Haryana Horror : ವ್ಯಾಲೆಂಟೈನ್ಸ್ ಡೇ ದಿನವೇ ಪತ್ನಿಯ ಕೊಲೆ: ರೊಮ್ಯಾಂಟಿಕ್ ಡಿನ್ನರ್ ಮುಗಿಸಿ ಬಂದ ಬಳಿಕ ನಡೆದಿದ್ದೇನು?

ಫೆಬ್ರವರಿ 14, ಜಗತ್ತಿನಾದ್ಯಂತ ಪ್ರೇಮಿಗಳು ಸಂಭ್ರಮಿಸುವ ದಿನ. ಹರ್ಯಾಣದ (Haryana Horror) ಈ ದಂಪತಿ ಕೂಡ ಅಂದು ತುಂಬಾ ಖುಷಿಯಾಗಿಯೇ ಇದ್ದರು. ಹೊರಗಡೆ ಹೋಗಿ ಡಿನ್ನರ್ ಮುಗಿಸಿ ಬಂದಿದ್ದರು. ಇನ್ನೇನು ಸುಂದರ ಕ್ಷಣಗಳನ್ನು ಕಳೆಯಬೇಕು ಎನ್ನುವಷ್ಟರಲ್ಲಿ ಮನೆಗೆ ದರೋಡೆಕೋರರು ನುಗ್ಗಿದ್ದಾರೆ, ಪತ್ನಿಯ ಕತ್ತು ಸೀಳಿದ್ದಾರೆ ಎಂಬ ಸುದ್ದಿ ಹರಡಿತು. ಆದರೆ, ಪೊಲೀಸರು ಎಂಟ್ರಿ ಕೊಟ್ಟಾಗ ಅಸಲಿ ಕಥೆಯೇ ಬೇರೆಯಾಗಿತ್ತು! ಅಷ್ಟಕ್ಕೂ ಅಂದು ನಡೆದಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

Haryana CA arrested for killing wife after Valentine’s Day dinner and staging fake robbery

Haryana Horror – ಪ್ರೀತಿಯ ನಾಟಕ, ಬೆಚ್ಚಿಬೀಳಿಸುವ ಕ್ಲೈಮ್ಯಾಕ್ಸ್!

ಹರ್ಯಾಣದಲ್ಲಿ ನಡೆದ ಈ ಘಟನೆ ಸಿನಿಮಾ ಕಥೆಯನ್ನೂ ಮೀರಿಸುವಂತಿದೆ. ಪತಿ ಅಂಶುಲ್ ಒಬ್ಬ ಚಾರ್ಟೆಡ್ ಅಕೌಂಟೆಂಟ್ (CA), ಪತ್ನಿ ಮಹಕ್ ಪ್ರತಿಷ್ಠಿತ HDFC ಬ್ಯಾಂಕ್‌ನಲ್ಲಿ ಉದ್ಯೋಗಿ. ಇಬ್ಬರಿಗೂ ಕೈತುಂಬಾ ಸಂಬಳ, ಸಂಸಾರದಲ್ಲಿ ಯಾವುದೇ ಆರ್ಥಿಕ ತಾಪತ್ರಯಗಳಿರಲಿಲ್ಲ. ಹೊರನೋಟಕ್ಕೆ ಇಬ್ಬರ ನಡುವೆ ಪ್ರೀತಿಗೂ ಕೊರತೆಯಿರಲಿಲ್ಲ. ಪ್ರೇಮಿಗಳ ದಿನದಂದು ಇಬ್ಬರೂ ರೆಸ್ಟೋರೆಂಟ್‌ಗೆ ಹೋಗಿ ಡಿನ್ನರ್ ಸವಿದು, ನಗುನಗುತ್ತಾ ಮನೆಗೆ ಮರಳಿದ್ದಾರೆ. ಅಂದು ರಾತ್ರಿ ರೊಮ್ಯಾಂಟಿಕ್ ಮೂಡ್‌ನಲ್ಲಿದ್ದ ದಂಪತಿಗಳು ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದು ಹೇಗೆ ಎಂಬುದು ಈಗ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.

