Dance Video – ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ವಿಡಿಯೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಅದರಲ್ಲಿ ಡ್ಯಾನ್ಸ್ ವಿಡಿಯೋಗಳು ಮಾತ್ರ ತುಂಬಾ ಸದ್ದು ಮಾಡುತ್ತವೆ. ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ತಂದೆ ಹಾಗೂ ಮಗಳು ರಸ್ತೆಯಲ್ಲಿ ನಡೆಯುತ್ತಾ ಮುದ್ದಾಗಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು ಭಾರಿ (Dance Video) ಸದ್ದು ಮಾಡುತ್ತಿದೆ. ಈ ಮುದ್ದಾದ ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.
ಸಾಮಾನ್ಯವಾಗಿ ತಂದೆಗೆ ಮಗಳು ಎಂದರೇ ತುಂಬಾನೆ ಅಚ್ಚುಮೆಚ್ಚು ಅಂತಾ ಹೇಳಬಹುದು. ತನಗೆ ಎಷ್ಟೇ ಕಷ್ಟಗಳಿದ್ದರೂ ತನ್ನ ಮಕ್ಕಳು ಚೆನ್ನಾಗಿರಬೇಕೆಂದು ಭಾವಿಸುತ್ತಾನೆ ತಂದೆ. ಪ್ರತಿಯೊಂದು ಹೆಣ್ಣು ಮಗುವಿಗೆ ಮೊದಲ ಹಿರೋ ತನ್ನ ಅಪ್ಪನೇ ಆಗಿರುತ್ತಾನೆ. ಇದಕ್ಕೆ ಈ ವಿಡಿಯೋ ಒಳ್ಳೆಯ ಉದಾಹರಣೆ ಎಂದೇ ಹೇಳಬಹುದು. ಸದ್ಯ ವೈರಲ್ (Dance Video) ಆಗುತ್ತಿರುವ ವಿಡಿಯೋದಲ್ಲಿ ಅಪ್ಪ ಹಾಗೂ ಪುಟಾಣಿ ಮಗಳು ನಡು ರಸ್ತೆಯಲ್ಲಿ ನೃತ್ಯ ಮಾಡುತ್ತಾ ಹೋಗುತ್ತಿದ್ದಾರೆ. ಈ ವಿಡಿಯೋ ನೋಡಿದ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಗಳನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವ ಸಮಯದಲ್ಲಿ ಖುಷಿಯಿಂದ ಅಪ್ಪ-ಮಗಳು ಹಾಡೊಂದಕ್ಕೆ ನೃತ್ಯ ಮಾಡುತ್ತಾ ಹೋಗುತ್ತಿದ್ದಾರೆ. ಅಪ್ಪನ ಕೈ ಹಿಡಿದ ಮಗಳು ಮುದ್ದಾಗಿ ಹೆಜ್ಜೆ ಹಾಕಿದ್ದಾಳೆ. ಈ ಮುದ್ದಾದ ಕ್ಷಣಗಳನ್ನು ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬರು (Dance Video) ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಈ ವಿಡಿಯೋವನ್ನು @christosavatarawakeing ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. (Dance Video) ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೀಕ್ಷಣೆ ಕಂಡಿದೆ. ಜೊತೆಗೆ ನೆಟ್ಟಿಗರೂ ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಲವಾರು ಕಾಮೆಂಟ್ ಗಳು ಸಹ ಹರಿದು ಬರುತ್ತಿವೆ. ಈ ಪೈಕಿ ಈ ವಿಡಿಯೋ ತುಂಬಾ ಅದ್ಬುತವಾಗಿದೆ ಎಂತಲೂ, (Dance Video) ಮುದ್ದಾಗಿದೆ ಎಂತಲೂ, ತಂದೆ ಮತ್ತು ಮಗಳು ತಮ್ಮ ನಡಿಗೆಯಲ್ಲಿಯೇ ನೃತ್ಯ ಮಾಡಿದ್ದು ಸೂಪರ್ ಎಂತಲೂ, ನಿಜಕ್ಕೂ ನೃತ್ಯ ಸೂಪರ್ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.