Railway Tickets – ಬಡವರು ಹಾಗೂ ಮಧ್ಯಮ ವರ್ಗದ ಜನತೆಗೆ ತುಂಬಾನೆ ಅನುಕೂಲಕರ ಸಾರಿಗೆ ವ್ಯವಸ್ಥೆ ಎಂದರೇ ಅದು ರೈಲ್ವೆ ಎನ್ನಬಹುದು. ತುಂಬಾ ದೂರದ ಊರುಗಳಿಗೂ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದಾಗಿದೆ. ಇದೀಗ ರೈಲು ಟಿಕೆಟ್ ಬುಕ್ ಮಾಡುವ ಸಂಬಂಧ ಭಾರತೀಯ ರೈಲ್ವೆ ಇಲಾಖೆ ಹೊಸ ಕ್ರಮಗಳನ್ನು ತೆಗೆದುಕೊಂಡಿದೆ. ಎಲ್ಲಾ ಪ್ರಯಾಣಿಕರಿಗೂ ಟಿಕೆಟ್ ಸಿಗಬೇಕೆಂಬ ಉದ್ದೇಶದಿಂದ ಮಹತ್ತರವಾದ ಹೆಜ್ಜೆಯನ್ನು ಹಾಕಿದೆ ಎನ್ನಲಾಗಿದೆ.
ಜನರಿಗೆ ರೈಲ್ವೆ ಪ್ರಮುಖ ಸಾರಿಗೆಯಾಗಿದೆ ಎಂದು ಹೇಳಬಹುದು. ಜನರು ಬಸ್, ಕಾರು ಗಳಿಗಿಂತ ಹೆಚ್ಚಾಗಿ ರೈಲಿನಲ್ಲಿ ಪ್ರಯಾಣಿಸಲು ಬಯಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಭದ್ರತೆ, ಟಿಕೆಟ್ ದರ ಹಾಗೂ ಮೂಲ ಸೌಕರ್ಯಗಳು ಎನ್ನಬಹುದು. ಜೊತೆಗೆ ಬಹುತೇಕ ಪ್ರಯಾಣಿಕರು ದೀರ್ಘ ಪ್ರಯಾಣಕ್ಕೆ ರೈಲು ಮಾರ್ಗವನ್ನು ಅನುಸರಿಸುತ್ತಾರೆ. ದೂರದ ಊರುಗಳಿಗೆ ಪ್ರಯಾಣಿಸಲು ಕಾಯ್ದಿರಿಸಿದ ಟಿಕೆಟ್ ಗಳು ಸಿಗುವುದು ತುಂಬಾನೆ ಕಷ್ಟ. ಕನಿಷ್ಟ 30 ದಿನಗಳ ಮುಂಚೆಯೇ ಪ್ಲಾನ್ ಮಾಡಿದರೇ ಟಿಕೆಟ್ ಸಿಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಆದರೆ ಕೆಲವೊಂದು ಮಧ್ಯವರ್ತಿಗಳು ಹಾಗೂ ಏಜೆನ್ಸಿಗಳು ನಕಲಿ ಐಡಿಗಳನ್ನು ಬಳಸಿಕೊಂಡು ಟಿಕೆಟ್ ಬುಕ್ ಮಾಡುತ್ತಾರೆ. ಬಳಿಕ ಅವನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವಂತಹ ಪ್ರಕರಣಗಳೂ ಸಹ ನಡೆಯುತ್ತಿದೆ ಎನ್ನಬಹುದಾಗಿದೆ. ಅದರಲ್ಲೂ ರಜಾದಿನಗಳು, ಹಬ್ಬ ಹರಿದಿನಗಳ ಸಮಯದಲ್ಲೂ ಟಿಕೆಟ್ ಕನ್ಫರ್ಮ್ ಆದರೆ ಅದು ಪುಣ್ಯ ಎಂದೇ ಭಾವಿಸಬಹುದು. ಇದರ ಜೊತೆಗೆ ರೈಲ್ವೆ ಟಿಕೆಟ್ ಬುಕ್ ಮಾಡಲು IRCTC ವೆಬ್ ಸೈಟ್ ಸರ್ವರ್ ಸಹ ಬ್ಯುಸಿಯಾಗಿ ಸಮಸ್ಯೆಯಾಗುತ್ತಿರುತ್ತದೆ.
ಆದ್ದರಿಂದ ರೈಲ್ವೆ ಇಲಾಖೆ ಕೆಲವೊಂದು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದರಂತೆ ಎಲ್ಲರಿಗೂ ಸಮನಾದ ಅವಕಾಶ ನೀಡಲು ಭಾರತೀಯ ರೈಲ್ವೆ ಟಿಕೆಟ್ ಮಾರಾಟವನ್ನು ಪರಿಶೀಲನೆ ಮಾಡುತ್ತದೆ. ಬ್ಲಾಕ್ ಮಾರ್ಕೆಟ್ ನಲ್ಲಿ ಟಿಕೆಟ್ ಮಾರಾಟ ಮಾಡುವುದನ್ನು ನಿಲ್ಲಿಸಲು ಆರ್.ಪಿ.ಎಫ್ ಗೆ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ. ಆರ್.ಪಿ.ಎಫ್ ಕಾನೂನುಬಾಹಿರ ಚಟುವಟಿಕೆಗಳನ್ನು ನಿಲ್ಲಿಸಬೇಕು ಮತ್ತು ಎಲ್ಲರಿಗೂ ಸುಗಮ ರೈಲ್ವೆ ಸೇವೆಗಳನ್ನು ಒದಗಿಸಬೇಕು ಎಂದು ಖಡಕ್ ಸೂಚನೆಯನ್ನು ನೀಡಲಾಗಿದೆ. ಬ್ಲಾಕ್ ಮಾರ್ಕೆಟಿಂಗ್ ನಲ್ಲಿ ಟಿಕೆಟ್ ಮಾರಾಟ ಮಾಡುವವರಿಗೆ ಜೈಲು ಸೇರಿ ಕಠಿಣ ಶಿಕ್ಷೆಯಾಗಲಿದೆ. ಇದರ ಜೊತೆಗೆ AI ತಂತ್ರಜ್ಞಾನವನ್ನು ಸಹ ಬಳಸಲಾಗುತ್ತಿದೆಯಂತೆ. AI ನಕಲಿ ಟಿಕೆಟ್ ಗಳು ಹಾಗೂ ಅಪರಾಧಿಗಳನ್ನು ಗುರ್ತಿಸುತ್ತದೆ. ಮುಖ್ಯವಾಗಿ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ ಆಗುವುದು ತಡೆದರೇ ರೈಲು ಪ್ರಯಾಣಿಕರಿಗೆ ಒಳ್ಳೆಯ ಅನುಕೂಲವಾಗಲಿದೆ ಎನ್ನಬಹುದಾಗಿದೆ.