ಬಹುನಿರೀಕ್ಷಿತ ಇಂಡಿಯನ್ 2 ಸಿನೆಮಾ ರಿಲೀಸ್ ಆಗಿದ್ದು, ಸದ್ಯ ಟ್ವಿಟರ್ ರಿವ್ಯೂ (Indian 2 Twitter Review) ಹೊರಬಂದಿದೆ. ಸೆನ್ಷೇಷನಲ್ ಡೈರೆಕ್ಟರ್ ಶಂಕರ್ ಹಾಗೂ ದೈತ್ಯ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಜೊತೆಗೆ ಪ್ರಮುಖ ನಿರ್ಮಾಣ ಸಂಸ್ಥೆ ರೆಡ್ ಜೈಯಿಂಟ್ ಬ್ಯಾನರ್ ನಡಿ ತೆರೆಕಂಡ ಭಾರಿ ಬಜೆಟ್ ಸಿನೆಮಾ ಇಂಡಿಯನ್ 2. 28 ವರ್ಷಗಳ ಬಳಿಕ ಭಾರತೀಯಡು ಸಿನೆಮಾದ ಸೀಕ್ವೆಲ್ ರಿಲೀಸ್ ಆಗಿದ್ದು, ಈ ಸಿನೆಮಾದ ಟ್ವಿಟರ್ ರಿವ್ಯೂ ಇದೀಗ ಹೊರಬಂದಿದೆ.
ಜು.12 ರಂದು ಇಂಡಿಯನ್-2 ತಮಿಳು ಸೇರಿದಂತೆ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ತೆರೆಕಂಡಿದೆ. 1996 ರಲ್ಲಿ ಭಾರತೀಯಡು ಎಂಬ ಸಿನೆಮಾ ತುಂಬಾನೆ ಸೆನ್ಷೇಷನ್ ಕ್ರಿಯೆಟ್ ಮಾಡಿತ್ತು. ಅಂದಿನ ಕಾಲದಲ್ಲಿ ಈ ಸಿನೆಮಾ ಒಂದು ಅದ್ಬುತ ಎಂದೇ ಬಿಂಬಿಸಲಾಗಿತ್ತು. ದೇಶದಲ್ಲಿ ಹೆಚ್ಚಾಗುತ್ತಿರುವ ಭ್ರಷ್ಟಾಚಾರದ ವಿರುದ್ದ ತೆಗೆದಂತಹ ಸಿನೆಮಾ ಇದಾಗಿತ್ತು ಎನ್ನಬಹುದು. ಒಂದು ಕಾಲದ ಸ್ವತಂತ್ರ ಯೋಧ ತಿರುಗಿ ಬಿದ್ದರೇ ಹೇಗಿರುತ್ತದೆ ಎಂಬ ಅಂಶದ ಮೇಲೆ ಭಾರತೀಯಡು ಸಿನೆಮಾ ಸೆಟ್ಟೇರಿದೆ. ಈ ಸಿನೆಮಾದಲ್ಲಿ ಕಮಲ್ ಹಾಸನ್ ಡ್ಯುಯಲ್ ರೋಲ್ ಮಾಡಿದ್ದರು. ಈ ಸಿನೆಮಾ ಒಳ್ಳೆಯ ಸಕ್ಸಸ್ ಕಂಡಿತ್ತು. ಇದೀಗ ಭಾರತೀಯಡು 2 (Indian 2 Twitter Review) ಸಿನೆಮಾ ಬಿಡುಗಡೆಯಾಗಿದೆ. ಭಾರಿ ನಿರೀಕ್ಷೆ ಹಾಗೂ ಭಾರಿ ಬಜೆಟ್ ನಲ್ಲಿ ಈ ಸಿನೆಮಾ ಸೆಟ್ಟೇರಿದೆ.
