಗಳ ಕಾಲ ಐಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವಿಚಾರವನ್ನು ಬಾಯಿಬಿಟ್ಟರು. ಕೈತುಂಬಾ ಸಂಬಳ, ಸಮಾಜದಲ್ಲಿ ಒಂದು ಉತ್ತಮ ಸ್ಥಾನಮಾನ (IT Auto Driver) ಎಲ್ಲವೂ ಇತ್ತು. ಆದರೆ ಅದರ ಜೊತೆಗೆ ವಿಪರೀತ ಒತ್ತಡ, ಟೆನ್ಷನ್ ಮತ್ತು ಸಮಯದ ಅಭಾವ ಕೂಡ ಅವರನ್ನು ಕಾಡುತ್ತಿತ್ತು. “ಅವರು ತಮ್ಮ 9 ವರ್ಷದ ಐಟಿ ವೃತ್ತಿಜೀವನದ ಒತ್ತಡ, ಟಾರ್ಗೆಟ್, ಟೆನ್ಷನ್ ಎಲ್ಲವನ್ನೂ ಬಿಟ್ಟುಬಂದಿದ್ದಾರೆ” ಎಂದು ನೆಝ್ರಿನ್ ಹೇಳಿದ್ದಾರೆ. ಕಾರ್ಪೊರೇಟ್ ಜಗತ್ತಿನ ಜಂಜಾಟಗಳಿಗಿಂತ, ತಮ್ಮಿಷ್ಟದಂತೆ ಸರಳವಾಗಿ ಬದುಕುವ ನಿರ್ಧಾರವನ್ನು ಈ ಮಹಿಳೆ ಮಾಡಿದ್ದರು.

ತಿಂಗಳಿಗೆ 60 ಸಾವಿರ ಸಂಪಾದನೆ, ಜೊತೆಗೆ ನೆಮ್ಮದಿ!

ಇಂದು ಅವರು ಸ್ವಂತ ಆಟೋ ರಿಕ್ಷಾ ಹೊಂದಿದ್ದಾರೆ. ವರದಿಗಳ ಪ್ರಕಾರ, ಅವರು ತಿಂಗಳಿಗೆ ಸುಮಾರು ₹60,000 ಸಂಪಾದನೆ ಕೂಡ ಮಾಡುತ್ತಿದ್ದಾರೆ! ಆದರೆ ಹಣಕ್ಕಿಂತ ಹೆಚ್ಚಾಗಿ, “ನಾನೀಗ ತುಂಬಾ ಖುಷಿಯಾಗಿದ್ದೇನೆ” ಎಂದು ಅವರು ಹೇಳುವ ಮಾತು ಅವರ ಮುಖದಲ್ಲಿನ ನೆಮ್ಮದಿಯನ್ನು ತೋರಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ದುಡ್ಡಿಗಿಂತ ಮಾನಸಿಕ ಶಾಂತಿ, ವೈಯಕ್ತಿಕ ಖುಷಿ ಮತ್ತು ವರ್ಕ್-ಲೈಫ್ ಬ್ಯಾಲೆನ್ಸ್ (work-life balance) ಎಷ್ಟು ಮುಖ್ಯ ಎಂಬುದಕ್ಕೆ ಈ ಸ್ಟೋರಿ ಒಂದು ಅತ್ಯುತ್ತಮ (IT Auto Driver) ಉದಾಹರಣೆಯಾಗಿದೆ. ಯಶಸ್ಸು ಎಂದರೆ ಕೇವಲ ದೊಡ್ಡ ಹುದ್ದೆಯಲ್ಲ, ಅದು ನಾವು ಕಂಡುಕೊಳ್ಳುವ ನೆಮ್ಮದಿಯಲ್ಲಿದೆ ಎಂಬುದನ್ನು ಇದು ಸಾಬೀತುಪಡಿಸಿದೆ.

IT auto driver who left a high-paying IT manager job and now earns a living as an auto-rickshaw driver with a happier li

ನೆಟ್ಟಿಗರ ಮೆಚ್ಚುಗೆಯ ಮಹಾಪೂರ

ಈ ಪೋಸ್ಟ್ ವೈರಲ್ (Viral Video Here) ಆಗುತ್ತಿದ್ದಂತೆ, ಸೋಶಿಯಲ್ ಮೀಡಿಯಾದಲ್ಲಿ ಜನ ಈಕೆಯ ದಿಟ್ಟ ನಿರ್ಧಾರವನ್ನು ಕೊಂಡಾಡುತ್ತಿದ್ದಾರೆ. ಸಮಾಜದ ನಿರೀಕ್ಷೆಗಳಿಗಿಂತ, ತನ್ನ ಸ್ವಂತ ಖುಷಿಗೆ ಬೆಲೆ ಕೊಟ್ಟ ಈಕೆಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಐಟಿ ಉದ್ಯೋಗಿಯೊಬ್ಬರ ತಮಾಷೆಯ ಕಮೆಂಟ್: “ಈ ರೀಲ್ ನೋಡಿದ ಮೇಲೆ ನನ್ನ ಪರಿಸ್ಥಿತಿ… ನಾನಿನ್ನೂ ಐಟಿಯಲ್ಲಿ 18 ವರ್ಷ ಕಳೆದಿದ್ದೇನೆ, ಒಂದು ಸಣ್ಣ ಇಮೇಲ್‌ನಲ್ಲಿ ಮುಗಿಯುವ ಕೆಲಸಕ್ಕೆ 3 ಗಂಟೆ ಮೀಟಿಂಗ್ ಮಾಡ್ತಾರೆ. ಬೆಳಗಿನ ಜಾವ 3 ಗಂಟೆಗೆ ಪ್ರೊಡಕ್ಷನ್ ಇಶ್ಯೂ ಅಂತಾರೆ. ಇಷ್ಟೆಲ್ಲಾ ಸಹಿಸಿಕೊಂಡಿರುವ ನನ್ನ ತಾಳ್ಮೆಗೆ ನಾನೇ ಅವಾರ್ಡ್ ಕೊಟ್ಕೋಬೇಕು.”
  • ಮತ್ತೊಬ್ಬ ಬಳಕೆದಾರರ ಪ್ರತಿಕ್ರಿಯೆ: “ಅವರಿಗೆ ಸರಳ ಮತ್ತು ನೆಮ್ಮದಿಯ ಜೀವನ ಬೇಕಿತ್ತು. ಅವರ ನಿರ್ಧಾರ ಕಂಡು ಖುಷಿಯಾಯ್ತು. ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಕೆಗಳು.”
  • ಇನ್ನೊಬ್ಬರ ಅನಿಸಿಕೆ: “ಒತ್ತಡದಲ್ಲಿ ನರಳಿ ಬದುಕುವುದಕ್ಕಿಂತ, ಒತ್ತಡವಿಲ್ಲದೆ ನೆಮ್ಮದಿಯಿಂದ ಹೀಗೆ ಬದುಕುವುದು ಎಷ್ಟೋ ಮೇಲು.”
  • “ವಾವ್! ಗ್ರೇಟ್. ನನಗೆ ಇವರ ಬಗ್ಗೆ ತುಂಬಾನೇ ಹೆಮ್ಮೆ ಎನಿಸುತ್ತಿದೆ” ಎಂದು ಮತ್ತೊಬ್ಬರು ಬರೆದಿದ್ದಾರೆ.
by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular