Weather Alert – ಸದ್ಯ ದೇಶದ ಹಲವು ಕಡೆ ಪೆಂಗಾಲ್ ಚಂಡಮಾರುತದ (Fengal Cyclone) ಅಬ್ಬರ ಜೋರಾಗಿದೆ. ಬಂಗಾಳಕೊಲ್ಲಿಯಲ್ಲಿ ಎದ್ದಿರುವಂತಹ ಪೆಂಗಾಲ್ ಚಂಡಮಾರುತದ ಪ್ರಭಾವ ಸಿಲಿಕಾನ್ ಸಿಟಿ ಬೆಂಗಳೂರಿನ ಮೇಲೆ ಬೀರುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ಈ ಸೈಕ್ಲೋನ್ ಎಫೆಕ್ಟ್ ನ ಕಾರಣ ಡಿ.1 ರಂದು ಸುಮಾರು 110 ಮಿ.ಮೀ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಡಿಸೆಂಬರ್ ಮೊದಲ ವಾರವೇ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಹಲವು ಕಡೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ (ಬೆಂಗಳೂರು) ಎಂದು IMD ಮುನ್ಸೂಚನೆ ನೀಡಿದೆ. ಕಳೆದ ಮೂರು ದಿನದ ಹಿಂದೆ ಸುರಿದ ಮಳೆಯಿಂದಾಗಿ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ಥವಾಗಿತ್ತು. ಮಳೆಯಿಂದಾಗಿ ಜನರು ಸೇರಿದಂತೆ ವಾಹನ ಸವಾರರು ಪರಾಡಿದ್ದರು. ಇದೀಗ IMD ನೀಡಿರುವ ಎಚ್ಚರಿಕೆಯಂತೆ ಮತ್ತೊಮ್ಮೆ ಬೆಂಗಳೂರಿನ ಜನತೆ ಅದೇ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಬೆಳಿಗ್ಗೆ ಹಾಗೂ ರಾತ್ರಿಯ ಸಮಯದಲ್ಲಿ ತುಂಭಾ ಚಳಿತ ವಾತಾವರಣ ಇದೆ. ಇದೀಗ ಭಾರಿ ಮಳೆಯಾದರೇ ಬೆಂಗಳೂರಿನಲ್ಲಿ ಅನಾರೋಗ್ಯದ ಸಮಸ್ಯೆಗಳೂ ಸಹ ಹೆಚ್ಚಾಗಬಹುದು ಎನ್ನಲಾಗುತ್ತಿದೆ.
ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಲಿದೆಯಂತೆ. ಸುಮಾರು 70-110 ಮಿ.ಮೀ ವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆಯಂತೆ. ಡಿ.1ರವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಹಗುರ ಅಥವಾ ಲಘು ಮಳೆ ಬರಬಹುದು ಎಂದು IMD ಮುನ್ಸೂಚನೆ ನೀಡಿದೆ. ಈ ಸೈಕ್ಲೋನ್ ಪ್ರಭಾವ ಮುಂದುವರೆದರೇ, ಡಿ.2 ರಿಂದಲೂ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಫೆಂಗಲ್ ಸೈಕ್ಲೋನ್ ತೀವ್ರತೆ ಹೆಚ್ಚಾದರೇ ಒಂದು ವಾರ ಬೆಂಗಳೂರಿನ ಭಾರಿ ಮಳೆ ಹಾಗೂ ಮೈಕೊರೆಯುವ ಚಳಿಯ ವಾತಾವರಣ ಸಹ ಇರಬಹುದು ಎಂದು ಅಂದಾಜಿಸಲಾಗಿದೆ. ದಕ್ಷಿಣ ಒಳನಾಡಿದ ಕೆಲವೊಂದು ಜಿಲ್ಲೆಗಳಿಗೆ ಡಿ.1 & 2 ರಂದು ಎಲ್ಲೋ ಅಲರ್ಟ್ ಹಾಗೂ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವ ಕಾರಣ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು IMD ಮುನ್ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.