Crime News – ಅಕ್ರಮ ಸಂಬಂಧಗಳಿಗೆ ಅನೇಕ ಕೊಲೆಗಳು, ದರೋಡೆಗಳು, ಹಲ್ಲೆಗಳು ನಡೆದಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಭಾರತದಲ್ಲಿ ಕುಟುಂಬ ವ್ಯವಸ್ಥೆಯ ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ ಇಲ್ಲೊಂದು ಘಟನೆ ಅದಕ್ಕೆ ತದ್ವಿರುದ್ದವಾಗಿ ನಡೆದಿದೆ. ಅತ್ತಿಗೆಯನ್ನು ತಾಯಿಗೆ ಸಮಾನ ಎಂದೇ ಭಾವಿಸಲಾಗುತ್ತದೆ. ಆದರೆ ಆ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ತಮ್ಮ, ತಮ್ಮ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಸ್ವಂತ ಅಣ್ಣನನ್ನೆ ಕೊಲೆ ಮಾಡಿದ್ದಾನೆ. ಅಲ್ಲದೇ ಇದೊಂದು ಸಹಜ ಮದುವೆ ಎಂಬ ಡ್ರಾಮಾ ಸಹ ಆಡಿದ್ದಾನೆ. ಆದರೆ ಮರಣೋತ್ತರ ಪರೀಕ್ಷೆಯಿಂದ ಇದೊಂದು ಕೊಲೆ ಎಂದು ಸಾಭೀತಾಗಿದ್ದು, ಆರೋಪಿ ತಮ್ಮ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಈ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕುಲ್ಫಹಾಡ್ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಷೇತ್ರದ ಇಂದೋರ ಎಂಬ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಪರಮಲಾಲ್ ಅಹಿರ್ವಾರ್ (40) ಎಂದು ಗುರ್ತಿಸಲಾಗಿದೆ. ಕಳೆದ. ಜ.18 ರಂದು ಪರಮಲಾಲ್ ರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಪರಮಲಾಲ್ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ್ದರು.ಆದರೆ ಮೃತರ ಮಗ ಪೊಲೀಸರಿಗೆ ದೂರು ನೀಡಿ, ತನ್ನ ಚಿಕ್ಕಪ್ಪ ಖೇಮಚಂದ್ರ ಅಹಿರ್ವಾರ್ ತನ್ನ ತಂದೆಗೆ ಮದ್ಯದಲ್ಲಿ ವಿಷ ಬೆರೆಸಿ ಕುಡಿಸಿದ್ದಾರೆ. ಇದರಿಂದ ನಮ್ಮ ತಂದೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದ.
ಇನ್ನೂ ಈ ದೂರಿನ ಮೇರೆಗೆ ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಅಧಿಕಾರಿ ಹರ್ಷಿತಾ ಗಂಗವಾರ್, ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಿಷಪ್ರಾಶನದೀಂದ ಸಾವು ಸಂಭಿಸಿದೆ ಎಂದು ದೃಢಪಟ್ಟಿದೆ. ಬಳಿಕ ಪೊಲೀಸರುಸ ಆಕ್ಷಿಗಳ ಹೇಳಿಕೆಗಳು ಹಾಗೂ ತನಿಖೆಯ ಆಧಾರದ ಮೇಲೆ ಆರೋಪಿಖೇಮಚಂದ್ರ ಅಹಿರ್ವಾರ್‌ನನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿ ಸಹ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ಖೇಮಚಂದ್ರ ಅಹಿರ್ವಾರ್ ಹಾಗೂ ಪರಮಲಾಲ್ ಅಹಿರ್ವಾರ್ ಪತ್ನಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ, ಈ ಸಂಬಂಧಕ್ಕೆ ಮೃತ ಪರಮಲಾಲ್ ಅಡ್ಡಿಯಾಗಿದ್ದ ಎಂದು ಆತನಿಗೆ ಮದ್ಯದಲ್ಲಿ ವಿಷ ಬೆರೆಸಿ ಕೊಲೆ ಮಾಡುವ ಸಂಚು ರೂಪಿಸಿದ್ದಾನೆ. ಅದರಂತೆ ಪರಮಲಾಲ್ ಎಂಬಾತನನ್ನು ಕೊಲೆ ಮಾಡಲಾಗಿದೆ ಎಂದು ವಿಚಾರಣೆಯ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.