Gruha Lakshmi – ಕರ್ನಾಟಕ ರಾಜ್ಯ ಕಾಂಗ್ರೇಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆ ಅರ್ಹ ಫಲಾನುಭವಿಗಳ ಖಾತೆಗೆ 2 ಸಾವಿರ ಹಣ ನೇರವಾಗಿ ಜಮೆ ಮಾಡಲಾಗುತ್ತಿದೆ. ಆದರೆ 2 ತಿಂಗಳಿನಿಂದ ಈ ಹಣ ಜಮೆಯಾಗಿಲ್ಲ. ಈ ಸಂಬಂಧ ವಿರೋದ ಪಕ್ಷಗಳೂ ಸಹ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ. ಈ ಸಂಬಂಧ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Gruha Lakshmi) ಮಾಹಿತಿಯೊಂದನ್ನು ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಅದರಂತೆ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಈ ಪೈಕಿ (Gruha Lakshmi) ಗೃಹಲಕ್ಷ್ಮೀ ಗ್ಯಾರಂಟಿ ಸಹ ಒಂದಾಗಿದ್ದು, ಈ ಗ್ಯಾರಂಟಿಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ಹಣ ಜಮೆ ಮಾಡಲಾಗುತ್ತಿದೆ. ಆದರೆ ಕಳೆದ ಎರಡು ತಿಂಗಳಿನಿಂದ ರಾಜ್ಯ ಸರ್ಕಾರದ (Gruha Lakshmi) ಗೃಹಲಕ್ಷ್ಮೀ ಯೋಜನೆಯ ಹಣ ಮಹಿಳೆಯರ ಖಾತೆಗೆ ಬಿದ್ದಿಲ್ಲ. ಜೊತೆಗೆ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಸಂಬಂಧ ಸುದ್ದಿಗಳು ಸಹ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ಕಂತಿನ ಕುರಿತು ಮಹಿಳೆಯರಿಗೆ ಗೊಂದಲ ಸೃಷ್ಟಿಯಾಗಿದೆ.
ಇನ್ನೂ ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Gruha Lakshmi) ಸ್ಪಷ್ಟನೆ ನೀಡಿದ್ದಾರೆ. ಸರ್ಕಾರಿ ನೌಕರರಿಗೆ ಸಂಬಳ ಕೊಡುವಾಗ ಒಂದು ತಿಂಗಳ ಬಳಿಕವೇ ಸಂಬಳ ಪಾವತಿ ಮಾಡೋದು. ಗೃಹಲಕ್ಷ್ಮೀ 2 ತಿಂಗಳ ಹಣ ಹಾಕೋದು ತಡವಾಗಿರುವುದು ಸತ್ಯ. ಆದರೆ ಮುಂದಿನ ನಾಲ್ಕೈದು ದಿನಗಳಲ್ಲಿ ಈ ಸಮಸ್ಯೆಯನ್ನು (Gruha Lakshmi) ಪರಿಹಾರ ಮಾಡುತ್ತೀವಿ. ಬಿಜೆಪಿಯವರು ಚುನಾವಣೆಗಾಗಿ ಹಣ ಹಾಕಿದ್ದೀರಿ ಎಂದು ಆರೋಪ ಮಾಡುತ್ತಿದ್ದಾರೆ. ನಾವು ಚುನಾವಣೆಗಾಗಿ ನಾವು ಹಣ ಹಾಕೊಲ್ಲ. ಆರೋಪ ಮಾಡುವಂತಹವರು ಏನಾದರೂ ಆರೋಪ ಮಾಡುತ್ತಾರೆ. (Gruha Lakshmi) 14 ತಿಂಗಳು ಯಾವುದೇ ಚುನಾವಣೆ ಇರಲಿಲ್ಲ. ಆದರೆ 14 ತಿಂಗಳಿಂದ ಹಣ ಹಾಕಿದ್ದೇವೆ. ಚುನಾವಣೆಗಾಗಿ ಹಣ ಹಾಕೋ ತರಹ ಇದ್ದಿದ್ದರೇ ಚುನಾವಣೆ (Gruha Lakshmi) ಸಮಯದಲ್ಲಿ ಮಾತ್ರ ಹಾಕುತ್ತಿದ್ವಿ. ಬಿಜೆಪಿಯವರ ಆರೋಪಗಳೆಲ್ಲಾ ಸುಳ್ಳು ಎಂದು ಹೇಳಿದ್ದಾರೆ.