Chikkaballapura News: ಗುಡಿಬಂಡೆ ಅಭಿವೃದ್ದಿಗಾಗಿ ಉಸ್ತುವಾರಿ ಸಚಿವರಿಗೆ ಮನವಿ ಪತ್ರ…..!

ಗುಡಿಬಂಡೆ: ಎಪಿಎಂಸಿ, ಕೆ.ಎಸ್.ಆರ್‍.ಟಿ.ಸಿ ಬಸ್ ಡಿಪೋ ಸೇರಿದಂತೆ ಗುಡಿಬಂಡೆ ತಾಲೂಕಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ (Chikkaballapura News) ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‍ ರವರಿಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀನರಸಿಂಹಗೌಡ, ಗುಡಿಬಂಡೆ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದೆ. ರಾಜಕಾರಣಿಗಳ ಬದ್ದತೆ ಹಾಗೂ ಇಚ್ಚಾ ಶಕ್ತಿಯ ಕೊರತೆ, ಆಡಳಿತ ವೈಖರಿ, ಕನಿಷ್ಟ ಮೂಲಭೂಥ ಸೌಕರ್ಯಗಳನ್ನು ಒದಗಿಸದೇ ಇರುವುದರಿಂದ ತಾಲೂಕು ಹಿಂದುಳಿಯಲು ಕಾರಣವಾಗಿದೆ. ನೀರು, ಶಿಕ್ಷಣ, ಆರೋಗ್ಯ ಬಡವರಿಗೆ ತುಂಬಾನೆ ಕಷ್ಟಕರವಾಗಿದೆ. ಅದರಲ್ಲೂ ಸೋಮೇನಹಳ್ಳಿ ಹೋಬಳಿ ಕೇಂದ್ರದಲ್ಲಿ ಸಹ ಸಾಕಷ್ಟು ಸಮಸ್ಯೆಗಳಿವೆ. ಅಲ್ಲಿನ ಸ್ಥಳೀಯರಿಗೆ ಆರೋಗ್ಯ, ಶಿಕ್ಷಣ ಸರಿಯಾಗಿದೆ ಸಿಗದೇ ಬೇರೆ ಪ್ರದೇಶಗಳಿಗೆ ವಲಸೆ ಹೋಗಬೇಕಿದೆ. ಈಗಲಾದರೂ ಜನಪ್ರತಿನಿಧಿಗಳು ಗುಡಿಬಂಡೆ ತಾಲೂಕು ಅಭಿವೃದ್ದಿಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಪ್ರಮುಖ ಬೇಡಿಕೆಗಳು:  ಗುಡಿಬಂಡೆ ತಾಲ್ಲೂಕು ಕೇಂದ್ರದಲ್ಲಿ ಎ.ಪಿ.ಎಂ.ಸಿ.ಕೃಷಿ ಉತ್ಪನ್ನ ಮಾರುಕಟ್ಟೆ, ಕೆ.ಎಸ್.ಆರ್.ಟಿ.ಸಿ. ಘಟಕ (ಡಿಪೋ), ಕೋಟೆ ಪ್ರವಾಸೋದ್ಯಮಕ್ಕೆ ಅಭಿವೃದ್ಧಿ ಪಡಿಸುವುದು, ಸೋಮೇನಹಳ್ಳಿ ಹೋಬಳಿ, ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪದವಿ ಪೂರ್ವ ಕಾಲೇಜು, ಪೋಲಿಸ್ ಠಾಣೆ ತೆರೆಯುವುದು. ಈ ವೇಳೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಕೃಷ್ಣಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಡು, ಜಿಲ್ಲಾ ಸಂಘಟನ ಕಾರ್ಯದರ್ಶ ಚಲಪತಿ, ಸಹ ಕಾರ್ಯದರ್ಶಿ ಚಲಪತಿ, ರಾವ್, ಶಂಕರಪ್ಪ ಸೇರಿದಂತೆ ಹಲವರಿದ್ದರು.

Leave a Reply

Your email address will not be published. Required fields are marked *

Next Post

Viral Video: ಈ ಪಾಕಿಸ್ತಾನಿ ಮುದುಕನ ದುರಾಸೆ ಕೇಳಿದ್ರೆ ನೀವು ತೂ ಅಂತಾ ಉಗಿತೀರಾ, ವೈರಲ್ ಆದ ವಿಡಿಯೋ.….!

Fri Jul 12 , 2024
ಸದ್ಯ ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಒಂದು ಹೊತ್ತಿನ ಊಟಕ್ಕೂ ಸಹ ಪರದಾಡುವಂತಿದೆ. ದಿನನಿತ್ಯ ಬಳಕೆಯ ವಸ್ತುಗಳು ಗಗನಕ್ಕೇರಿದೆ. ಆಗಾಗ ಭಾರತದ ವಿರುದ್ದ ಕಾಲು ಕೆರೆಯುತ್ತಾ ಬರುತ್ತಿರುತ್ತದೆ, ಅದೇ ರೀತಿ ಭಾರತ ಸಹ ಸರಿಯಾಗಿಯೇ ಬುದ್ದಿ ಕಲಿಸುತ್ತಿದೆ. ಇನ್ನೂ ಪಾಕಿಸ್ತಾನಿ ಮುದುಕನೋರ್ವನ ದುರಾಸೆಯ ಬಗ್ಗೆ ನೀವು ಕೇಳಿದ್ರೆ ಶಾಕ್ ಆಗುತ್ತೀರಾ ಜೊತೆಗೆ ತೂ ಎಂತಲೂ ಉಗಿಯುತ್ತೀರಾ, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ (Viral Video) […]
pak old man comments
error: Content is protected !!