Weather Alert: ಪೆಂಗಾಲ್ ಸೈಕ್ಲೋನ್ ಎಫೆಕ್ಟ್, ಡಿ.1 ರಂದು ಬೆಂಗಳೂರಿನಲ್ಲಿ ಭಾರಿ ಮಳೆಯಾಗಲಿದೆಯಂತೆ….!

Weather Alert – ಸದ್ಯ ದೇಶದ ಹಲವು ಕಡೆ ಪೆಂಗಾಲ್ ಚಂಡಮಾರುತದ (Fengal Cyclone) ಅಬ್ಬರ ಜೋರಾಗಿದೆ. ಬಂಗಾಳಕೊಲ್ಲಿಯಲ್ಲಿ ಎದ್ದಿರುವಂತಹ ಪೆಂಗಾಲ್ ಚಂಡಮಾರುತದ ಪ್ರಭಾವ ಸಿಲಿಕಾನ್ ಸಿಟಿ ಬೆಂಗಳೂರಿನ ಮೇಲೆ ಬೀರುವುದು ಬಹುತೇಕ ಖಚಿತವಾಗಿದೆ ಎನ್ನಲಾಗಿದೆ. ಈ ಸೈಕ್ಲೋನ್ ಎಫೆಕ್ಟ್ ನ ಕಾರಣ ಡಿ.1 ರಂದು ಸುಮಾರು 110 ಮಿ.ಮೀ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Karnataka rains alert

ಡಿಸೆಂಬರ್‍ ಮೊದಲ ವಾರವೇ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಸೇರಿದಂತೆ ರಾಜ್ಯದ ಹಲವು ಕಡೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ (ಬೆಂಗಳೂರು) ಎಂದು IMD ಮುನ್ಸೂಚನೆ ನೀಡಿದೆ. ಕಳೆದ ಮೂರು ದಿನದ ಹಿಂದೆ ಸುರಿದ ಮಳೆಯಿಂದಾಗಿ ಬೆಂಗಳೂರಿನಲ್ಲಿ ಜನಜೀವನ ಅಸ್ತವ್ಯಸ್ಥವಾಗಿತ್ತು. ಮಳೆಯಿಂದಾಗಿ ಜನರು ಸೇರಿದಂತೆ ವಾಹನ ಸವಾರರು ಪರಾಡಿದ್ದರು. ಇದೀಗ IMD ನೀಡಿರುವ ಎಚ್ಚರಿಕೆಯಂತೆ ಮತ್ತೊಮ್ಮೆ ಬೆಂಗಳೂರಿನ ಜನತೆ ಅದೇ ರೀತಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎನ್ನಲಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ  ಬೆಳಿಗ್ಗೆ ಹಾಗೂ ರಾತ್ರಿಯ ಸಮಯದಲ್ಲಿ ತುಂಭಾ ಚಳಿತ ವಾತಾವರಣ ಇದೆ. ಇದೀಗ ಭಾರಿ ಮಳೆಯಾದರೇ ಬೆಂಗಳೂರಿನಲ್ಲಿ ಅನಾರೋಗ್ಯದ ಸಮಸ್ಯೆಗಳೂ ಸಹ ಹೆಚ್ಚಾಗಬಹುದು ಎನ್ನಲಾಗುತ್ತಿದೆ.

Rain alert june end and july

ಡಿಸೆಂಬರ್‍ ಮೊದಲ ವಾರದಲ್ಲಿ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಲಿದೆಯಂತೆ. ಸುಮಾರು 70-110 ಮಿ.ಮೀ ವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆಯಂತೆ. ಡಿ.1ರವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲಲ್ಲಿ ಹಗುರ ಅಥವಾ ಲಘು ಮಳೆ ಬರಬಹುದು ಎಂದು IMD ಮುನ್ಸೂಚನೆ ನೀಡಿದೆ. ಈ ಸೈಕ್ಲೋನ್ ಪ್ರಭಾವ ಮುಂದುವರೆದರೇ, ಡಿ.2 ರಿಂದಲೂ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಫೆಂಗಲ್ ಸೈಕ್ಲೋನ್ ತೀವ್ರತೆ ಹೆಚ್ಚಾದರೇ ಒಂದು ವಾರ ಬೆಂಗಳೂರಿನ ಭಾರಿ ಮಳೆ ಹಾಗೂ ಮೈಕೊರೆಯುವ ಚಳಿಯ ವಾತಾವರಣ ಸಹ ಇರಬಹುದು ಎಂದು ಅಂದಾಜಿಸಲಾಗಿದೆ. ದಕ್ಷಿಣ ಒಳನಾಡಿದ ಕೆಲವೊಂದು ಜಿಲ್ಲೆಗಳಿಗೆ ಡಿ.1 & 2 ರಂದು ಎಲ್ಲೋ ಅಲರ್ಟ್ ಹಾಗೂ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವ ಕಾರಣ ಆರೆಂಜ್ ಅಲರ್ಟ್ ನೀಡಲಾಗಿದೆ ಎಂದು IMD ಮುನ್ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Next Post

Gruha Lakshmi ಯೋಜನೆಯ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್, 4-5 ದಿನಗಳಲ್ಲಿ ಎರಡು ತಿಂಗಳ ಕಂತು ಜಮೆಯಾಗಲಿದೆಯಾ?

Fri Nov 29 , 2024
Gruha Lakshmi – ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆ ಅರ್ಹ ಫಲಾನುಭವಿಗಳ ಖಾತೆಗೆ 2 ಸಾವಿರ ಹಣ ನೇರವಾಗಿ ಜಮೆ ಮಾಡಲಾಗುತ್ತಿದೆ. ಆದರೆ 2 ತಿಂಗಳಿನಿಂದ ಈ ಹಣ ಜಮೆಯಾಗಿಲ್ಲ. ಈ ಸಂಬಂಧ ವಿರೋದ ಪಕ್ಷಗಳೂ ಸಹ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‍ (Gruha Lakshmi) ಮಾಹಿತಿಯೊಂದನ್ನು ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ […]
Hebbalkar gave update about gruhalakshmi scheme
error: Content is protected !!