Viral News: ಫೇಸ್ ಬುಕ್ ನಲ್ಲಿ ಅತ್ಯಾಚಾರದ ಬೆದರಿಕೆ, ದುಷ್ಟನಿಗೆ ಸರಿಯಾಗಿ ಗೂಸ ಕೊಟ್ಟ ಕೈ ನಾಯಕಿ…!

ನಾಗರೀಕ ಸಮಾಜದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು, ಹಲ್ಲೆಗಳು, ಅತ್ಯಾಚಾರಗಳು ನಡೆಯುತ್ತಲೇ ಇದೆ. ಅಂತಹ ಕಾಮಾಂಧರಿಗೆ ಕಾನೂನಿನಲ್ಲಿ ಶಿಕ್ಷೆಯಾಗುತ್ತಿದ್ದರೂ ಸಹ ಅಂತಹ ಕೃತ್ಯಗಳು ನಡೆಯುತ್ತಲೇ ಇರುವುದು ದುರದೃಷ್ಟಕರ. ಇತ್ತೀಚಿಗೆ ಸೋಷಿಯಲ್ ಮಿಡಿಯಾದ ಮೂಲಕ ದೌರ್ಜನ್ಯಗಳು ನಡೆಯುತ್ತಿದೆ. ಫೇಸ್ ಬುಕ್ ನಲ್ಲಿ ವ್ಯಕ್ತಿಯೊಬ್ಬ ಅತ್ಯಾಚಾರ ಬೆದರಿಕೆ ಹಾಕಿದ್ದಾನೆ. ಕಾಂಗ್ರೇಸ್ ನಾಯಕಿ ರೋಶ್ನಿ ಕುಶಾಲ್ ಜೈಸ್ವಾಲ್ ಎಂಬುವವರಿಗೆ ಫೇಸ್ ಬುಕ್ ನಲ್ಲಿ ಅತ್ಯಾಚಾರ (Viral News) ಎಸಗುವ ಕಾಮೆಂಟ್ ಮಾಡಿದ್ದು, ಆಕೆ ತಮ್ಮ ಬೆಂಬಲಿಗರೊಂದಿಗೆ ಪುಂಡನ ಮನೆಗೆ ನುಗ್ಗಿ ಸರಿಯಾಗಿ ಥಳಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

congress leader beats men in varanasi 2

ಈ ಘಟನೆ ವಾರಣಾಸಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ವಾರಣಾಸಿಯ ಕಾಂಗ್ರೇಸ್ ಮುಖಂಡೆ ರೋಶ್ನಿ ಕುಶಾಲ್ ಜೈಸ್ವಾಲ್ ಎಂಬುವವರಿಗೆ ರಾಜೇಶ್ ಸಿಂಗ್ ಎಂಬಾತ ಅತ್ಯಾಚಾರ ಮಾಡುತ್ತೇನೆ ಎಂದು ಫೇಸ್ ಬುಕ್ ನಲ್ಲಿ ಬೆದರಿಕೆ ಕಾಮೆಂಟ್ ಹಾಕಿದ್ದನಂತೆ. ಈ ಕಾರಣದಿಂದ ಸಿಟ್ಟಿಗೆದ್ದ ಕಾಂಗ್ರೇಸ್ ನಾಯಕಿ ರೋಶ್ನಿ ತಮ್ಮ ಬೆಂಬಲಿಗರೊಂದಿಗೆ ಆತನ ಮನೆಗೆ ನುಗ್ಗಿದ್ದಾಳೆ. ಆತನ ಹೆಂಡತಿ ಮಕ್ಕಳ ಮುಂದೆಯೇ ಆತನಿಗೆ ಸರಿಯಾಗಿ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಸ್ಥಳಕ್ಕೆ ಬರುವಂತೆ ಲಿಖಿತ ದೂರನ್ನು ನೀಡಿದ್ದಾರೆ. ಇನ್ನೂ ಈ ಪುಂಡನ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಪ್ರಧಾನಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ರವನ್ನು ಒತ್ತಾಯಿಸಿದ್ದಾರೆ. ಈ ನಡುವೆ ಕಾಮೆಂಟ್ ಮಾಡಿದ್ದ ರಾಜೇಶ್ ಪತ್ನಿ ನನ್ನ ಪತಿಯ ಮೇಲೆ ಕಾರಣವಿಲ್ಲದೇ ಹೊಡೆದಿದ್ದಾಳೆ ಎಂದು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ: https://x.com/SamarRaj_/status/1835267138925289566

ಇನ್ನೂ ಈ ಸಂಬಂಧ ವಿಡಿಯೋ ಒಂದು ಸಮರ್‍ ರಾಜ್ (SamarRaj_) ಎಂಬಾತನ ತಮ್ಮ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಕಾಂಗ್ರೇಸ್ ಮುಖಂಡೆ ರೋಶ್ನಿ ತಮ್ಮ ಬೆಂಬಲಿಗರೊಂದಿಗೆ ತನಗೆ ಅತ್ಯಾಚಾರದ ಬೆದರಿಕೆ ಹಾಕಿದವನ ಮನೆಗೆ ನುಗ್ಗಿ, ಆತನನ್ನು ಬೀದಿಗೆ ಎಳೆದು ತಂದು ಎಲ್ಲರ ಎದುರಲ್ಲಿಯೇ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ವಿಡಿಯೋ ಕಳೆದ ಸೆ.15 ರಂದು ಹಂಚಿಕೊಳ್ಳಲಾಗಿದ್ದು, ಭಾರಿ ವೀಕ್ಷಣೆ ಪಡೆದುಕೊಂಡಿದೆ. ಲಕ್ಷಗಟ್ಟಲೇ ವ್ಯೂವ್ಸ್ ಹಾಗೂ ಕಾಮೆಂಟ್ ಗಳು ಹರಿದುಬರುತ್ತಿವೆ. ಕೆಲವರು ಆಕೆಗೆ ಬೆಂಬಲಿಸುವಂತಹ ಕಾಮೆಂಟ್ ಗಳನ್ನು ಮಾಡಿದರೇ, ಮತ್ತೆ ಕೆಲವರು ಕಾನೂನು ಕೈಗೆತ್ತಿಕೊಂಡಿದ್ದು ತಪ್ಪು, ಆತ ಮಾಡಿದ್ದರ ಬಗ್ಗೆ ಪೊಲೀಸರಿಗೆ ದೂರು ನೀಡಬೇಕಾಗಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Leave a Comment

Your email address will not be published. Required fields are marked *

Scroll to Top