Black Grapes : ಕಪ್ಪು ದ್ರಾಕ್ಷಿ ಆರೋಗ್ಯಕರ ಮತ್ತು ರುಚಿಕರವಾದ ಹಣ್ಣು. ಈ ಹಣ್ಣು ತಿನ್ನುವುದರಿಂದ ದೇಹಕ್ಕೆ ಅನೇಕ ರೀತಿಯ ಆರೋಗ್ಯ ಲಾಭಗಳನ್ನು ನೀಡುತ್ತದೆ. ಅದರಲ್ಲೂ ಈ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ಸ್ ಮತ್ತು ಪೋಷಕಾಂಶ ಗಳು ಹೇರಳವಾಗಿರುತ್ತದೆ. ಇದರಲ್ಲಿ ವಿಟಮಿನ್ ಬಿ, ಫೈಬರ್, ಐರನ್, ಪೊಟಾಷಿಯಂ, ಮೆಗ್ನೀಷಿಯಂ ನಂತರ ಅನೇಕ ಔಷಧೀಯ ಗುಣಗಳಿವೆ. ಇದು ಹಲವು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯಕವಾಗುತ್ತದೆ. ಕಪ್ಪು ದ್ರಾಕ್ಷಿಯಲ್ಲಿನ ಹಲವು ಪ್ರಮುಖ ಔಷಧೀಯ ಗುಣಗಳ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಈ ಸುದ್ದಿಯ ಮೂಲಕ ತಿಳಿಸಲಾಗಿದೆ.
- ಹೃದಯದ ಆರೋಗ್ಯ: ಕಪ್ಪು ದ್ರಾಕ್ಷಿಯಲ್ಲಿರುವ ರಿಸ್ವರಟ್ರೋಲ್ ಎಂಬ ಆಂಟಿ ಆಕ್ಸಿಡೆಂಟ್ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
- ಡಯಾಬಿಟಿಸ್ ನಿಯಂತ್ರಣ: ಕಪ್ಪು ದ್ರಾಕ್ಷಿಯಲ್ಲಿರುವ ನೈಸರ್ಗಿಕ ಸಕ್ಕರೆ ಮತ್ತು ಫೈಬರ್ ಅಂಶಗಳು ದೇಹದಲ್ಲಿ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಇದನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಶರೀರದ ಇನ್ಸುಲಿನ್ ಶಕ್ತಿ ಸಹ ಹೆಚ್ಚಾಗುತ್ತದೆ.
- ತ್ವಚೆ ಹಾಗೂ ಕೂದಲಿನ ಆರೋಗ್ಯ: ಕಪ್ಪು ದ್ರಾಕ್ಷಿಯಲ್ಲಿರುವ ವಿಟಮಿನ್ C ಮತ್ತು ವಿಟಮಿನ್ E ತ್ವಚೆಯ ಆರೋಗ್ಯ ಕಾಪಾಡಬಹುದಾಗಿದೆ. ಕಪ್ಪು ದ್ರಾಕ್ಷಿಯಲ್ಲಿರುವ ವಿಟಮಿನ್ E ತ್ವಚೆಯನ್ನು ಹೈಡ್ರೇಟ್ ನಲ್ಲಿರಿಸುತ್ತದೆ. ಕೂದಲ ಸಮಸ್ಯೆಗಳಿಗೆ ರಿಸ್ವರಟ್ರೋಲ್ ಅತ್ಯುತ್ತಮ ಪರಿಹಾರ. ಇದು ಕೂದಲು ಬಿರುಕು ಬಾರದಂತೆ ಕಾಪಾಡುತ್ತದೆ.
- ಮೂಳೆಗಳ ಶಕ್ತಿ ಹೆಚ್ಚಿಸುವುದು: ಕಪ್ಪು ದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ ಹಾಗೂ ಮ್ಯಾಗ್ನೀಶಿಯಂ ದೇಹದಲ್ಲಿನ ಮೂಳೆಗಳ ಆರೋಗ್ಯಕ್ಕೆ ತುಂಬಾನೆ ಉಪಯುಕ್ತವಾಗಿದೆ. ಈ ಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಮೂಳೆಗಳ ಶಕ್ತಿ ಉತ್ತಮವಾಗುತ್ತದೆ.
- ಕ್ಯಾನ್ಸರ್ ತಡೆಗಟ್ಟಲು: ಕಪ್ಪು ದ್ರಾಕ್ಷಿಯಲ್ಲಿನ ಫ್ವೇವನಾಯ್ಡ್ಸ್ ಹಾಗೂ ಆಂಟಿ ಆಕ್ಸಿಡೆಂಟ್ಸ್ ಕ್ಯಾನ್ಸರ್ ಸೆಲ್ ಗಳ ಅಭಿವೃದ್ದಿಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಜ್ಞರ ಅಭಿಪ್ರಾಯವಾಗಿದೆ.
- ಮೆದುಳಿನ ಆರೋಗ್ಯ: ಕಪ್ಪು ದ್ರಾಕ್ಷಿಯಲ್ಲಿರುವ ಕೆಲವೊಂದು ಪೋಷಕಾಂಶಗಳು ಮೆದುಳಿನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸುತ್ತದೆ. ಇದು ನೆನಪಿನ ಶಕ್ತಿಯನ್ನು ಹೆಚ್ಚಿಸಲು ಹಾಗೂ ಒತ್ತಡ ಕಡಿಮೆ ಮಾಡಲು ಸಹಕಾರಿಯಾಗಿದೆ ಎನ್ನಲಾಗಿದೆ.
- ತೂಕ ಇಳಿಸಲು ಸಹಕಾರಿ :ಕಪ್ಪು ದ್ರಾಕ್ಷಿಯಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ದೇಹದಲ್ಲಿ ಇರುವಂತಹ ಅನಗತ್ಯ ವಿಷಕಾರಿ ಅಂಶಗಳನ್ನು ತೆಗೆದುಹಾಕುವುದು ಮತ್ತು ಇದರಿಂದ ದೇಹದ ತೂಕ ಇಳಿಸಲು ಸಹಕಾರಿಯಾಗುವುದು.
- ಸೋಂಕು ಮತ್ತು ಉರಿಯೂತ ವಿರುದ್ಧ ರಕ್ಷಣೆ ನೀಡುವುದು : ಕಪ್ಪು ದ್ರಾಕ್ಷಿಯಲ್ಲಿ ಇರುವಂತಹ ರೆಸ್ವೆರಾಟ್ರೊಲ್ ಎನ್ನುವ ಅಂಶವು ಅದ್ಭುತವಾದ ಬ್ಯಾಕ್ಟೀರಿಯಾ ಹಾಗೂ ಶಿಲಿಂಧ್ರ ವಿರೋಧಿ ಗುಣವನ್ನು ಹೊಂದಿದೆ. ಇದರಿಂದ ಇದು ರೋಗಕಾರಕ ಸೋಂಕು ಮತ್ತು ಉರಿಯೂತವನ್ನು ತಡೆಯುತ್ತದೆ.
ಇನ್ನೂ ಈ ಮೇಲಿನ ಎಲ್ಲಾ ಮಾಹಿತಿ ಸಂಗ್ರಹಿಸಿದ ಮಾಹಿತಿಯಾಗಿದ್ದು, ಉತ್ತಮ ಆರೋಗ್ಯಕ್ಕಾಗಿ ವೈದ್ಯರ ಸಲಹೆ ಸೂಚನೆಗಳನ್ನು ಪಡೆಯುವುದು ಸೂಕ್ತವಾಗಿದೆ.