Tech News – ಬಹುತೇಕ ಪ್ರತಿಯೊಬ್ಬರೂ ಬಳಸುತ್ತಿರುವಂತಹ ವಾಟ್ಸಾಪ್ ಮೆಸೇಜಿಂಗ್ ಫ್ಲಾಟ್ ಫಾರ್ಮಂ ನಲ್ಲಿ ಹೊಸ ವೈಶಿಷ್ಟ್ಯವನ್ನು ಪರಿಚಯಗೊಳಿಸಲಿದೆ. ವಾಟ್ಸಾಪ್ ಬಳಸುವವರ ಸಂಖ್ಯೆ ಮಿಲಿಯನ್ ಗಟ್ಟಲೇ ಇದೆ. ಮೆಟಾ ಒಡೆತನದ ಈ ಫ್ಲಾಟ್ ಫಾರಂ ನಲ್ಲಿ ಶೀಘ್ರದಲ್ಲೆ ಹೊಸ ಅಪ್ಡೇಟ್ ಬರಲಿದೆ. ಇನ್ಸ್ಟಾಗ್ರಾಂ ಮಾದರಿಯಲ್ಲಿಯೇ ವಾಟ್ಸಾಪ್ ಸ್ಟೇಟಸ್ ನಲ್ಲಿ ಪೊಟೋಗಳ ಜೊತೆಗೆ ಮ್ಯೂಸಿಕ್ ಅಥವಾ ಹಾಡುಗಳನ್ನು ಸೇರಿಸುವಂತಹೆ ಅಪ್ಡೇಟ್ ಬರಲಿದೆ. ಸದ್ಯ ವಾಟ್ಸಾಪ್ ಬೀಟಾ ಆವೃತಿಯಲ್ಲಿ ಈ ಸೌಲಭ್ಯ ಇದೆ ಎಂದು ಹೇಳಲಾಗಿದೆ.

ಮೆಟಾ ಒಡೆತನದ ಇನ್ಸ್ಟಾಗ್ರಾಂ ನಲ್ಲಿ ಪೊಟೋಗಳಿಗೆ ಮ್ಯೂಸಿಕ್ ಅಥವಾ ಹಾಡುಗಳ ಕ್ಲಿಪ್ ಗಳನ್ನು ಸೇರಿಸುವಂತಹ ವೈಶಿಷ್ಟ್ಯವಿದೆ. ಅದೇ ರೀತಿ ವಾಟ್ಸಾಪ್ ಸ್ಟೇಟಸ್ ಅಪ್‌ಡೇಟ್‌ಗಳಲ್ಲಿ ಚಿತ್ರಗಳ ಜೊತೆಗೆ ಸಂಗೀತ ಅಥವಾ ಟ್ಯೂನ್ ಸೇರಿಸಲು ಸಾಧ್ಯವಾಗುವ ಹೊಸ ವೈಶಿಷ್ಟ್ಯ ಶೀಘ್ರದಲ್ಲೇ ಹೊರತರಲಾಗುತ್ತದೆ ಎನ್ನಲಾಗಿದೆ. ಇನ್ಸ್ಟಾ ಸ್ಟೋರಿ ಮಾದರಿಯ ಇಂಟರ್ಫೇಸ್ ಅನ್ನು ವಾಟ್ಸಾಪ್ ಸ್ಟೇಟಸ್‌ಗೂ ತರಲು ಮೆಟಾ ಯೋಜಿಸಿದೆ. ಈ ವೈಶಿಷ್ಟ್ಯವನ್ನು ಪ್ರಸ್ತುತ ವಾಟ್ಸಾಪ್‌ನ ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಆವೃತ್ತಿಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಈಗಾಗಲೇ ವಾಟ್ಸಾಪ್ ನ ಆಂಡ್ರಾಯ್ಡ್ ಮತ್ತು ಐಒಎಸ್ ಬೀಟಾ ಆವೃತ್ತಿಗಳಲ್ಲಿ ಈ ವೈಶಿಷ್ಟ್ಯ ಲಭ್ಯವಾಗುತ್ತಿದೆ ಎನ್ನಲಾಗಿದೆ.

ಇನ್ನೂ ಈ ಅಪ್ಡೇಟ್ ವಾಟ್ಸಾಪ್ ಸಾಮಾನ್ಯ ಆವೃತಿಗೂ ಬಂದ ಬಳಿಕ ಸ್ಟೇಟಸ್ ಎಡಿಟರ್‌ನಲ್ಲಿ “ಮ್ಯೂಸಿಕ್ ಲೈಬ್ರರಿ” ಮೂಲಕ ಹಾಡುಗಳನ್ನು ಹುಡುಕಲು ಅವಕಾಶ ಲಭ್ಯವಾಗುತ್ತದೆ. ಈ ಲೈಬ್ರರಿಯು ಪಾಪುಲರ್ ಹಾಡುಗಳು, ಕಲಾವಿದರ ಮಾಹಿತಿ, ಮತ್ತು ಟ್ರೆಂಡಿಂಗ್ ಹಾಡುಗಳಂತಹ ಆಯ್ಕೆಗಳನ್ನೂ ಒದಗಿಸುತ್ತದೆ. ಬಳಕೆದಾರರು ತಮ್ಮ ಇಷ್ಟದ ಹಾಡಿನ ನಿರ್ದಿಷ್ಟ ಭಾಗವನ್ನು ಆಯ್ಕೆ ಮಾಡಿ, ಫೋಟೋ ಅಥವಾ ವೀಡಿಯೋ ಸ್ಟೇಟಸ್‌ಗೆ ಸೇರಿಸಬಹುದಾಗಿದೆ. ಇನ್ಸ್ಟಾ ಸ್ಟೋರಿಯ ಮಾದರಿಯಲ್ಲಿಯೇ ಹಾಡೊಂದರಲ್ಲಿ ನಿಮಗೆ ಇಷ್ಟವಾದ ಭಾಗವನ್ನು ಆಯ್ಕೆ ಮಾಡಿ ಪೊಟೋ ಜೊತೆಗೆ ಹಾಕಿಕೊಳ್ಳಬಹುದು. ಇದು ಗರಿಷ್ಟ 15 ಸೆಕೆಂಡ್ ಗಳ ವರೆಗೆ ಇರಲಿದೆ. ಇನ್ನೂ ಮೆಟಾ ಒಡೆತನದ ವಾಟ್ಸಾಪ್ ಆಗಾಗ ಹೊಸ ಹೊಸ ತಂತ್ರಜ್ಞಾನದ ಮೂಲಕ ಬಳಕೆದಾರರಿಗೆ ಮತ್ತಷ್ಟು ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.