ಗ್ಲೋಬಲ್ ಸ್ಟಾರ್, ಯಂಗ್ ಟೈಗರ್ ಎನ್.ಟಿ.ಆರ್ ಅಭಿನಯದ ಬಹುನಿರೀಕ್ಷಿತ ಸಿನೆಮಾ ದೇವರ ಅಪ್ಡೇಟ್ ಗಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ. ಇದೀಗ ಜೂ. ಎನ್.ಟಿ.ಆರ್ ಅಭಿಮಾನಿಗಳಿಗೆ ದೇವರ ಚಿತ್ರತಂಡ ಅಪ್ಡೇಟ್ ನೀಡಿದೆ. ಅದರಂತೆ ದೇವರ ಸಿನೆಮಾದ ಟ್ರೈಲರ್ (Devara Trailer) ಬಿಡುಗಡೆ ಮಾಡಿದ್ದು, ಸಿನೆಮಾದ ಮೇಲಿನ ಕ್ರೇಜ್ ದುಪ್ಪಟ್ಟಾಗುವಂತೆ ಮಾಡಿದೆ. ಜೊತೆಗೆ ಈ ಟ್ರೈಲರ್ ತುಣುಕುಗಳು, ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಸದ್ದು ಮಾಡುತ್ತಿವೆ.

ಸೌತ್ ಸಿನಿರಂಗದಲ್ಲಿ ಮೋಸ್ಟ್ ಅವೈಟೆಡ್ ಸಿನೆಮಾಗಳಲ್ಲಿ ದೇವರ ಸಿನೆಮಾ ಸಹ ಒಂದಾಗಿದೆ. ಈ ಸಿನೆಮಾಗಾಗಿ ಸಿನಿರಸಿಕರು ಕಾತುರಿಂದ ಕಾಯುತ್ತಿದ್ದಾರೆ. RRR ಸಿನೆಮಾದ ಬಳಿಕ ಯಂಗ್ ಟೈಗರ್ ಎನ್.ಟಿಆರ್ ನಟಿಸುತ್ತಿರುವ ಈ ಸಿನೆಮಾ ಈಗಾಗಲೇ ದೊಡ್ಡ ಮಟ್ಟದಲ್ಲಿಯೇ ಕ್ರೇಜ್ ಕ್ರಿಯೇಟ್ ಮಾಡಿದೆ. ಖ್ಯಾತ ನಿರ್ದೇಶಕ ಕೊರಟಾಲ ಶಿವಾ ಹಾಗೂ ಜೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ ನಲ್ಲಿ ಸೆಟ್ಟೇರಿದ ಈ ಸಿನೆಮಾ ಮೊದಲಿನಿಂದಲೂ ಕುತೂಹಲ ಹೆಚ್ಚಿಸಿಕೊಂಡೇ ಬರುತ್ತಿತ್ತು. ಈ ಸಿನೆಮಾ ಎರಡು ಭಾಗಗಳಲ್ಲಿ ತೆರೆಕಾಣಲಿದ್ದು, ಸೆ.27 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈಗಾಗಲೇ ಈ ಸಿನೆಮಾದ ಟೀಸರ್, ಪೋಸ್ಟರ್ ಗಳು ಸಿನೆಮಾದ ಮೇಲಿನ ನಿರೀಕ್ಷೆ ಮತಷ್ಟು ಏರುವಂತೆ ಮಾಡಿದೆ. ಇದೀಗ ಈ ಸಿನೆಮಾ ಟ್ರೈಲರ್ ರಿಲೀಸ್ ಆಗಿದ್ದು, ಅಭಿಮಾನಿಗಳ ಗೂಸ್ ಬಂಪ್ಸ್ ತರಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಸದ್ಯ ರಿಲೀಸ್ ಆದ ದೇವರ ಟ್ರೈಲರ್ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದೆ. ಬಹಳಷ್ಟು ಸಿನೆಮಾಗಳ ಬಳಿಕ ಮಾಸ್ ಲುಕ್ ನಲ್ಲಿ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಅಭಿಮಾನಿಗಳಿಗೆ ಗೂಸ್ ಬಂಪ್ಸ್ ತರಿಸುತ್ತಿದೆ ಎನ್ನಲಾಗಿದೆ. ಈ ಸಿನೆಮಾದಲ್ಲಿ ಜೂನಿಯರ್ ಎನ್.ಟಿ.ಆರ್ ಡುಯಲ್ ರೋಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಂದೆ ಹಾಗೂ ತಾಯಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎನ್.ಟಿ.ಆರ್ ರವರ ನಟನೆ, ಡೈಲಾಗ್ ಗಳು ಮೈಂಡ್ ಬ್ಲಾಕ್ ಆಗುವಂತಿದೆ ಎಂದು ಹೇಳಲಾಗುತ್ತಿದೆ. ಈ ಸಿನೆಮಾ ಹೈ ವೋಲ್ಟೋಜ್ ಸಿನೆಮಾ ಎಂದೇ ಕರೆಯಲಾಗುತ್ತಿದೆ.
ತಡ ಯಾಕೆ ನೀವು ಟ್ರೈಲರ್ ಒಮ್ಮೆ ನೋಡಿ : https://x.com/DevaraMovie/status/1833473367594147881
ಇನ್ನೂ ಈ ಸಿನೆಮಾದಲ್ಲಿ ಜೂನಿಯರ್ ಎನ್.ಟಿ.ಆರ್ ರವರ ಜೊತೆಗೆ ಬಾಲಿವುಡ್ ಹಾಟ್ ಬ್ಯೂಟಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನೆಮಾದ ಮೂರು ಸಿನೆಮಾಗಳು ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿದೆ. ಈ ಸಿನೆಮಾಗೆ ಅನಿರುಧ್ ಮ್ಯೂಸಿಕ ಕಂಪೋಸ್ ಮಾಡಿದ್ದಾರೆ. ಸೈಫ್ ಆಲಿ ಖಾನ್ ಸೇರಿದಂತೆ ಪ್ರಕಾಶ್ ರಾಜ್, ಶ್ರೀಕಾಂತ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನೆಮಾದಲ್ಲಿದೆ. ಈ ಸಿನೆಮಾ ತೆಲುಗು ಜೊತೆಗೆ ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಈ ಸಿನೆಮಾ ರಿಲೀಸ್ ಆಗಲಿದೆ.