Uzbekistan: ಹೆಚ್ಚು ಸಂಬಳ ಗಳಿಸುವ ಆಸೆಗೆ ಉಜ್ಬೇಕಿಸ್ತಾನ್ ಗೆ ಹೋದ ಕನ್ನಡಿಗರು, ಅನ್ನ ನೀರು ಸಿಗದೇ ಪರದಾಟ?

ಅನೇಕ ಯುವಕರು ಕೆಲಸವನ್ನು ಹರಸಿ ತಮ್ಮ ಊರುಗಳನ್ನು ಬಿಟ್ಟು ನಗರಗಳು, ರಾಜ್ಯಗಳು ಸೇರಿದಂತೆ ವಿದೇಶಗಳಿಗೂ ಸಹ ಹೋಗುತ್ತಿರುತ್ತಾರೆ. ಅನೇಕರು ಬೇರೆ ದೇಶಗಳಿಗೆ ಹೋಗಿ ಒಳ್ಳೆಯ ಹುದ್ದೆಗಳನ್ನು ಪಡೆದು ಸಂಪಾದನೆ ಮಾಡಿದರೇ, ಮತ್ತೆ ಕೆಲವರು ಕೆಲಸಕ್ಕೆಂದು ಹೋಗಿ ತುಂಬಾನೆ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಇದೀಗ ಅಂತಹುದೇ ಸುದ್ದಿಯೊಂದು ಕೇಳಿಬಂದಿದೆ. ಲಕ್ಷ ಲಕ್ಷ ಸಂಬಳ ಪಡೆಯುವ ಆಸೆಯಿಂದ ಕೆಲಸ ಹರಸಿ ಉಜ್ಬೇಕಿಸ್ತಾನಕ್ಕೆ (Uzbekistan) ಹೋದ ಬೀದರ್‍ ಹಾಗೂ ಕಲಬುರ್ಗಿ ಮೂಲದ ಯುವಕರಿಗೆ ಸಂಕಷ್ಟ ಎದುರಾಗಿದೆ, ಉದ್ಯೋಗವೂ ಇಲ್ಲದೇ, ಅನ್ನ ನೀರು ಇಲ್ಲದೇ ಪರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಉದ್ಯೋಗ ಹರಸಿ ಕರ್ನಾಟಕದ ಬೀದರ್‍ ಹಾಗೂ ಕಲಬುರ್ಗಿ ಮೂಲದ 14 ಮಂದಿ ಯುವಕರು ಲಕ್ಷಾಂತರ (Uzbekistan) ಸಂಬಳದ ಆಸಗೆ ಉಜ್ಬೇಕಿಸ್ತಾನಕ್ಕೆ ತೆರಳಿದ್ದಾರೆ. ಲಕ್ಷ ಲಕ್ಷ ಸಂಬಳದ ಆಸೆಯನ್ನು ಹುಟ್ಟಿಸಿದ ಮಧ್ಯವರ್ತಿಗಳ ಮಾತುಗಳನ್ನು ನಂಬಿ ಅವರಿಗೆ ಲಕ್ಷ ಲಕ್ಷ ಹಣ ನೀಡಿ ಉಜ್ಬೇಕಿಸ್ತಾನಕ್ಕೆ ಹೋಗಿ ಮೋಸ ಹೋಗಿದ್ದಾರೆ. ಅಲ್ಲಿಗೆ ಹೋದ ಬಳಿಕ ಉದ್ಯೋಗವೂ ಇಲ್ಲದೇ, ತಿನ್ನಲು ಅನ್ನ ನೀರು ಸಹ ಇಲ್ಲದೇ ಆ ಯುವಕರು ಪರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಉಜ್ಬೇಕಿಸ್ತಾನಕ್ಕೆ ತೆರಳಿದವರಲ್ಲಿ ಬೀದರ್‍ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್ ಸೇರಿದಂತೆ ಈ ಭಾಗದ ಯುವಕರು (Uzbekistan) ಸೇರಿದ್ದಾರೆ ಎನ್ನಲಾಗಿದೆ.

ಇನ್ನೂ ತಮ್ಮ ಪರಿಸ್ಥಿತಿಯನ್ನು (Uzbekistan) ವಿಡಿಯೋ ಮಾಡಿ, ತಮ್ಮನ್ನು ಸ್ವದೇಶಕ್ಕೆ ಕರೆಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ. ಈ ವಿಡಿಯೋದಲ್ಲಿ (Uzbekistan) ಅವರು ನಾವು ಮಧ್ಯವರ್ತಿಗಳನ್ನು ನಂಬಿ (Uzbekistan) ಮೋಸ ಹೋಗಿದ್ದೇವೆ. ಇಲ್ಲಿ ಊಟ ಇಲ್ಲದೇ ಹಲವು ಜನ ಸತ್ತಿದ್ದಾರೆ. ಇದರಿಂದ ನಮಗೆ ಭಯವಾಗುತ್ತಿದೆ. ನಮ್ಮನ್ನು ಬೇಗ ಸ್ವದೇಶಕ್ಕೆ ಕರೆಸಿಕೊಳ್ಳಿ ಎಂದು ವಿಡಿಯೋ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ವಿದೇಶಗಳಲ್ಲಿ ಉದ್ಯೋಗ ಮಾಡಲು ಬಯಸಿದರೇ (Uzbekistan) ಎಲ್ಲವನ್ನೂ ಪರಿಶೀಲನೆ ಮಾಡಿ, ಅವರು ಮೋಸ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ಮುಂದೆ ಸಾಗುವುದು ಒಳಿತು ಎಂದು ಹೇಳಬಹುದಾಗಿದೆ.

Leave a Reply

Your email address will not be published. Required fields are marked *

Next Post

Crime News: ಕ್ಷುಲ್ಲಕ ಕಾರಣಕ್ಕೆ ಹೆಂಡತಿಯ ಕೊಲೆ, ಮೊಬೈಲ್ ಹಾಟ್ ಸ್ಪಾಟ್ ಆನ್ ಮಾಡದೇ ಇರುವುದೇ ತಪ್ಪಾಯ್ತಾ?

Sat Aug 3 , 2024
ಹೆಣ್ಣು, ಹೊನ್ನು, ಮಣ್ಣು ಈ ಮೂರು ವಿಚಾರಗಳಿಗಾಗಿ ಹೆಚ್ಚು ಕೊಲೆಗಳು ನಡೆಯುತ್ತಿರುತ್ತವೆ. ಇತ್ತೀಚಿಗೆ ಕೆಲವೊಂದು ಕ್ಷುಲ್ಲಕ ಕಾರಣಗಳಿಂದಲೂ ಕೊಲೆಗಳು, ಹಲ್ಲೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಕೆಲವೊಂದು ಪ್ರಕರಣಗಳಲ್ಲಿ ಊಟ ಬಡಿಸಿಲ್ಲ ಅಂತಾ, ನೀರು ಕೊಟ್ಟಿಲ್ಲ ಅಂತಾ ಕೊಲೆಗಳು ನಡೆದಿರುತ್ತವೆ. ಇದೀಗ ಅಂತಹುದೆ ಘಟನೆಯೊಂದು ನಡೆದಿದೆ. ಪತಿಯೊಬ್ಬ ಮೊಬೈಲ್ ಹಾಟ್ ಸ್ಪಾಟ್ ಆನ್ ಮಾಡದ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ (Crime News). ಸದ್ಯ ಆರೋಪಿ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. […]
Husband killed wife for wifi
error: Content is protected !!