ಇನ್ನೂ ಇಂಡಿಯನ್ -2 ಸಿನೆಮಾ ಬಿಡುಗಡೆಯಾಗಿದ್ದು, ಇದೀಗ ಟ್ವಿಟರ್ ರಿವ್ಯೂ (Indian 2 Twitter Review) ಹೊರಬಂದಿದೆ. ಸಿನೆಮಾದ ಫಸ್ಟ್ ಆಫ್ ಆವರೇಜ್ ಆಗಿದೆಯಂತೆ. ಭಾರತೀಯಡು ಸಿನೆಮಾದಲ್ಲಿದ್ದ ಮ್ಯಾಜಿಕ್ ಇಂಡಿಯನ್-2 ಸಿನೆಮಾದ ಫಸ್ಟ್ ಆಫ್ ನಲ್ಲಿ ಕಾಣಿಸಿಲ್ಲವಂತೆ. ಅನಿರುದ್ ಮ್ಯೂಜಿಕ್ ತುಂಬಾ ಚೆನ್ನಾಗಿದೆಯಂತೆ. ಇಂಡಿಯನ್ 2 ವಿಜ್ಯು ಗ್ರಾಂಡಿಯರ್, ಅನಿರುದ್ ಮ್ಯೂಜಿಕ್ ಟೆರಿಫಿಕ್ ಆಗಿದೆಯಂತೆ. ಶಂಕರ್ ಸ್ಟೋರಿ ಟೆಲ್ಲಿಂಗ್ ಚೆನ್ನಾಗಿದೆ. ಎಂದಿನಂತೆ ಕಮಲ್ ಹಾಸನ್ ವಿಶ್ವರೂಪ ಪ್ರದರ್ಶನ ಮಾಡಿದ್ದಾರೆ. ಕೆಲವೊಂದು ದೃಶ್ಯಗಳು ಆವರೇಝ್ ಆಗಿದೆ ಎಂದು ಟ್ವಿಟರ್ ರಿವ್ಯೂ ಬರುತ್ತಿದೆ.
ಮೊದಲಾರ್ಧದಲ್ಲಿ ಒಂದೆರಡು ಆಕ್ಷನ್ ದೃಶ್ಯಗಳು ಪ್ರೇಕ್ಷರನ್ನು ರಂಜಿಸುತ್ತವೆಯಂತೆ. ಲಾಂಗ್ ಲೈನ್ ಡೈಲಾಗ್ ಗಳು, ಲಾಂಗ್ ಸನ್ನಿವೇಶಗಳು ನಿರಾಸೆ ತರಿಸುತ್ತವೆಯಂತೆ. ಸೆಂಕಡ್ ಹಾಫ್ ಪರವಾಗಿಲ್ಲ ಆದರೆ ಕ್ಲೈಮಾಸ್ ಟ್ವಿಸ್ಟ್ ಸಿನೆಮಾದ ಹೈಲೈಟ್ ಎನ್ನಲಾಗಿದೆ. ಸಿದ್ದಾರ್ಥ್, ರಕುಲ್ ಪ್ರೀತ್, ಎಸ್.ಜೆ.ಸೂರ್ಯ, ಬಾಬಿ ತಮ್ಮ ಪಾತ್ರಗಳಿಗೆ ನ್ಯಾಯ ಮಾಡಿದ್ದಾರೆ. ಒಟ್ಟಾರೆಯಾಗಿ ಭಾರತೀಯಡು-2 ಸಿನೆಮಾ ಚೆನ್ನಾಗಿದ್ದರೂ, ಭಾರತೀಯಡು-1 ಸಿನೆಮಾ ಮೀರಿಸಿಲ್ಲ. ಇದು ಶಂಕರ್ ರೇಂಜ್ ಸಿನೆಮಾ ಅಲ್ಲ ಎಂದು ಹೇಳಲಾಗಿದೆ. ಆದರೆ ಸಿನೆಮಾ ಬಿಡುಗಡೆಯಾಗಿ ಒಂದು ದಿನ ಕಳೆದ ಬಳಿಕ ಸಂಪೂರ್ಣ ರಿವ್ಯೂ (Indian 2 Twitter Review) ಬಳಿಕ ಸಿನೆಮಾ ಹೇಗಿದೆ ಎಂದು ತಿಳಿಯಲಿದೆ.