ಹೆಣ್ಣು, ಹೊನ್ನು, ಮಣ್ಣು ಈ ಮೂರು ವಿಚಾರಗಳಿಗಾಗಿ ಹೆಚ್ಚು ಕೊಲೆಗಳು ನಡೆಯುತ್ತಿರುತ್ತವೆ. ಇತ್ತೀಚಿಗೆ ಕೆಲವೊಂದು ಕ್ಷುಲ್ಲಕ ಕಾರಣಗಳಿಂದಲೂ ಕೊಲೆಗಳು, ಹಲ್ಲೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಕೆಲವೊಂದು ಪ್ರಕರಣಗಳಲ್ಲಿ ಊಟ ಬಡಿಸಿಲ್ಲ ಅಂತಾ, ನೀರು ಕೊಟ್ಟಿಲ್ಲ ಅಂತಾ ಕೊಲೆಗಳು ನಡೆದಿರುತ್ತವೆ. ಇದೀಗ ಅಂತಹುದೆ ಘಟನೆಯೊಂದು ನಡೆದಿದೆ. ಪತಿಯೊಬ್ಬ ಮೊಬೈಲ್ ಹಾಟ್ ಸ್ಪಾಟ್ ಆನ್ ಮಾಡದ ಹೆಂಡತಿಯನ್ನೇ ಕೊಲೆ ಮಾಡಿದ್ದಾನೆ (Crime News). ಸದ್ಯ ಆರೋಪಿ ಪತಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಹೇಳಲಾಗಿದೆ.
ಅಂದಹಾಗೆ ಈ ಘಟನೆ ಜು.30 ರಂದು ಹರ್ಯಾಣದ ರೋಹ್ವಕ್ ಎಂಬಲ್ಲಿ ನಡೆದಿದೆ. ಪತಿಯೊಬ್ಬ ತನ್ನ ಹೆಂಡತಿಗೆ ಮೊಬೈಲ್ ಹಾಟ್ ಸ್ಪಾಟ್ ಆನ್ ಮಾಡಲು ಹೇಳಿದ್ದಾನೆ. ಅದಕ್ಕೆ ಹೆಂಡತಿ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಪತಿ ಹರಿತವಾದ ಆಯುಧದಿಂದ ಆಕೆಗೆ ಇರಿದು ಕೊಲೆ ಮಾಡಿದ್ದಾನೆ. ಇನ್ನೂ ಕೌಟುಂಬಿಕ ವೈಷಮ್ಯದಿಂದ ಕೊಲೆಯಾದ ಬಗ್ಗೆ ಪೊಲೀಸರು ಮಾಹಿತಿ ಪಡೆದ ಕೂಡಲೇ ಅಪರಾಧ ಸ್ಥಳಕ್ಕೆ ಧಾವಿಸಿದ್ದಾರೆ. ಮಹಿಳೆಯ ಶವವನ್ನು ವಶಕಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸಿದಾಗ ಶಾಕಿಂಗ್ (Crime News) ವಿಚಾರವೊಂದು ಹೊರಬಂದಿದೆ.

ರೋಹ್ವಕ್ ವ್ಯಾಪ್ತಿಯ ಮದೀನ ಎಂಬ ಗ್ರಾಮದ ನಿವಾಸಿ ಅಜಯ್ ಕುಮಾರ್ ಹಾಗೂ ಆತನ ಪತ್ನಿ ರೇಖಾ ಮನೆಯಲ್ಲಿ ಮೊಬೈಲ್ ಬಳಸುತ್ತಿದ್ದರು. ಅಜಯ್ ಮೊಬೈಲ್ ನಲ್ಲಿ ಇಂಟರ್ ನೆಟ್ ಖಾಲಿಯಾಗಿದೆ. ಬಳಿಕ ಆತ ತನ್ನ ಹೆಂಡತಿ ರೇಖಾಗೆ ಮೊಬೈಲ್ ನ ವೈ-ಫೈ ಹಾಟ್ ಸ್ಟಾಪ್ ಆನ್ ಮಾಡುವಂತೆ ಕೇಳಿದ್ದಾನೆ. (Crime News) ಈ ಕಾರಣದಿಂದ ಇಬ್ಬರ ನಡುವೆ ಜಗಳ ಶುರುವಾಗಿದೆ. ಜೊತೆಗೆ ಆಕೆ ವೈ-ಫೈ ಆನ್ ಮಾಡಲು ಒಪ್ಪಿಲ್ಲ. ಇದರಿಂದ ಜಗಳ ಜೋರಾಗಿದೆ. ರೇಖಾ ನನ್ನ ಮೊಬೈಲ್ ನಲ್ಲಿ ಡೇಟಾ ಕಡಿಮೆಯಿದೆ. ಆದ್ದರಿಂದ ವೈ-ಫೈ ಆನ್ ಮಾಡೊಲ್ಲ ಎಂದು ಹೇಳಿದ್ದಾಳೆ. ಇದರಿಂದ ಕೋಪಗೊಂಡ ಪತಿ ಹರಿತವಾದ ಆಯುಧದಿಂದ ಆಕೆಯನ್ನು ಕೊಲೆ (Crime News) ಮಾಡಿ ಪರಾರಿಯಾಗಿದ್ದ. ಈ ಸಂಬಂಧ ರೇಖಾ ಕುಟುಂಬದವರು ಹೇಳಿಕೆಯನ್ನು ಆಧರಿಸಿ ಪೊಲೀಸರು (Crime News) ದೂರು ದಾಖಲಿಸಿಕೊಂಡಿದ್ದರು. ಕೆಲವೇ ಗಂಟೆಗಳಲ್ಲೇ ಆರೋಪಿ ಅಜಯ್ ನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.