ಭಾರತದಲ್ಲಿ ಸುಮಾರು ವರ್ಷಗಳ ಹಿಂದೆ ಟ್ರೆಂಡ್ ಸೃಷ್ಟಿಸಿದಂತಹ ಯಮಹಾ RX100 ಬೈಕ್ ಈಗಲೂ ಅದೇ ಟ್ರೆಂಡ್ ಹೊಂದಿದೆ ಎಂದು ಹೇಳಬಹುದು. ಅಂದಿನ ಯುವಕರಿಂದ ಹಿಡಿದು ಈಗಿನ ಯುವಕರವರೆಗೂ ಯಮಹಾ RX100 ಬೈಕ್ ಅಂದ್ರೇ ತುಂಬಾನೆ ಕ್ರೇಜ್ ಎಂದು ಹೇಳಬಹುದು. ಇದೀಗ ಮತ್ತೆ ಆಟೋ ಮೋಬೈಲ್ ಕ್ಷೇತ್ರದಲ್ಲಿ ಧೂಳೆಬ್ಬಿಸಲು ಯಮಹಾ RX100 ರೀ ಎಂಟ್ರಿ ಕೊಡಲಿದೆ. ಹೊಸ ಲುಕ್, ಆಧುನಿಕ ವೈಶಿಷ್ಟ್ಯಗಳೊಂದಿಗೆ 2024ನೇ ವರ್ಷದ ಅಂತ್ಯದೊಳಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಹೇಳಲಾಗಿದೆ.
ಬೈಕ್ ಲವರ್ಸ್ ಗೆ ಯಮಹಾ RX100 ಬೈಕ್ ಅಂದ್ರೇ ತುಂಬಾನೆ ಕ್ರೇಜ್ ಎಂದು ಹೇಳಬಹುದು. ಭಾರತದ ಆಗಿನ ಯುವಕರಿಂದ ಹಿಡಿದು ಇಂದಿನ ಯುವಕರವರೆಗೂ ಈ ಬೈಕ್ ಅಂದ್ರೇ ತುಂಬಾನೆ ಅಚ್ಚುಮೆಚ್ಚು ಎನ್ನಲಾಗಿದೆ. ಭಾರತೀಯ ಬೈಕರ್ಸ್ ಇತಿಹಾಸದಲ್ಲಿ ಅಳಿಸಲಾಗದಂತಹ ಚಾಪು ಮೂಡಿಸಿದೆ ಈ ಯಮಹಾ RX100 ಬೈಕ್. 1980ರ ದಶಕದಲ್ಲಿ ಈ ಯಮಹಾ RX100 ಬೈಕ್ ಪರಿಚಯವಾಗಿತ್ತು. ಕಡಿಮೆ ಸಮಯದಲ್ಲೇ ಹೆಚ್ಚು ಜನಪ್ರಿಯ ಬೇಡಿಕೆಯ ಬೈಕ್ ಗಳಲ್ಲಿ ಯಮಹಾ RX100 ಒಂದಾಯ್ತು. ಈ ಬೈಕ್ ವೇಗ ಹಾಗೂ ಸವಾರಿ ಅನುಭವ ಸವಾರರಿಗೆ ಮರೆಯಲಾಗದ ಅನುಭವ ನೀಡಿತ್ತು ಎಂದು ಹೇಳಬಹುದು.
ಈ ಬೈಕ್ ಯುವಕರ ಕನಸಿನ ಬೈಕ್ ಆಗಿತ್ತು ಎಂದು ಹೇಳಬಹುದು. ಈ ಬೈಕ್ ನಲ್ಲಿ 98cc, ಟು ಸ್ಕ್ರೋಕ್ ಎಂಜಿನ್ ಹೊಂದಿತ್ತು. ಅದರ ವೇಗ ಯುವಕರ ಹೃದಯಗಳನ್ನು ಕದ್ದಿತ್ತು. ಈ ಬೈಕ್ ನಲ್ಲಿ ಎದ್ದು ಕಂಡಿದ್ದು, ವಿಶ್ವಾಸಾರ್ಹತೆ ಹಾಗೂ ಕಡಿಮೆ ನಿರ್ವಹಣೆ ಜೊತೆಗೆ ಅತ್ಯುತ್ತಮ ಇಂಧನ ದಕ್ಷತೆ ಎಂದು ಹೇಳಬಹುದು. ಈ ಬೈಕ್ 1990ರಲ್ಲಿ ಸ್ಥಗಿತಗೊಂಡರೂ ಸಹ ಅದರ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಈಗಲೂ ಸಹ ಯಮಹಾ RX100 ಬೈಕ್ ಬೇಡಿಕೆಯನ್ನು ಮುಂದುವರೆಸಿದೆ. ಹಳೇಯ ಯಮಹಾ RX100 ಬೈಕ್ ಗಳಿಗೆ ಬೇಡಿಕೆಯಿದ್ದು, ಒಳ್ಳೆಯ ಕಂಡಿಷನ್ ನಲ್ಲಿರುವ ಬೈಕ್ ಗೆ 80 ಸಾವಿರದಿಂದ ಲಕ್ಷದವರೆಗೂ ಬೆಲೆಯಿದ್ದು, ಕೆಲವೊಂದು ಮಾರಾಟ ತಾಣಗಳಲ್ಲಿ ಸಿಗುತ್ತಿದೆ.
ಇನ್ನೂ ಸುಮಾರು ದಿನಗಳಿಂದ ಯಮಹಾ RX100 ಬೈಕ್ ಮತ್ತೆ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಎಂದು ಹೇಳಲಾಗಿತ್ತು. ವಿವಿಧ ರೀತಿಯ ಮಾರ್ಪಾಡುಗಳೊಂದಿಗೆ, ಆಧುನಿಕ ವೈಶಿಷ್ಠ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆಯಂತೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ಹೆಡ್‌ಲೈಟ್, ಟರ್ನ್-ಬೈ ಇಂಡಿಕೇಟರ್, ಎರಡೂ ಟೈರ್‌ಗಳಲ್ಲಿ ಡಿಸ್ಕ್ ಬ್ರೇಕ್‌ಗಳು, ಚಾರ್ಜಿಂಗ್ ಪೋರ್ಟ್, ವೈರ್‌ಲೆಸ್ ಚಾರ್ಜಿಂಗ್ ಪೋರ್ಟ್, ಅಲಾಯ್ ವೀಲ್ಸ್ ಸೇರಿದಂತೆ ಮತಷ್ಟು ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ 5 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ನೋಡಬಹುದು. ಮೈಲೇಜ್ ವಿಚಾರಕ್ಕೆ ಬಂದರೇ 35-40 ಕಿ.ಮೀ ಮೈಲೇಜ್ ಬರಲಿದೆ ಎನ್ನಲಾಗಿದೆ. ಈ ಬೈಕ್ ನ ಆರಂಭಿಕ ಬೆಲೆ 1.40 ಸಾವಿರದಿಂದ 1.50 ಸಾವಿರದವರೆಗೆ ಇರಬಹುದು ಎಂದು ಹೇಳಲಾಗಿದೆ. 2024ನೇ ವರ್ಷದ ಅಂತ್ಯದ ವೇಳೆಗೆ ಯಮಹಾ RX100 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಲಗ್ಗೆ ಇಡಲಾಗಿದೆ ಎಂದು ಹೇಳಲಾಗಿದ್ದು, ಈ ಕುರಿತು ಅಧಿಕೃತ ಮಾಹಿತಿ ಹೊರಬರಬೇಕಿದೆ.