ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ದಿನೇ ದಿನೇ ಭಾರಿ ಸಂಚಲನ ಸೃಷ್ಟಿಯಾಗುತ್ತಿದೆ. ಮುಡಾ ಹಗರಣ ಜೋರಾಗಿ ಚರ್ಚೆಯಾಗುತ್ತಿದೆ. ಗರ್ವನರ್ ರವರಿಂದ ಸಿಎಂ ಸಿದ್ದರಾಮಯ್ಯನವರಿಗೆ ನೊಟೀಸ್ ಸಹ ನೀಡಿದ್ದು, ಈ ಬಗ್ಗೆ ಸಹ ಆರೋಪಗಳ ಸುರಿಮಳೆಯಾಗುತ್ತಿದೆ. ಇದರ ಜೊತೆಗೆ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ-ಜೆಡಿಎಸ್ ಪಾದಯಾತ್ರೆಯನ್ನು ಸಹ ಹಮ್ಮಿಕೊಂಡಿದೆ. ಇದೀಗ ವಿಜಯೇಂದ್ರ ವಿರುದ್ದ ಡಿಕೆಶಿ (D K Shivakumar) ಗುಡುಗಿದ್ದಾರೆ. ವಿಜಯೇಂದ್ರ ಗಂಡಸೇ ಆಗಿದ್ದರೇ ದಾಖಲೆ ಕೊಡಿ, ನನ್ನ ಜೈಲಿಗೆ ಹಾಕಿಸೋಕೆ ಸಂಚು ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
(D K Shivakumar)ಬಿಜೆಪಿಯ ಅವಧಿಯಲ್ಲಿ ಮಾಡಿದ ಹಗರಣಕ್ಕೆ ಜವಾಬ್ದಾರಿ ಯಾರು, ಆಗ ಸಿಎಂ ಯಾರಾಗಿದ್ರು, ಯಾವ ಬ್ಯಾಂಕ್ ಗೆ ಹಣ ಹೋಗಿದೆ ಎಂಬ ಎಲ್ಲದರ ಬಗ್ಗೆ ಮಾಹಿತಿ ಕೊಡಬೇಕು. ಪಾದಯಾತ್ರೆಯಲ್ಲಿ ನಾವು ಪ್ರಶ್ನೆ ಕೇಳಿದ್ದಕ್ಕೆ ಅವರು ಉತ್ತರ ನೀಡಬೇಕು. ನಮ್ಮನ್ನು ಜೈಲಿಗೆ ಹಾಕಿಸಬೇಕು ಅಂತಾ ಸಂಚು ನಡೆಯುತ್ತಿದೆ. (D K Shivakumar)ನಾನು ಎಲ್ಲದಕ್ಕೂ ರೆಡಿಯಾಗಿದ್ದೇನೆ. ಕಾಂಗ್ರೇಸ್ ಪಕ್ಷದಲ್ಲಿ ನನ್ನಂತವರು ಬೇಕಾದಷ್ಟು ಮಂದಿ ಹುಟ್ಟಿಕೊಳ್ಳುತ್ತಾರೆ. ವಿಜಯೇಂದ್ರನ ವಿರುದ್ದ ಇರುವಂತಹ ಎಲ್ಲಾ ಆರೋಪಗಳನ್ನು ಬಿಚ್ಚಿ ಹೇಳುತ್ತೇನೆ. ಆಗ ಭ್ರಷ್ಟಾಚಾರದ ಪಿತಾಮಹ ಅಂದ್ರೇ ಏನು ಅಂತಾ ಹೇಳಬೇಕು. ವಿಜಯೇಂದ್ರಗೆ ತಾಕತ್ ಅನ್ನೋದು ಇದ್ರೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ಕೊಡಲಿ, ಗಂಡಸಾಗಿದ್ರೆ ಅವನು ಹೇಳಲಿ, ಅವನಿಗೆ ನಾನು ಗೌರವ ಕೊಡುತ್ತೇನೆ ಅವನನ್ನು ಪಾರ್ಟಿಯ ಅಧ್ಯಕ್ಷ ಅಂತಾ ಒಪ್ಪಿಕೊಳ್ಳುತ್ತೇನೆ (D K Shivakumar) ಎಂದು ಏಕವಚನದಲ್ಲೇ ಸಂಬೋಧಿಸಿ ಸವಾಲು ಹಾಕಿದ್ದರು.
ಇನ್ನೂ ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ (D K Shivakumar)ಕಾಂಗ್ರೇಸ್ ಪಕ್ಷದಿಂದ ಬಿಜೆಪಿ ನಾಯಕರ ನೈತಿಕತೆ ಪ್ರಶ್ನಿಸುವ ಸಭೆ ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ಬಿಜಿಪಿ ಅಧಿಕಾರ ಅವಧಿಯ ಅಕ್ರಮ, ಕೇಂದ್ರದಿಂದ ರಾಜ್ಯಕ್ಕಾಗಿರುವ ಅನ್ಯಾಯ, ಸಂವಿಧಾನ ಸಂಸ್ಥೆಗಳ ದುರ್ಬಳಕೆಗಳ ಬಗ್ಗೆ ಪ್ರಶ್ನೆ ಮಾಡುತ್ತೇವೆ. ಅವರ ಹಗರಣಗಳು, ಅನ್ಯಾಯಗಳ ಬಗ್ಗೆ ಪ್ರಶ್ನೆಗಳ ಮೂಲಕ ಜನರಿಗೆ ತಿಳಿಸುತ್ತೇವೆ. ನಮ್ಮೆಲ್ಲ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ ನೀಡಬೇಕು. ಬಿಜೆಪಿಯವರು ಎಲ್ಲೆಲ್ಲಿ ಪಾದಯಾತ್ರೆ ಮಾಡುತ್ತದಿದಾರೋ ಅಲ್ಲಿ ಒಂದೊಂದು ದಿನ ಮುಂಚಿತವಾಗಿಯೇ ನಮ್ಮ ಕಾಂಗ್ರೇಸ್ ಪಕ್ಷ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ಆಗಸ್ಟ್ 2ರಂದು ಬಿಡದಿ, 3ರಂದು ರಾಮನಗರ, 4ರಂದು ಚನ್ನಪಟ್ಟಣ, 5ರಂದು ಮದ್ದೂರು, 6ರಂದು ಮಂಡ್ಯದಲ್ಲಿ, 9ರಂದು ಮೈಸೂರಿನಲ್ಲಿ ಈ ಕಾರ್ಯಕ್ರಮ ಮಾಡಲಾಗುವುದು (D K Shivakumar) ಎಂದು ಮಾಹಿತಿ ನೀಡಿದ್ದಾರೆ.