ದರೋಡೆಕೋರರ ಕಥೆ ಕಟ್ಟಿದ ಪತಿ

ಅಂದು ರಾತ್ರಿ ಮನೆಗೆ ದರೋಡೆಕೋರರು ನುಗ್ಗಿ ಹಣ ದೋಚಿದ್ದಾರೆ ಮತ್ತು ಪತ್ನಿಯ ಕತ್ತು ಸೀಳಿದ್ದಾರೆ ಎಂದು ಅಂಶುಲ್ ಪೊಲೀಸರಿಗೆ ದೂರು ನೀಡಿದ್ದ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ (Haryana Horror) ಅಂಶುಲ್ ಕಣ್ಣೀರು ಹಾಕುತ್ತಾ ತನ್ನ ಪತ್ನಿಯ ಸಾವಿಗೆ ಮರುಗುತ್ತಿದ್ದ ದೃಶ್ಯ ಕಂಡು ಅಯ್ಯೋ ಎನಿಸಿತ್ತು. ಸಂಬಂಧಿಕರ ಎದುರು ರೋಧಿಸುತ್ತಿದ್ದ ಅಂಶುಲ್‌ನನ್ನು ಕಂಡು ಯಾರೂ ಕೂಡ ಅವನ ಮೇಲೆ ಅನುಮಾನ ಪಟ್ಟಿರಲಿಲ್ಲ. Read this also : ಸಾವಿನಲ್ಲೂ ಮೀರದ ಅನುಬಂಧ: ಪತ್ನಿ ಮೃತಪಟ್ಟ 24 ಗಂಟೆಯಲ್ಲೇ ಪತಿ ಸಾವು! ಕಣ್ಣೀರು ಹಾಕಿಸುತ್ತಿದೆ ಈ ಪ್ರೇಮ ಕಥೆ..!

ಪೊಲೀಸರ ಚಾಣಾಕ್ಷತನಕ್ಕೆ ಸಿಕ್ಕಿಬಿದ್ದ CA

ಮರುದಿನ ಬೆಳಗ್ಗೆ ಪೊಲೀಸರು ವಿಚಾರಣೆ ಆರಂಭಿಸಿದಾಗ ಅಸಲಿ ಆಟ ಬಯಲಾಯಿತು. ಪೊಲೀಸರು ಕೇಳಿದ ಸಾಲು ಸಾಲು ಪ್ರಶ್ನೆಗಳಿಗೆ ಅಂಶುಲ್ ತಾಳ್ಮೆಯಿಂದಲೇ ಉತ್ತರಿಸುತ್ತಿದ್ದ. ಆದರೆ, (Haryana Horror) ದರೋಡೆಕೋರರು ಹೇಗೆ ಬಂದರು? ಯಾವ ಆಯುಧವಿತ್ತು? ಎಂಬ ಪ್ರಶ್ನೆಗಳಿಗೆ ಆತ ನೀಡುತ್ತಿದ್ದ ಉತ್ತರಗಳು ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ, ಹೆಂಡತಿಯನ್ನು ಕೊಂದಿದ್ದು ದರೋಡೆಕೋರರಲ್ಲ, ಸ್ವತಃ ಆಕೆಯ ಪತಿ ಅಂಶುಲ್ ಎಂಬುದು ಜಗಜ್ಜಾಹೀರಾಯಿತು!

ಕೊಲೆಗೆ ಕಾರಣವೇನು?

ತನಿಖೆಯ ವೇಳೆ ಪೊಲೀಸರಿಗೆ ತಿಳಿದ ಬಂದ ವಿಷಯಗಳೆಂದರೆ:

Haryana CA arrested for killing wife after Valentine’s Day dinner and staging fake robbery

  • ಅತಿಯಾದ ಸಂಶಯ: ಮಹಕ್ ಬ್ಯಾಂಕ್ ಉದ್ಯೋಗಿಯಾಗಿದ್ದು, ಎಲ್ಲರೊಂದಿಗೆ ಬೆರೆಯುತ್ತಿದ್ದರು. ಇದು ಪತಿ ಅಂಶುಲ್‌ನಲ್ಲಿ ಸಂಶಯದ ಕಿಚ್ಚು ಹಚ್ಚಿತ್ತು.
  • ಪಕ್ಕಾ ಪ್ಲಾನ್: ಕೊಲೆ ಮಾಡುವಾಗ ಯಾವುದೇ ಬೆರಳಚ್ಚು ಸಿಗದಂತೆ ಹ್ಯಾಂಡ್ ಗ್ಲೌವ್ಸ್ ಧರಿಸಿದ್ದ. ಕೃತ್ಯದ ನಂತರ ಗ್ಲೌವ್ಸ್ ಮತ್ತು ಇತರ ಸಾಕ್ಷ್ಯಗಳನ್ನು ಸುಟ್ಟು ಬೂದಿ ಮಾಡಿದ್ದ.
  • ತಂದೆಯ ಆರೋಪ: ಮಗಳು ಕೊಲೆಯಾದ (Haryana Horror) ಮರುಕ್ಷಣವೇ ಮಹಕ್ ತಂದೆ ಕೃಷ್ಣ ಕತೂರಿಯಾ ಅವರು ಅಳಿಯನ ಮೇಲೆ ನೇರ ಆರೋಪ ಮಾಡಿದ್ದರು.

ಪತ್ನಿಯ ನಡವಳಿಕೆಯ ಮೇಲೆ ಅನುಮಾನಗೊಂಡು, ಪ್ರೀತಿಯ ದಿನದಂದೇ ಅವಳ ಪ್ರಾಣ ತೆಗೆದು ದರೋಡೆಯ ನಾಟಕವಾಡಿದ ಈ ಕೆವಲ CA ಈಗ ಜೈಲು ಪಾಲಾಗಿದ್ದಾನೆ.

Leave a Comment

Your email address will not be published. Required fields are marked *

Scroll to Top