ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ (Sitharam Yechury) ಆರೋಗ್ಯ ಪರಿಸ್ಥಿತಿ ತೀವ್ರ ಗಂಭೀರವಾಗಿದ್ದು, ಏಮ್ಸ್ (AIMS) ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದೆ. ಕಳೆದ ತಿಂಗಳು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಗೆ ದಾಖಲಾಗಿದ್ದರು. ಇದೀಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಅವರಿಗೆ AIMS ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಪಿಐ-ಎಂ ಪಕ್ಷ ಹೇಳಿಕೆ ಬಿಡುಗಡೆ ಮಾಡಿದೆ.

ಸಿಪಿಎಂ ನಾಯಕ ಯೆಚೂರಿ ರವರಿಗೆ ಉಸಿರಾಟದ ಸಮಸ್ಯೆ ಕಾಡುತ್ತಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆಕ್ಸಿಜನ್ ಸಪೋರ್ಟ್‌ನಲ್ಲಿದ್ದಾರೆ. ವೈದ್ಯರ ತಂಡ ಅವರ ಸ್ಥೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಸಮಯದಲ್ಲಿ ಇದು ಗಂಭೀರವಾಗಿದೆ ಎಂದು ಸಿಪಿಐಎಂ ತಮ್ಮ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಲಾಗಿದೆ. ಕಳೆದ ಆ.19 ರಂದು ಏಮ್ಸ್ ನ ತುರ್ತು ವಿಭಾಗದಲ್ಲಿ ಯೆಚೂರಿಯವರನ್ನು ದಾಖಲು ಮಾಡಲಾಗಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ಅವರನ್ನು ಏಮ್ಸ್ ನಲ್ಲಿ ದಾಖಲು ಮಾಡಲಾಗಿತ್ತು. ನ್ಯುಮೋನಿಯಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಗಂಭೀರವಾದ ಸಮಸ್ಯೆಯಲ್ಲ ಎಂದು ತಿಳಿಸಲಾಗಿತ್ತು.
ಪೋಸ್ಟ್ ಇಲ್ಲಿದೆ ನೋಡಿ: https://x.com/cpimspeak/status/1833390537514049942
ಇನ್ನೂ ಯೆಚೂರಿ ರವರು ಮೊದಲಿಗೆ ಚಿಕಿತ್ಸೆಗೆ ಸಕಾರಾತ್ಮಕವಾಗಿ ಸ್ಪಂಧಿಸುತ್ತಿದ್ದರು. ಅವರನ್ನು ನಿಗಾದಲ್ಲಿಡಲಾಗಿತ್ತು. ಆದರೆ ಕಳೆದ ಗುರುವಾರ ಅವರ ಆರೋಗ್ಯ ಹದೆಗೆಟ್ಟ ಬಳಿಕ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಗೆ ಸ್ಥಳಾಂತರಿಸಲಾಗಿದೆ. ಶ್ವಾಸಕೋಶದ ಸೋಕಿನಿಂದ ಅವರಿಗೆ ಚಿಕಿತ್ಸೆ ನೀಡಲು ಏಮ್ಸ್ ನಲ್ಲಿ ದಾಖಲು ಮಾಡಲಾಗಿದೆ ಎಂದು ಯೆಚೂರಿಯವರ ಕುಟುಂಬದ ಮೂಲಗಳು ತಿಳಿಸಿದೆ. ಇನ್ನೂ ಸೀತಾರಾಂ ಯೆಚೂರಿ ರವರಿಗೆ 72 ವರ್ಷ ವಯಸ್ಸಾಗಿದೆ. ಸಿಪಿಐಎಂ ಪ್ರಧಾನ ಕಾರ್ಯದರ್ಶಿಯಾದ ಯೆಚೂರಿ 1992 ರಿಂದ ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯರಾಗಿದ್ದರು. 2005-2017ರವರೆಗೆ ಪಶ್ಚಿಮ ಬಂಗಾಳದಿಂದ ರಾಜ್ಯಸಭಾ ಸಂಸದರಾಗಿದ್ದರು.